ಧನ್‌ಬಾದ್ (ಜಾರ್ಖಂಡ್): ಮಾರುಕಟ್ಟೆ ಪ್ರದೇಶವೊಂದರಲ್ಲಿ ಬಾಂಬ್ ಸ್ಫೋಟಗೊಂಡು ಕನಿಷ್ಠ ಐವರು ಗಂಭೀರವಾಗಿ ಗಾಯಗೊಂಡ ಘಟನೆ ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ನಡೆದಿದೆ. ಮೋಟಾರ್ ಸೈಕಲ್‌ನ ಟ್ರಂಕ್‌ನಲ್ಲಿ ಈ ಬಾಂಬ್ ಇಡಲಾಗಿತ್ತು. ಬೈಕ್ ಸವಾರ ಇಂಜಿನ್ ಸ್ಟಾರ್ಟ್ ಮಾಡಿದಾಗ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳು ಶಹೀದ್ ನಿರ್ಮಲ್ ಮಹ್ತೋ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಿಂಟು ಬರ್ನ್‌ವಾಲ್ ಎಂಬುವವರಿಗೆ ಬೈಕ್ನಲ್ಲಿ ಈ ಬಾಂಬ್ ಸ್ಫೋಟ ಸಂಭವಿಸಿದೆ. ಶಾಪಿಂಗ್‌ಗಾಗಿ ಮಾರುಕಟ್ಟೆಗೆ ಬಂದಿದ್ದರು. ಈ ಸ್ಫೋಟದಲ್ಲಿ ಅವರಿಗೆ ತೀವ್ರ ಸುಟ್ಟಗಾಯಗಳಾಗಿದ್ದು, ಹತ್ತಿರದ ಅಂಗಡಿ ಮಾಲೀಕರಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಈ ಘಟನೆಯು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಧನ್‌ಬಾದ್ ಭೇಟಿಗೆ ಕೇವಲ ಒಂದು ದಿನ ಮುಂಚಿತವಾಗಿ ಸಂಭವಿಸಿದೆ.
ಕಳೆದ ಗುರುವಾರ ಜನವರಿ 5ರಂದು ಲೋಹರ್ದಗಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಗೆ ಸೇರಿದ ಬಂಡುಕೋರನೊಬ್ಬ ಹತನಾದ. ಜಿಲ್ಲೆಯ ಬಗ್ರು ಪ್ರದೇಶದ ಕೊರ್ಬೋ ಕಾಡಿನಲ್ಲಿ ಈ ಕಾರ್ಯಾಚರಣೆ ನಡೆದಿದ್ದು, 18 ಜನರ ಪೈಕಿ ಇಬ್ಬರನ್ನು ಸೆರೆಹಿಡಿಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ತಂತ್ರ ವಿದ್ಯೆ.. ದೇವಿ ಮೂರ್ತಿ ಮುಂದೆ 4 ತಿಂಗಳ ಮಗು ಬಲಿ ಕೊಟ್ಟ ಅಮ್ಮ!