ETV Bharat / bharat

ಬಿಜೆಪಿಯ ಸರಬ್ಜಿತ್ ಕೌರ್​ಗೆ ಚಂಡೀಗಢ ಮೇಯರ್​ ಪಟ್ಟ.. ಒಂದೇ ವೋಟ್​ನಿಂದ ಎಎಪಿಗೆ ಸೋಲು

author img

By

Published : Jan 8, 2022, 5:53 PM IST

Chandigarh Municipal Corporation Election result-2022: ಪಂಜಾಬ್​​ನ ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್​ನ ನೂತನ ಮೇಯರ್ ಆಗಿ ಬಿಜೆಪಿಯ ಸರಬ್ಜಿತ್ ಕೌರ್ ಆಯ್ಕೆಯಾಗಿದ್ದಾರೆ.

ಸರಬ್ಜಿತ್ ಕೌರ್

ಚಂಡೀಗಢ (ಪಂಜಾಬ್): ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್‌ ಮೇಯರ್​ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಸರಬ್ಜಿತ್ ಕೌರ್ ಅವರು ಗೆದ್ದು ಬೀಗಿದ್ದಾರೆ.

ಮೇಯರ್ ಹುದ್ದೆಗೆ ಬಿಜೆಪಿ ಹಾಗೂ ಆಮ್​ ಆದ್ಮಿ ಪಕ್ಷದ (ಎಎಪಿ) ನಡುವೆ ಭಾರಿ ಪೈಪೋಟಿ ನಡೆದಿತ್ತು. ಚಲಾವಣೆಯಾದ 28 ಮತಗಳ ಪೈಕಿ ಬಿಜೆಪಿಯ ಸರಬ್ಜಿತ್ ಕೌರ್ 14 ಮತಗಳನ್ನು ಗಳಿಸಿ ಮೇಯರ್​ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೇವಲ ಒಂದೇ ಒಂದು ಮತದಿಂದ ಎಎಪಿಯ ಅಂಜು ಕತ್ಯಾಲ್ ಸೋಲು ಕಂಡಿದ್ದಾರೆ. ಫಲಿತಾಂಶ ಪ್ರಕಟವಾದ ಕೂಡಲೇ ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್‌ನ ಅಸೆಂಬ್ಲಿ ಹಾಲ್‌ನಲ್ಲಿ ಆಮ್ ಆದ್ಮಿ ಪಕ್ಷದ ಕೌನ್ಸಿಲರ್‌ಗಳು ಗದ್ದಲ ಸೃಷ್ಟಿಸಿದರು.

ಇದನ್ನೂ ಓದಿ: ಪಂಚರಾಜ್ಯ ಫೈಟ್​: ಪಂಜಾಬ್, ಉತ್ತರಾಖಂಡ, ಗೋವಾದಲ್ಲಿ ಒಂದೇ ಹಂತ, ಮಣಿಪುರದಲ್ಲಿ 2 ಹಂತದ ವೋಟಿಂಗ್​​

ಕಳೆದ ತಿಂಗಳು ನಡೆದ ಚಂಡೀಗಢದ ಮುನ್ಸಿಪಲ್​​ ಕಾರ್ಪೂರೇಷನ್​​ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷ 35 ವಾರ್ಡ್‌ಗಳ ಪೈಕಿ 14 ಸೀಟ್​ಗಳನ್ನು ಗೆಲ್ಲುವ ಮೂಲಕ ಅದ್ಭುತ ಪ್ರದರ್ಶನವನ್ನು ನೀಡಿತ್ತು. ಮುಂದಿನ ತಿಂಗಳು ಫೆಬ್ರವರಿ 14ರಂದು ಪಂಜಾಬ್​ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿ ಜೊತೆಗೆ ಎಎಪಿ ಕೂಡ ಭರ್ಜರಿ ಸಿದ್ಧತೆ ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.