ETV Bharat / bharat

ಭಾರತ ಜೋಡೋ ಯಾತ್ರೆ.. ಚರ್ಚೆಗೀಡಾದ ರಾಹುಲ್​​​​​ ಟೀ ಶರ್ಟ್​ ಬೆಲೆ: ಬಿಜೆಪಿ ಟ್ವೀಟ್​ ವ್ಯಂಗ್ಯ.. ಕಾಂಗ್ರೆಸ್​ ತಿರುಗೇಟು

ರಾಹುಲ್​ ಧರಿಸಿದ್ದ ಟೀ ಶರ್ಟ್​ನ ಬೆಲೆ ಬರೋಬ್ಬರಿ 41,000 ರೂಪಾಯಿಗಳಿಗಿಂತ ಹೆಚ್ಚು ಅಂತೆ. ಹೀಗಂತಾ ಬಿಜೆಪಿ ಶುಕ್ರವಾರ ಆರೋಪಿಸಿದ್ದು ರಾಹುಲ್​ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

bjps-swipe-at-rahul-over-price-of-his-t-shirt
ಚರ್ಚೆಗೀಡಾದ ರಾಹುಲ್​​​​​ ಟೀ ಶರ್ಟ್​ ಬೆಲೆ
author img

By

Published : Sep 9, 2022, 9:31 PM IST

ನವದೆಹಲಿ: ಕೇಂದ್ರ ಸರ್ಕಾರದ ದುರಾಡಳಿತ, ಬೆಲೆ ಏರಿಕೆ, ಆರ್ಥಿಕ ನೀತಿಗಳು ಸೇರಿದಂತೆ ಮೋದಿ ವೈಫಲ್ಯದ ವಿರುದ್ಧ ರಾಹುಲ್​​ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್​ ಭಾರತ್ ಜೋಡೋ ಯಾತ್ರೆ ನಡೆಸುತ್ತಿದೆ.

ಕಾಂಗ್ರೆಸ್​​ನ ಈ ಯಾತ್ರೆ ಇಂದು ಮೂರನೇ ದಿನವನ್ನು ಪೂರೈಸಿದೆ. ಈ ನಡುವೆ ಭಾರತ ಜೋಡೋ ಯಾತ್ರೆಯ ನೇತಾರ ರಾಹುಲ್ ಗಾಂಧಿ ಅವರು ಧರಿಸಿದ್ದ ಟೀ ಶರ್ಟ್‌ ಭಾರಿ ಸದ್ದು ಮಾಡುತ್ತಿದೆ. ಇದು ಬಿಜೆಪಿಯವರ ಕಣ್ಣಿಗೆ ಬಿದ್ದಿದೆ. ಅಷ್ಟೇ ಅಲ್ಲ ಇದನ್ನು ಟ್ರೋಲ್​ ಕೂಡಾ ಮಾಡಲಾಗುತ್ತಿದೆ. ರಾಹುಲ್​ ಧರಿಸಿದ್ದ ಟೀ ಶರ್ಟ್​ನ ಬೆಲೆ ಬರೋಬ್ಬರಿ 41,000 ರೂಪಾಯಿಗಳಿಗಿಂತ ಹೆಚ್ಚು ಅಂತೆ. ಹೀಗಂತಾ ಬಿಜೆಪಿ ಶುಕ್ರವಾರ ಆರೋಪಿಸಿದ್ದು ರಾಹುಲ್​ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

"ಭಾರತ್, ದೇಖೋ," ಎಂದು ಭಾರತೀಯ ಜನತಾ ಪಕ್ಷವು ತನ್ನ ಟ್ವಿಟರ್​​ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿ ರಾಹುಲ್​ ನಡೆಯನ್ನು ಟೀಕಿಸಿದೆ. ಈ ಸಂಬಂಧದ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದೆ. ಒಂದು ಕಡೆ ರಾಹುಲ್​ ಗಾಂಧಿ ಟೀ ಶರ್ಟ್​ ಧರಿಸಿರುವ ಚಿತ್ರ, ಇನ್ನೊಂದರಲ್ಲಿ ಅವರು ಧರಿಸಿರುವ ಟಿ-ಶರ್ಟ್‌ನ ಬೆಲೆಯನ್ನು ತೋರಿಸುವ ಚಿತ್ರವನ್ನು ಪೋಸ್ಟ್​ ಮಾಡಿ ಪ್ರಶ್ನೆ ಮಾಡಿದೆ.

ಬಿಜೆಪಿ ಆರೋಪಕ್ಕೆ ಕಾಂಗ್ರೆಸ್​​ನವರ ತಿರುಗೇಟು: ಬ್ಲೂಬೆರ್ರಿ ಟೀ ಶರ್ಟ್ ಬೆಲೆ 41,257 ರೂ. ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿಯ ಈ ಟ್ವೀಟ್​ಗೆ ಕಾಂಗ್ರೆಸಿಗರು ಗರಂ ಆಗಿದ್ದಾರೆ. ಕಾಂಗ್ರೆಸ್​ ಯಾತ್ರೆಯಿಂದ ಬಿಜೆಪಿಗರು ಗಲಿಬಿಲಿಗೊಂಡಿದ್ದು, ಈ ತರಹದ ಅನಗತ್ಯ ಟೀಕೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಇನ್ನೊಬ್ಬರು ಬಿಜೆಪಿ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿ ಇದು ಸಾರ್ವಜನಿಕರ ಹಣ ಅಲ್ಲ ಸ್ವಂತದ್ದು ಎಂದು ಉತ್ತರ ಕೊಟ್ಟಿದ್ದಾರೆ.

ಇದನ್ನು ಓದಿ:ರಾಹುಲ್ ಗಾಂಧಿ ಸಾರಥ್ಯದಲ್ಲಿ 3ನೇ ದಿನಕ್ಕೆ ಕಾಲಿಟ್ಟ 'ಭಾರತ್ ಜೋಡೋ ಯಾತ್ರೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.