ಕಣ್ಣೂರು (ಕೇರಳ) : ಉತ್ತರ ಕೇರಳ ಜಿಲ್ಲೆಯ ಮುಜಪ್ಪಿಲಂಗಾಡ್‌ನ ಧರ್ಮಡೋಮ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ದೋಣಿಯೊಂದು ಅವಘಡಕ್ಕೆ ಸಿಲುಕಿದ ಘಟನೆ ಸಂಭವಿಸಿದೆ. ಸ್ಪರ್ಧೆಯ ದೋಣಿ ಅಚಾನಕ್ಕಾಗಿ ಮುಳುಗಿದ್ದು, ಅದರಲ್ಲಿದ್ದ 20 ಜನರನ್ನು ನೌಕಾಪಡೆಯ ಈಜುಗಾರರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಚಾಂಪಿಯನ್ಸ್ ಬೋಟ್ ಲೀಗ್-2023 ರೇಸ್ ಆಯೋಜಿಸಲಾಗಿತ್ತು. ಹಲವಾರು ದೋಣಿ ಮತ್ತು ಅದರ ಸ್ಪರ್ಧಾಳುಗಳು ಭಾವಹಿಸಿದ್ದರು. ಈ ವೇಳೆ ದೋಣಿಯೊಂದು ಸಮುದ್ರದಲ್ಲಿ ಮುಳುಗಡೆಯಾಗಿದೆ. ಅಲೆಗಳ ಹೊಡೆತಕ್ಕೆ ಸಿಲುಕಿ ಅದು ಮಗುಚಿತ್ತು. ದೋಣಿಯಲ್ಲಿ ಈಜು ಬಾರದ ಜನರೂ ಇದ್ದ ಕಾರಣ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಕಾರ್ಯಾಚರಣೆಗಿಳಿದ ನೌಕಾ ಪಡೆಯ ಈಜುಗಾರರು ಸಮುದ್ರಕ್ಕೆ ದುಮುಕಿ ಎಲ್ಲರನ್ನೂ ಸುರಕ್ಷಿತವಾಗಿ ದಡ ತಲುಪುವಂತೆ ಮಾಡಿದ್ದಾರೆ.
ಓಟದ ಸ್ಪರ್ಧೆಯ ವೇಳೆ ಜನರಿದ್ದ ದೋಣಿಗಳಲ್ಲಿ ಒಂದು ಪ್ರವಾಹಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿತು. ದಕ್ಷಿಣ ನೌಕಾ ಕಮಾಂಡ್‌ನ ಭಾರತೀಯ ನೌಕಾಪಡೆಯ ಈಜುಗಾರರ ತಂಡವು ಸುರಕ್ಷತೆ ಮತ್ತು ಭದ್ರತಾ ಕ್ರಮಗಳ ಮೇಲ್ವಿಚಾರಣೆಗೆ ನಿಯೋಜಿಸಲಾಗಿತ್ತು. ಅವಘಡ ಸಂಭವಿಸಿದೆ ತಕ್ಷಣವ ಕಾರ್ಯಾಚರಣೆ ನಡೆಸಲಾಯಿತು ಎಂದು ನೌಕಾಪಡೆ ತಿಳಿಸಿದೆ.
ಲೈಫ್ ಜಾಕೆಟ್ಗಳನ್ನು ದೋಣಿ ಮುಳುಗಿದತ್ತ ಎಸೆದು ಅಪಾಯದಲ್ಲಿದ್ದ ಜನರನ್ನು ರಕ್ಷಿಸಿದ ಚಿತ್ರಗಳನ್ನು ನೌಕಾಪಡೆ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಹಂಚಿಕೊಂಡಿದೆ. ಇದರಲ್ಲಿ ಕೆಲವರು ಬಾಲಕರು ಕೂಡ ಇದ್ದರು ಎಂದು ತಿಳಿದು ಬಂದಿದೆ.
36 ಮೀನುಗಾರರ ರಕ್ಷಣೆ: ಕೆಲ ದಿನಗಳ ಹಿಂದೆ ತಮಿಳುನಾಡು ಕರಾವಳಿಯಿಂದ ಸುಮಾರು 130 ನಾಟಿಕಲ್ ಮೈಲಿ ದೂರದ ಬಂಗಾಳಕೊಲ್ಲಿಯಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರನ್ನು ಭಾರತೀಯ ನೌಕಾಪಡೆಯ ಹಡಗು ಖಂಜರ್ ಸುರಕ್ಷಿತವಾಗಿ ವಾಪಸ್ ಕರೆತಂದಿತ್ತು. 30 ಗಂಟೆಗಳಿಗೂ ಹೆಚ್ಚು ಕಾಲ ಐಎನ್ಎಸ್ ಖಂಜಾರ್ ಕಾರ್ಯಾಚರಣೆ ನಡೆಸಿ ಮೀನುಗಾರರು ಹಾಗೂ ಮೂರು ಮೀನುಗಾರಿಕಾ ಹಡಗುಗಳನ್ನು ರಕ್ಷಿಸಿತ್ತು.
ಮೂರು ಹಡಗುಗಳಲ್ಲಿ ಸಮುದ್ರಕ್ಕೆ ಇಳಿದ ಮೀನುಗಾರರ ತಂಡವು ಸಮುದ್ರದಲ್ಲಿ ಉಂಟಾದ ಪ್ರಕ್ಷುಬ್ಧತೆಯಿಂದಾಗಿ ಅಲ್ಲಿಯೇ ಸಿಲುಕಿಕೊಂಡಿತ್ತು. ಬಳಿಕ, ಬಂಗಾಳಕೊಲ್ಲಿಯಲ್ಲಿ ಕಾರ್ಯಾಚರಣೆಗೆಂದೇ ನಿಯೋಜಿಸಲಾದ ಐಎನ್ಎಸ್ ಖಂಜಾರ್ ಹಡಗು ರಕ್ಷಣಾ ಕಾರ್ಯಚರಣೆಗಿಳಿದಿದ್ದು, ತಮಿಳುನಾಡು ಕರಾವಳಿಯಿಂದ ಸರಿಸುಮಾರು 130 ಕಿ.ಮೀ ದೂರ ಸಾಗಿ ಶಬರಿನಾಥನ್, ಕಲೈವಾಣಿ ಮತ್ತು ವಿ ಸಾಮಿ ಎಂಬ 3 ಮೀನುಗಾರಿಕಾ ಹಡಗುಗಳನ್ನು ಪತ್ತೆಹಚ್ಚಿದೆ. ಬಳಿಕ 36 ಮೀನುಗಾರರಿದ್ದ ಹಡಗುಗಳನ್ನು ತಮಿಳುನಾಡಿನ ನಾಗಪಟ್ಟಣಂ ಬಳಿ ದಡ ಸೇರಿಸಿದೆ.
ಹವಾಮಾನ ವೈಪರೀತ್ಯದಿಂದಾಗಿ ಎರಡು ದಿನಗಳಿಂದ ಮೀನುಗಾರರು ಊಟ, ಉಪಹಾರವಿಲ್ಲದೆ ಸಮುದ್ರದಲ್ಲಿ ಸಿಲುಕಿದ್ದರು. ಜೊತೆಗೆ, ಇಂಜಿನ್ ಸ್ಥಗಿತದಂತಹ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದ್ದರು. ಸುಮಾರು 48 ಗಂಟೆಗಳ ಕಾಲ ಮೀನುಗಾರರು ಸಮುದ್ರದಲ್ಲಿ ಸಿಲುಕಿಕೊಂಡಿದ್ದರು.
ಇದನ್ನೂ ಓದಿ: ಶ್ರೀಲಂಕಾ ಸಮುದ್ರ ಪ್ರವೇಶಿಸಲಿದೆ ಚೀನಾದ ಮತ್ತೊಂದು ಹಡಗು; ಭಾರತದೆದುರು ಬೀಜಿಂಗ್ ತೋಳ್ಬಲ ಪ್ರದರ್ಶನ!