ETV Bharat / bharat

ಅಹಮದಾಬಾದ್​ಗೆ ಆಗಮಿಸಿದ ಸೋನು ಸೂದ್​: AAP ಸೇರ್ಪಡೆಯಾಗ್ತಾರಾ 'ರಿಯಲ್​ ಹೀರೋ'? - ಅಹಮದಾಬಾದ್ ಇತ್ತೀಚಿನ ಸುದ್ದಿ

ಸೋನು ಸೂದ್ ಶೀಘ್ರವೇ ಆಮ್​ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದೆ ಸೋನು ಸೂದ್ ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರನ್ನು ಭೇಟಿಯಾಗಿದ್ದರು

sonu sood
ಅಹಮದಾಬಾದ್​ಗೆ ಆಗಮಿಸಿದ ಸೋನು ಸೂದ್
author img

By

Published : Sep 23, 2021, 12:43 PM IST

ಗಾಂಧಿನಗರ(ಗುಜರಾತ್)​: ಬಾಲಿವುಡ್ ನಟ ಸೋನು ಸೂದ್ ಬುಧವಾರ ರಾತ್ರಿ ಅಹಮದಾಬಾದ್​ಗೆ ಆಗಮಿಸಿದ್ದು, ಸಿಂಧು ಭವನ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಆಮ್ ಆದ್ಮಿ ಪಕ್ಷದ ಕೆಲವು ನಾಯಕರನ್ನು ಭೇಟಿಯಾಗಿದ್ದಾರೆ.

ಇನ್ನು ಮೂಲಗಳ ಪ್ರಕಾರ ಸೋನು ಸೂದ್ ಶೀಘ್ರವೇ ಆಮ್​ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದೆ ಸೋನು ಸೂದ್ ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ಅವ​ರನ್ನು ಭೇಟಿಯಾಗಿದ್ದರು. ಕೇಜ್ರಿವಾಲ್​ ಭೇಟಿಯಾದ ಕೆಲ ದಿನಗಳಲ್ಲಿಯೇ ಸೋನು ಸೂದ್​ ಅವರ ಮನೆ, ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು.

ಇನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ "ಎರಡು ಪಕ್ಷಗಳು ರಾಜ್ಯಸಭಾ ಸ್ಥಾನವನ್ನು ನೀಡುವುದಾಗಿ ಹೇಳಿತ್ತು. ಆದರೆ, ನಾನು ಅದನ್ನು ತಿರಸ್ಕರಿಸಿದ್ದೇನೆ" ಎಂದು ಹೇಳಿಕೆ ನೀಡಿದ್ದರು.

ಒಂದು ಕಡೆ ಗುಜರಾತ್​ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷವೂ ಕಣಕ್ಕಿಳಿಯಲು ಸಿದ್ಧತೆ ನಡೆಸಿದೆ. ಒಂದು ವೇಳೆ ಸೋನು ಸೂದ್ ಆಮ್ ಆದ್ಮಿ ಪಕ್ಷಕ್ಕೆ ಸೇರಿದರೆ ಗುಜರಾತ್​ನಿಂದ ರಾಜಕೀಯ ಪ್ರವೇಶ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.