ETV Bharat / bharat

ಮನೆ ಮನೆಗೆ ಲಸಿಕೆ ಕಾರ್ಯಕ್ರಮದ ಬಗ್ಗೆ ಕೇಂದ್ರ ಗಮನಹರಿಸಲಿ; ಬಾಂಬೆ ಹೈಕೋರ್ಟ್

author img

By

Published : Jun 11, 2021, 6:51 PM IST

Updated : Jun 12, 2021, 10:42 AM IST

ಕೇರಳ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳು ಮನೆ ಮನೆಗೆ ಲಸಿಕೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಇಂತಹ ಕೆಲಸಗಳನ್ನು ರಾಜ್ಯಗಳು ಮಾಡುತ್ತಿರುವಾಗ ಕೇಂದ್ರ ಯಾಕೆ ಇದನ್ನು ಗಮನಿಸುತ್ತಿಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

Bombay HC asks Centre to look at Kerala, J&K pattern for door-to-door vaccination
ಮನೆ ಮನೆಗೆ ಲಸಿಕೆ ಕಾರ್ಯಕ್ರಮದ ಬಗ್ಗೆ ಕೇಂದ್ರ ಗಮನಹರಿಸಲಿ

ಮುಂಬೈ: ಕೇರಳ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಯಶಸ್ವಿಯಾಗಿ ನಡೆಸಿದ ಮನೆ-ಮನೆ-ಲಸಿಕೆ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಗಮನಿಸಿ ಅದರ ಪ್ರಸ್ತುತ ನೀತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬಾಂಬೆ ಹೈಕೋರ್ಟ್ ಸೂಚಿಸಿದೆ.

ಕೇರಳ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳು ಈಗಾಗಲೇ ಇಂತಹ ಕೆಲಸಗಳನ್ನು ಯಶಸ್ವಿಯಾಗಿ ನಡೆಸುತ್ತಿರುವಾಗ ಕೇಂದ್ರ ಯಾಕೆ ಇದನ್ನು ಪಾಲಿಸುತ್ತಿಲ್ಲ, ಅದರ ಸಮಸ್ಯೆ ಏನು ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಅವರ ವಿಭಾಗೀಯ ನ್ಯಾಯಪೀಠ ಹೇಳಿದೆ.

ಈ ವಾರದ ಆರಂಭದಲ್ಲಿ ನ್ಯಾಯಾಲಯವು, ಲಸಿಕೆ ಅಭಿಯಾನದ ಆರಂಭದಲ್ಲಿ ಹಿರಿಯ ರಾಜಕಾರಣಿಯೊಬ್ಬರು ತಮ್ಮ ಮನೆಯಲ್ಲೇ ಹೇಗೆ ಲಸಿಕೆ ಪಡೆದರು ಎಂದು ಬಿಎಂಸಿಯನ್ನು ಕೋರ್ಟ್ ಪ್ರಶ್ನಿಸಿದೆ. ಈ ಕಾರ್ಯಕ್ಕೆ ಬಿಎಂಸಿ ಅಥವಾ ರಾಜ್ಯ ಸರ್ಕಾರ ಹೊಣೆ ಹೊತ್ತುಕೊಳ್ಳಲೇಬೇಕು ಎಂದು ಹೇಳಿತ್ತು. ಈ ಸಂಬಂಧ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನ (ಬಿಎಂಸಿ) ವಕೀಲ ಅನಿಲ್ ಸಖಾರೆ ಪ್ರತಿಕ್ರಿಯಿಸಿದ್ದು, ಅವರಿಗೆ ಬಿಎಂಸಿಯಿಂದ ಲಸಿಕೆ ನೀಡಲಾಗಿಲ್ಲ ಎಂದಿದ್ದಾರೆ. ಇನ್ನು ಮಹಾರಾಷ್ಟ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸರ್ಕಾರಿ ವಾದಿ ಗೀತಾ ಶಾಸ್ತ್ರಿ ಅವರನ್ನು ನ್ಯಾಯಪೀಠ, ರಾಜಕಾರಣಿಗೆ ಯಾರು ಲಸಿಕೆ ನೀಡಿದರು ಎಂದು ಕೇಳಿದೆ. ಇದಕ್ಕೆ ಶಾಸ್ತ್ರಿ ಅವರು ಪ್ರತಿಕ್ರಿಯಿಸಲು ಒಂದು ವಾರದ ಸಮಯವನ್ನು ಕೋರಿದ್ದಾರೆ.

ಇದಕ್ಕೆ ಮುಖ್ಯ ನ್ಯಾಯಮೂರ್ತಿ ದತ್ತಾ ಪ್ರತಿಕ್ರಿಯಿಸಿ ಈ ಬಗ್ಗೆ ಮಾಹಿತಿ ತೆಗೆದುಕೊಳ್ಳಲು ಒಂದು ವಾರ ಬೇಕೆ? ಇದು ಆತಂಕಕಾರಿ. ಇದೊಂದು 'ನೀವು ನನಗೆ ಮನುಷ್ಯನನ್ನು ತೋರಿಸಿ ಮತ್ತು ನಾನು ನಿಮಗೆ ನಿಯಮವನ್ನು ತೋರಿಸುತ್ತೇನೆ' ಎಂಬ ಹಳೆಯ ಮಾತಿನಂತಿದೆ ಎಂದಿದ್ದಾರೆ.

ಇನ್ನು 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ, ಗಾಲಿಕುರ್ಚಿ ಅಥವಾ ಹಾಸಿಗೆ ಹಿಡಿದಿರುವ ವ್ಯಕ್ತಿಗಳಿಗೆ ಮನೆ-ಮನೆಗೆ ಲಸಿಕೆ ನೀಡುವಂತೆ ಕೋರಿ ವಕೀಲರಾದ ಧ್ರುತಿ ಕಪಾಡಿಯಾ ಮತ್ತು ಕುನಾಲ್ ತಿವಾರಿ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.

ಕೇರಳ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ಪ್ರತ್ಯೇಕ ರಾಜ್ಯಗಳು ಈಗಾಗಲೇ ಮನೆ-ಮನೆಗೆ ಲಸಿಕೆ ಹಾಕುವ ಕೆಲಸವನ್ನು ಮಾಡುತ್ತಿವೆ. ಆದರೆ, ಕೇಂದ್ರ ಸರ್ಕಾರ ಇದರ ಬಗ್ಗೆ ಯಾವ ನಿಲುವು ತಳೆದಿದೆ ಎಂದು ಪೀಠ ಪ್ರಶ್ನಿಸಿದೆ.

ಸಾಂಕ್ರಾಮಿಕ ಸಮಯದಲ್ಲಿ ಬಿಎಂಸಿಯಿಂದ ಉತ್ತಮ ಕೆಲಸ ಮಾಡಲಾಗುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ನ್ಯಾಯಾಲಯ ಹೇಳಿದೆ.

Last Updated : Jun 12, 2021, 10:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.