ETV Bharat / bharat

ಒಡಿಶಾ ರೈಲು ದುರಂತದಲ್ಲಿ 88 ಪ್ರಯಾಣಿಕರ ಪ್ರಾಣ ಉಳಿಸಿದ ಕೆಚ್ಚೆದೆಯ ವೀರರಿವರು! - ಶುಭಂಕರ್ ಜೆನಾ

ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಇಬ್ಬರು ಯುವಕರು ಆಪತ್ಬಾಂಧವರಂತೆ ಸ್ಥಳಕ್ಕೆ ಧಾವಿಸಿ ಬಂದು ಹಲವರ ಜೀವ ಕಾಪಾಡಿದ್ದಾರೆ. ಅವರ ಮಾತುಗಳು ಇಲ್ಲಿವೆ.

Odisha train accident
ಒಡಿಶಾ ರೈಲು ದುರಂತ: 88 ಪ್ರಯಾಣಿಕರನ್ನು ರಕ್ಷಿಸಿದ ಕೆಚ್ಚೆದೆಯ ವೀರರು
author img

By

Published : Jun 5, 2023, 8:26 PM IST

Updated : Jun 5, 2023, 8:40 PM IST

ಬಹನಾಗಾ (ಒಡಿಶಾ): ಶುಕ್ರವಾರ ಸಂಭವಿಸಿದ ಭೀಕರ ರೈಲು ಅಪಘಾತದ ನಂತರ ರಕ್ಷಣಾ ಕಾರ್ಯಾಚರಣೆಯಲ್ಲಿ ಮೊದಲಿಗರಾಗಿ ಪಾಲ್ಗೊಂಡಿದ್ದ ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ಎಂಬಲ್ಲಿನ ಇಬ್ಬರು ಕೆಚ್ಚೆದೆಯ ಯುವಕರಾದ ದೀಪಕ್ ರಂಜನ್ ಬೆಹರಾ ಮತ್ತು ಶುಭಂಕರ್ ಜೆನಾ ತಮ್ಮ ಅನುಭವವನ್ನು 'ಈಟಿವಿ ಭಾರತ'ದ ಜೊತೆ ಹಂಚಿಕೊಂಡಿದ್ದಾರೆ.

"ಅಂದು ಸಂಜೆ ಬಹನಗಾದ ಮೈದಾನದಲ್ಲಿ ನಾನು (ದೀಪಕ್ ರಂಜನ್ ಬೆಹರಾ) ಸ್ನೇಹಿತರೊಂದಿಗೆ ಆಟವಾಡುತ್ತಿದ್ದೆ. 6.45ರ ಸುಮಾರಿಗೆ ಭೂಕಂಪದಂತಹ ಭಯಾನಕ ಶಬ್ಧ ಕೇಳಿಸಿತು. ತಕ್ಷಣವೇ ಎಂಟು ಜನರ ತಂಡವಾಗಿ ನಾವು ಸ್ಥಳಕ್ಕೆ ಧಾವಿಸಿದೆವು. ಪರಿಸ್ಥಿತಿ ಅರಿತು ತಡ ಮಾಡದೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆವು. ಅಷ್ಟರಲ್ಲಿ ವಿಷಯ ತಿಳಿದು ಇಡೀ ಗ್ರಾಮವೇ ಅಲ್ಲಿಗೆ ತಲುಪಿತು. ಎಲ್ಲರೂ ಬೋಗಿಗಳಿಂದ ಜನರನ್ನು ಹೊರತರಲು ಪ್ರಾರಂಭಿಸಿದರು. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಸರ್ಕಾರಿ ನೆರವು ತಂಡಗಳು ಬರುವ ಮೊದಲೇ ರಾತ್ರಿ 9 ಗಂಟೆಯವರೆಗೆ ಎಲ್ಲ ಕಾರ್ಯವನ್ನು ಸ್ವತಃ ನಾವೇ ಮಾಡುತ್ತಿದ್ದೆವು."

"ನಾವು ಬೋಗಿಗಳನ್ನು ಹತ್ತಿದಾಗ ಎಲ್ಲ ಪ್ರಯಾಣಿಕರು ಒಬ್ಬರ ಮೇಲೊಬ್ಬರು ರಾಶಿ ಹಾಕಿದ ರೀತಿಯಲ್ಲಿ ಬಿದ್ದಿದ್ದರು. ಹಲವರು ರೈಲಿನ ಕೆಳಭಾಗದಲ್ಲಿ ಸಿಲುಕಿಕೊಂಡಿದ್ದರು. ಅವರು ತಮ್ಮನ್ನು ರಕ್ಷಿಸುವಂತೆ ಜೋರಾಗಿ ಕೂಗುತ್ತಿದ್ದರು. ರೈಲು ಬೋಗಿಯಲ್ಲಿ ಕತ್ತಲೆ ಆವರಿಸಿತ್ತು. ಎಲ್ಲವೂ ಕೂಡ ಅಲ್ಲಿ ಅದೃಶ್ಯವಾಗಿತ್ತು. ನಾವು ತಡ ಮಾಡದೇ ಬೋಗಿಯಲ್ಲಿ ಸಿಲುಕಿದ್ದ ಸಾಧವಾದಷ್ಟು ಜನರನ್ನು ಹೊರತೆಗೆದೆವು. ಕೆಲವರು ಅದಾಗಲೇ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಇತರರು ಚಲನರಹಿತರಾಗಿ ಒಂದೇ ಸ್ಥಳದಲ್ಲಿ ನಿಂತಿದ್ದರು. ನಮ್ಮ ತಂಡ 88 ಜನರ ಜೀವಗಳನ್ನು ಉಳಿಸಿತು. ಇಡೀ ಗ್ರಾಮದ ಜನರು ನೂರಾರು ಜನರನ್ನು ಉಳಿಸಿದರು."

"ಅಪಘಾತ ನಡೆದ ನಂತರದ ಮೊದಲ ಗಂಟೆಯನ್ನು 'ಗೋಲ್ಡನ್ ಅವರ್' ಎಂದು ಪರಿಗಣಿಸಲಾಗುತ್ತದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರೆ, ಅವರ ಜೀವ ಉಳಿಸಬಹುದು. ಅದಕ್ಕಾಗಿಯೇ ನಾವು ರಕ್ಷಿಸಿದ ಎಲ್ಲ ಜನರನ್ನು ಲಭ್ಯವಿರುವ ವಾಹನಗಳಿಗೆ ಸ್ಥಳಾಂತರಿಸಿದೆವು. ಕೆಲವರನ್ನು ದ್ವಿಚಕ್ರ ವಾಹನ ಮತ್ತು ಆಟೋಗಳಲ್ಲಿ ಹಾಗೂ ಸೈಕಲ್‌ಗಳಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಪಘಾತ ಸಂಭವಿಸಿದ ಒಂದು ಗಂಟೆಯ ನಂತರ ಸ್ಥಳಕ್ಕೆ ಆಂಬ್ಯುಲೆನ್ಸ್‌ಗಳು ಬಂದವು. ಇದಕ್ಕೂ ಮುನ್ನ ಅನೇಕರನ್ನು ಸ್ಥಳೀಯರು ತಮ್ಮ ವಾಹನಗಳಲ್ಲಿ ಆಸ್ಪತ್ರೆಗೆ ಕರೆದೊಯ್ದರು. ಇದರಿಂದ ಪ್ರಾಣಹಾನಿ ಕಡಿಮೆಯಾಯಿತು."

ಮನಕಲಕುವ ದೃಶ್ಯಗಳು ಕಾಡುತ್ತಿವೆ..: “ನಾವು ಹೋದ ಬೋಗಿಯಲ್ಲಿ ಗರ್ಭಿಣಿಯೊಬ್ಬರು ಪ್ರಯಾಣಿಕರ ಮಧ್ಯೆ ಸಿಲುಕಿಕೊಂಡಿದ್ದರು. ನಾವು ಆಕೆಯನ್ನು ಹೊರತರುವಲ್ಲಿ ಯಶಸ್ವಿಯಾದೆವು. ಆದರೆ, ಅವರ ಇಬ್ಬರು ಮಕ್ಕಳು ಬೋಗಿಯೊಳಗೇ ಉಳಿದುಕೊಂಡರು. ಅವರನ್ನು ಹೊರತರುವಂತೆ ಆ ಮಹಿಳೆ ಮನವಿ ಮಾಡಿದ ರೀತಿ ನಮ್ಮ ಕಣ್ಣಲ್ಲಿ ನೀರು ತರಿಸಿತು. ಆ ದಿನದ ಭೀಕರತೆ ಮತ್ತು ಮನಕಲಕುವ ದೃಶ್ಯಗಳು ಇನ್ನೂ ನಮ್ಮನ್ನು ಬೆಂಬಿಡದೆ ಕಾಡುತ್ತಿವೆ."

"ಘಟನೆ ತಿಳಿದು ಅನೇಕ ದತ್ತಿ ಸಂಸ್ಥೆಗಳು ಪರಿಹಾರ ಕಾರ್ಯದಲ್ಲಿ ಭಾಗವಹಿಸಿದವರಿಗೆ ಆಹಾರ ಮತ್ತು ಪಾನೀಯಗಳನ್ನು ಒದಗಿಸಿದವು. ರಿಲಯನ್ಸ್ ಫೌಂಡೇಶನ್​ನವರು ಎಳನೀರು, ಬಾಳೆಹಣ್ಣು ಮತ್ತು ಬ್ರೆಡ್ ಪ್ಯಾಕೆಟ್‌ಗಳನ್ನು ನೀಡಿದರು. ಒಡಿಶಾದ ಪರದೀಪ್ ಪೋರ್ಟ್ ಟ್ರಸ್ಟ್ ವೈದ್ಯಕೀಯ ಸೇವೆಗಳನ್ನು ಒದಗಿಸಿತು."

ಇದನ್ನೂ ಓದಿ: ಒಡಿಶಾ ರೈಲು ದುರಂತ, 124 ಶವಗಳ ಗುರುತೇ ಸಿಕ್ತಿಲ್ಲ: ಡಿಎನ್​ಎ ಪರೀಕ್ಷೆಗೆ ಮುಂದಾದ ಸರ್ಕಾರ

Last Updated : Jun 5, 2023, 8:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.