ETV Bharat / bharat

ಆಮ್ಲಜನಕ ಸಿಲಿಂಡರ್‌, ಸಾಂದ್ರಕಗಳನ್ನು ಹೊತ್ತು ತಂದ ಬ್ರಿಟಿಷ್ ಏರ್‌ವೇಸ್ ವಿಮಾನ - ಭಾರತಕ್ಕೆ ಯುಕೆ ನೆರವು

ಕೊರೊನಾ ಸಂಕಷ್ಟದ ಕಾಲದಲ್ಲಿ ಭಾರತದ ನೆರವಿಗೆ ನಿಂತಿರುವ ಪ್ರಪಂಚದ ನಾನಾ ದೇಶಗಳು ಆಮ್ಲಜನಕ ಸಿಲಿಂಡರ್‌ಗಳು ಮತ್ತು ಸಾಂದ್ರಕಗಳನ್ನು ಕಳುಹಿಸಿಕೊಡುತ್ತಿವೆ. ಈಗ ತುರ್ತು ಆರೋಗ್ಯ ಪರಿಕರಗಳನ್ನು ಹೊತ್ತ ಬೋಯಿಂಗ್ 777 - 200 ಬ್ರಿಟಿಷ್ ಏರ್‌ವೇಸ್ ವಿಮಾನ ಭಾರತ ತಲುಪಿದೆ.

british-airways-flies-aircraft-with-emergency-aid-to-delhi
ಭಾರತಕ್ಕೆ ಆಮ್ಲಜನಕ ಸಿಲಿಂಡರ್‌,ಸಾಂದ್ರಕಗಳನ್ನು ಹೊತ್ತು ತಂದ ಬ್ರಿಟಿಷ್ ಏರ್‌ವೇಸ್
author img

By

Published : May 6, 2021, 6:43 PM IST

ಮುಂಬೈ: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಬಿಕ್ಕಟ್ಟು ನಿವಾರಣೆಗಾಗಿ ದೆಹಲಿಗೆ ಆಮ್ಲಜನಕ ಸಿಲಿಂಡರ್‌ಗಳು ಮತ್ತು ಸಾಂದ್ರಕಗಳು ಸೇರಿದಂತೆ ತುರ್ತು ಆರೋಗ್ಯ ಪರಿಕರಗಳನ್ನು ಹೊತ್ತ ಬೋಯಿಂಗ್ 777-200 ಬ್ರಿಟಿಷ್ ಏರ್‌ವೇಸ್ ವಿಮಾನ ಭಾರತ ತಲುಪಿದೆ.

ಜನರ ಜೀವನದ ಮೇಲೆ ಪರಿಣಾಮ ಬೀರುವ ಕೊರೊನಾ ಸೋಂಕಿನ ವಿರುದ್ಧ ಬಲಿಷ್ಠವಾಗಿ ಹೊರಡಲು ನಾವು ಭಾರತದೊಂದಿಗೆ ಸದಾ ಇರುತ್ತೇವೆ ಎಂದು ಬ್ರಿಟಿಷ್​ ಸರ್ಕಾರ ಹೇಳಿದೆ. ಸಾರಿಗೆ ಸಹಾಯಕ್ಕೆ ಸಹಾಯ ಮಾಡುವ ಸ್ಥಿತಿಯಲ್ಲಿರುವುದು ನಮ್ಮ ಅದೃಷ್ಟ ಮತ್ತು ಅದಕ್ಕಾಗಿ ನಾನು ತುಂಬಾ ಹೆಮ್ಮೆ ಪಡುತ್ತೇನೆ. ವಿಮಾನಯಾನ ಮತ್ತು ಐಎಜಿ ಕಾರ್ಗೋದ ಸ್ವಯಂ ಸೇವಕರು ಈ ಕೆಲಸ ಮಾಡಲು ಮುಂದಾಗಿದ್ದಾರೆ ಎಂದು ಬ್ರಿಟಿಷ್ ಏರವೇಸ್​ ಸಿಇಒ ಸೀನ್ ಡಾಯ್ಲ್ ಹೇಳಿದ್ದಾರೆ.

ಬ್ರಿಟಿಷ್ ಏರವೇಸ್​ ಸೇರಿದಂತೆ ಕಾರ್ಪೊರೇಟ್ ವಲಯದ ಪಾಲುದಾರರ ಅದ್ಭುತ ಬೆಂಬಲದೊಂದಿಗೆ, ವಿಪತ್ತುಗಳಿಗೆ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು 14 ಪ್ರಮುಖ ಯುಕೆಯ ಸಂಸ್ಥೆಗಳು ಮುಂದೆ ಬಂದಿವೆ ಎಂದು ಡಿಇಸಿಯ ಸಿಇಒ ಸಲೇಹ್ ಸಯೀದ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.