ETV Bharat / bharat

ಕೋವಿಡ್‌ ಹೋರಾಟದಲ್ಲಿ ದೇಶ ಮುನ್ನಡೆಸಿದ ಮೋದಿ ಕುರಿತ ಪುಸ್ತಕ ಇಂದು ಬಿಡುಗಡೆ

ಲೇಖಕಿ ಪ್ರಿಯಮ್ ಗಾಂಧಿ-ಮೋದಿ ಅವರು 'ಎ ನೇಷನ್ ಟು ಪ್ರೊಟೆಕ್ಟ್- ಲೀಡಿಂಗ್ ಇಂಡಿಯಾ ಥ್ರೂ ಕೋವಿಡ್ ಕ್ರೈಸಿಸ್' ಎಂಬ ಪುಸ್ತಕ ಬರೆದಿದ್ದು ಪ್ರಧಾನಿ ಮೋದಿ ಅವರು ಕೋವಿಡ್ ವಿರುದ್ಧ ಹೋರಾಡಲು ದೇಶವನ್ನು ಹೇಗೆ ಮುನ್ನಡೆಸಿದರು ಎಂಬುದನ್ನು ವಿವರಿಸಿದ್ದಾರೆ.

Book on PM Modi's leadership in India's fight against COVID-19 to be released today
ಕೋವಿಡ್ ವಿರುದ್ಧ ಪ್ರಧಾನಿ ಮೋದಿ ಹೋರಾಟ ಕುರಿತ ಪುಸ್ತಕ ಇಂದು ಬಿಡುಗಡೆ
author img

By

Published : Feb 18, 2022, 9:12 AM IST

ನವದೆಹಲಿ: ಕಳೆದ ಎರಡು ವರ್ಷಗಳಿಂದ ಕೋವಿಡ್ ವಿರುದ್ಧ ಭಾರತ ಹೋರಾಡುತ್ತಿದೆ. ಈ ಹೋರಾಟದಲ್ಲಿ ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಪ್ರಸ್ತುತಪಡಿಸುವ ಪುಸ್ತಕವೊಂದು ಶುಕ್ರವಾರ ಬಿಡುಗಡೆಯಾಗಲಿದೆ.

ಎ ನೇಷನ್ ಟು ಪ್ರೊಟೆಕ್ಟ್- ಲೀಡಿಂಗ್ ಇಂಡಿಯಾ ಥ್ರೂ ಕೋವಿಡ್ ಕ್ರಿಸಿಸ್ (A Nation To Protect- Leading India through Covid Crisis) ಎಂದು ಪುಸ್ತಕಕ್ಕೆ ಹೆಸರಿಡಲಾಗಿದ್ದು, ಪ್ರಿಯಮ್ ಗಾಂಧಿ- ಮೋದಿ ಅವರ ಮೂರನೇ ಪುಸ್ತಕ ಇದಾಗಿದೆ.

ಭಾರತದ ರಾಜಕೀಯ ನಾಯಕತ್ವ ಮತ್ತು ಜನರನ್ನು ರಕ್ಷಿಸುವ ಸರ್ಕಾರದ ಉದ್ದೇಶಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಮತ್ತು ರಾಜಕೀಯ ನಾಯಕರನ್ನು ನಾನು ಈ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದೇನೆ. ವಿವಿಧ ಕ್ಷೇತ್ರಗಳಿಂದ ಬರುತ್ತಿರುವ ನಕಾರಾತ್ಮಕ ಪ್ರತಿಕ್ರಿಯೆಗಳ ಹೊರತಾಗಿಯೂ ಪ್ರಧಾನಿ ಮೋದಿ ಸ್ಫೂರ್ತಿ, ಉತ್ಸಾಹದಿಂದಿರುತ್ತಾರೆ, ಪ್ರೇರೇಪಿಸುವಂತಿರುತ್ತಾರೆ. ಈ ಬಗ್ಗೆ ಅವರನ್ನು ಕೇಳಿದ್ದೇನೆ ಎಂದು ಪ್ರಿಯಮ್ ಗಾಂಧಿ-ಮೋದಿ ಹೇಳಿದ್ದಾರೆ.

ಇದನ್ನೂ ಓದಿ:ಅಪರಾಧ ಹಿನ್ನೆಲೆಯ ಭಾರತೀಯ ಸಂಸದರ ಬಗ್ಗೆ ಸಿಂಗಾಪುರ ಪ್ರಧಾನಿ ಹೇಳಿಕೆಗೆ ಭಾರತ ಖಂಡನೆ

ಈ ಪುಸ್ತಕವನ್ನು ಶುಕ್ರವಾರ ಮಧ್ಯಾಹ್ನ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಿದ್ದಾರೆ. ಮಾಂಡವಿಯಾ ಅವರ ಹೆಸರೂ ಕೂಡಾ ಪುಸ್ತಕದಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.