ನಳಂದಾ (ಬಿಹಾರ): ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನಳಂದಾದಲ್ಲಿ ನಡೆಸುತ್ತಿದ್ದ ಸಾರ್ವಜನಿಕ ಸಭೆ ವೇಳೆ ಭಾರಿ ಭದ್ರತೆ ಲೋಪವಾಗಿದೆ. ಮುಖ್ಯಮಂತ್ರಿಗಳಿದ್ದ 15ರಿಂದ 18 ಅಡಿಗಳ ದೂರದಲ್ಲೇ ಸ್ಫೋಟ ಸಂಭವಿಸಿತು. ಈ ಘಟನೆ ಸಂಬಂಧ ಈಗಾಗಲೇ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸ್ಫೋಟದ ಪರಿಣಾಮ ಕಾಲ್ತುಳಿತ ಉಂಟಾಗಿದೆ. ನಾಲ್ಕು ದಿನಗಳ ಪ್ರವಾಸಕ್ಕಾಗಿ ನಿತೀಶ್ ಕುಮಾರ್ ನಳಂದಾದ ಪ್ರವಾಸದಲ್ಲಿದ್ದಾರೆ. ಮಂಗಳವಾರ ಇಲ್ಲಿನ ಗಾಂಧಿ ಪ್ರೌಢಶಾಲೆ ಮೈದಾನದಲ್ಲಿ ಸಾರ್ವಜನಿಕರ ಸಂವಾದ ಸಭೆ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸ್ಥಳಕ್ಕೆ ಸಿಎಂ ಆಗಮಿಸಿದ ಕೆಲವೇ ಹೊತ್ತಲ್ಲಿ ಈ ಘಟನೆ ನಡೆದಿದೆ.
ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಕೆಲ ದಿನಗಳ ಹಿಂದೆಯೂ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ಉಂಟಾಗಿತ್ತು. ಮಾರ್ಚ್ 27ರಂದು ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆ ಅನಾವರಣದ ವೇಳೆ ಯುವಕನೋರ್ವ ನಿತೀಶ್ ಮೇಲೆ ದಾಳಿಗೆ ಯತ್ನಿಸಿದ್ದ.
ಇದನ್ನೂ ಓದಿ: ಯುಪಿ ಎಂಎಲ್ಸಿ ಚುನಾವಣೆ: 36ರಲ್ಲಿ 33 ಸ್ಥಾನ ಗೆದ್ದ ಬಿಜೆಪಿ, ಎಸ್ಪಿಗೆ ಮುಖಭಂಗ!