ETV Bharat / bharat

ಮಂಟಪದಲ್ಲೂ ಗುಟ್ಕಾ ಅಗಿಯುತ್ತಿದ್ದ ವರ... ವಧುವಿನಿಂದ ಕಪಾಳಮೋಕ್ಷ - ಗುಟ್ಕಾ ತಿನ್ನುತ್ತಿದ್ದವನಿಗೆ ಹೊಡೆದ ವಧು

ಗುಟ್ಕಾ ತಿನ್ನಬೇಡಿ ಎಂದು ಹೇಳಿದರೂ, ಮಂಟಪದಲ್ಲಿ ವರ ಗುಟ್ಕಾ ಅಗೆಯುತ್ತಿದ್ದ ಕಾರಣ ಕುಪಿತಗೊಂಡ ವಧು ಕಪಾಳಕ್ಕೆ ಹೊಡೆದಿರುವ ಘಟನೆ ನಡೆದಿದೆ.

ಚಪ್ಪಲಿಯಿಂದ ಕಪಾಳಕ್ಕೆ ಬಾರಿಸಿದ ವಧು
ಚಪ್ಪಲಿಯಿಂದ ಕಪಾಳಕ್ಕೆ ಬಾರಿಸಿದ ವಧು
author img

By

Published : Aug 28, 2021, 6:40 PM IST

Updated : Aug 28, 2021, 7:11 PM IST

ದೇಶದ ಬಹುತೇಕ ಭಾಗಗಳಲ್ಲಿ ಗುಟ್ಕಾ, ಪಾನ್ ಮಸಾಲಾ ತಿನ್ನುವವರನ್ನು ನೋಡಿದ್ದೇವೆ. ಸಾಮಾನ್ಯವಾಗಿ ಗುಟ್ಕಾ, ಪಾನ್​ ತಿನ್ನುವವರಿಗೆ ಎಲ್ಲಿ ಉಗುಳಬೇಕು ಅನ್ನೋ ಕಾಳಜಿ ಇರಲ್ಲ. ಇದೇ ರೀತಿಯ ಒಂದು ಘಟನೆ ಮದುವೆ ಮಂಟಪದಲ್ಲಿ ನಡೆದಿದೆ. ಗುಟ್ಕಾ ತಿನ್ನುತ್ತಿದ್ದ ವರನಿಗೆ, ವಧು ಕಪಾಳಕ್ಕೆ ಹೊಡೆದಿರುವ ಘಟನೆ ನಡೆದಿದೆ.

ಮದುವೆಯ ಸಮಯದಲ್ಲಿ ವರನೊಬ್ಬ ಗುಟ್ಕಾ ತಿನ್ನುತ್ತಿದ್ದ. ಇದು ವಧುವಿಗೆ ಇಷ್ಟವಾಗಲಿಲ್ಲ, ನೀವು ಗುಟ್ಕಾ ಅಗಿಯಬೇಡಿ ಎಂದು ಹೇಳಿದಳು. ಆದರೆ, ವರ ಬಾಯಿ ತುಂಬಾ ಗುಟ್ಕಾ ತುಂಬಿಕೊಂಡು ಹ್ಮು, ಹ್ಮು ಎಂದು ಮಾತ್ರ ಹೇಳಿದ್ದಾನೆ. ಇದರಿಂದ ಕುಪಿತಗೊಂಡ ವಧು, ವರನ ಕಪಾಳಕ್ಕೆ ಬಾರಿಸಿದ್ದಾಳೆ

ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅನೇಕ ಜನರು ವಿಡಿಯೋಗಳನ್ನು ತಮ್ಮ ವಾಲ್​ಗಳಲ್ಲಿ ಹಂಚಿಕೊಂಡಿದ್ದು, ಸಾವಿರಾರು ಕಮೆಂಟ್​ಗಳು ಬಂದಿವೆ.

Last Updated : Aug 28, 2021, 7:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.