ETV Bharat / bharat

ಬಂಗಾಳದಲ್ಲಿ ನಿಲ್ಲದ ಹಿಂಸೆ: ಇಂದು ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ - Birbhum

ನಿನ್ನೆ ರಾತ್ರಿಯಿಂದ ಕಾಣೆಯಾಗಿದ್ದ ಪಶ್ಚಿಮ ಬಂಗಾಳದ ಬಿಜೆಪಿ ಕಾರ್ಯಕರ್ತ ಇದೀಗ ರಕ್ತಸಿಕ್ತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Body of a BJP Worker found recovered from Birbhum
ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ
author img

By

Published : Apr 6, 2021, 1:43 PM IST

ಬೀರ್​ಭೂಮ್​ (ಪಶ್ಚಿಮ ಬಂಗಾಳ): ರಾಜ್ಯದಲ್ಲಿ ಇಂದು ಮೂರನೇ ಹಂತದ ಚುನಾವಣೆ ನಡೆಯುತ್ತಿದ್ದು, ಇತ್ತ ಹಿಂಸಾಚಾರ ಮಾತ್ರ ನಿಂತಿಲ್ಲ. ಇಂದು ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆಯಾಗಿದ್ದಾರೆ.

ಬಂಗಾಳದ ಬೀರ್​ಭೂಮ್ ಜಿಲ್ಲೆಯ ದುಬ್ರಾಜ್‌ಪುರದ ಬಿಜೆಪಿ ಕಾರ್ಯಕರ್ತ ಪತಿಹಾರ್ ಡೋಮ್ ನಿನ್ನೆ ರಾತ್ರಿಯಿಂದ ಕಾಣೆಯಾಗಿದ್ದರು. ಆದರೆ ಇದೀಗ ರಕ್ತಸಿಕ್ತ ಸ್ಥಿತಿಯಲ್ಲಿ ಕೊಳವೊಂದರ ಬಳಿ ಅವರ ಮೃತದೇಹ ಪತ್ತೆಯಾಗಿದೆ.

Body of a BJP Worker found recovered from Birbhum
ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ

ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ತಾಯಿಯ ಬರ್ಬರ ಹತ್ಯೆ: ಟಿಎಂಸಿ ಗೂಂಡಾಗಳು ಕೃತ್ಯ ಆರೋಪ

ಪತಿಹಾರ್​ರನ್ನು ಕೊಲೆ ಮಾಡಲಾಗಿದ್ದು, ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಕಾರ್ಯಕರ್ತರು ಕೃತ್ಯ ಎಸಗಿರುವುದಾಗಿ ಕುಟುಂಬಸ್ಥರು, ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಘೋಷಣೆಯಾದಾಗಲಿಂದಲೂ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ಗಲಾಟೆ ಉಲ್ಬಣಿಸಿದ್ದು, ಪ್ರತಿದಿನ ಎರಡೂ ಪಕ್ಷಗಳ ಒಬ್ಬ ಕಾರ್ಯಕರ್ತರಾದರೂ ಸಾಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.