ETV Bharat / bharat

ಡಿ.25 ರಂದು ವಾಜಪೇಯಿ ಜನ್ಮದಿನ: ದೇಶಾದ್ಯಂತ ವಿವಿಧ ಕಾರ್ಯಕ್ರಮ ಆಯೋಜನೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 99 ನೇ ಜನ್ಮದಿನದ ಸಂದರ್ಭದಲ್ಲಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬಿಜೆಪಿ ಪಕ್ಷವು ಮುಂದಾಗಿದೆ.

Vajpayee
ವಾಜಪೇಯಿ ಜನ್ಮದಿನ
author img

By ETV Bharat Karnataka Team

Published : Dec 16, 2023, 9:30 AM IST

ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 99 ನೇ ಜನ್ಮದಿನವನ್ನು ಡಿಸೆಂಬರ್ 25 ರಂದು ಉತ್ತಮ ಆಡಳಿತ ದಿನವನ್ನಾಗಿ ಆಚರಿಸುತ್ತಿದ್ದು, ಈ ಬಾರಿ ಭಾರತೀಯ ಜನತಾ ಪಕ್ಷವು ದೇಶಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲು ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಟಲ್ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪ್ರತಿ ಬೂತ್‌ಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲು ಮತ್ತು ಮಾಜಿ ಪ್ರಧಾನಿಯವರ ಅದ್ಭುತ ವ್ಯಕ್ತಿತ್ವ, ಅವರು ಮಾಡಿದ ಕೆಲಸದ ಬಗ್ಗೆ ಚರ್ಚಿಸಲು ದೇಶಾದ್ಯಂತ ಪಕ್ಷದ ಪದಾಧಿಕಾರಿಗಳು ಮತ್ತು ರಾಜ್ಯಾಧ್ಯಕ್ಷರನ್ನು ಕೇಳಿಕೊಂಡಿದ್ದಾರೆ.

ಅತ್ಯುತ್ತಮ ಆಡಳಿತದಿಂದ ಅಚ್ಚಳಿಯದ ಛಾಪು ಮೂಡಿಸಿರುವ ಮಾಜಿ ಪ್ರಧಾನಮಂತ್ರಿ ವಾಜಪೇಯಿ ಅವರ ಜನ್ಮದಿನವನ್ನು ಗುಡ್‌ ಗವರ್ನೆನ್ಸ್‌ ಡೇ ಎಂದು ಕೇಂದ್ರ ಸರ್ಕಾರ ಆಚರಣೆ ಮಾಡುವ ಮೂಲಕ ಪ್ರತಿವರ್ಷ ಅವರಿಗೆ ಗೌರವ ಸಲ್ಲಿಸುತ್ತಾ ಬಂದಿದೆ. ಈ ಬಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಪ್ರತಿ ಬೂತ್‌ನಲ್ಲಿ ಸೃಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಪಕ್ಷ ನಡೆಸುವ ಆರು ಬೂತ್ ಮಟ್ಟದ ಕಾರ್ಯಕ್ರಮಗಳಲ್ಲಿ ವಾಜಪೇಯಿ ಅವರ ಜನ್ಮ ದಿನಾಚರಣೆ ಕೂಡ ಒಂದಾಗಿದೆ.

ಪ್ರತಿ ಬೂತ್‌ನಲ್ಲಿ ಸರ್ಕಾರದ ಯೋಜನೆಗಳು, ಸಾಧನೆಗಳು ಮತ್ತು ಉತ್ತಮ ಆಡಳಿತದ ಬಗ್ಗೆ ಚರ್ಚೆ ನಡೆಸಲಾಗುವುದು. ಪ್ರತಿ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರ, ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳ ಯೋಜನೆಗಳು ಮತ್ತು ಸಾಧನೆಗಳ ಬಗ್ಗೆ ಚರ್ಚೆ ನಡೆಸುವ ಜೊತೆಗೆ ಬಡವರ ಕಲ್ಯಾಣಕ್ಕಾಗಿ ಉತ್ತಮ ಆಡಳಿತ ನಡೆಸಲಾಗುವುದು. ಈ ಮಧ್ಯೆ, ಜನರನ್ನು ಪ್ರೇರೇಪಿಲು "ಅಭಿವೃದ್ಧಿ ಹೊಂದಿದ ಭಾರತದ ಬ್ರಾಂಡ್ ಅಂಬಾಸಿಡರ್" ಕುರಿತು ನಮೋ ಅಪ್ಲಿಕೇಶನ್‌ನಲ್ಲಿ ಅಭಿಯಾನ ನಡೆಯುತ್ತಿದೆ.

ಉತ್ತಮ ಆಡಳಿತದ ದಿನದ ಉದ್ದೇಶ : ವಿವಿಧ ಸರ್ಕಾರಿ ಕಾರ್ಯಕ್ರಮಗಳು ಮತ್ತು ಸೇವೆಗಳಿಗೆ ಸಾರ್ವಜನಿಕ ಪ್ರವೇಶವನ್ನು ಹೆಚ್ಚಿಸುವುದು ಉತ್ತಮ ಆಡಳಿತ ದಿನದ ಉದ್ದೇಶವಾಗಿದೆ. ದೇಶದ ನಿವಾಸಿಗಳನ್ನು ಸರ್ಕಾರವು ನ್ಯಾಯಯುತವಾಗಿ ಪರಿಗಣಿಸುತ್ತದೆ ಮತ್ತು ಅವರು ವಿವಿಧ ಸರ್ಕಾರಿ ಸೇವೆಗಳ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಈ ದಿನವನ್ನು ಆಚರಿಸಲಾಗುತ್ತದೆ.

ವಾಜಪೇಯಿ ಅವರು ಡಿಸೆಂಬರ್ 25, 1924 ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದ್ದರು ಮತ್ತು ಮೂರು ಬಾರಿ ರಾಷ್ಟ್ರದ ಪ್ರಧಾನಿಯಾಗಿ ಆಯ್ಕೆಯಾದರು. 1998-2004ರ ವರೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರವನ್ನು ಮುನ್ನಡೆಸಿದ ವಾಜಪೇಯಿ ಅವರು ಬಿಜೆಪಿಯಿಂದ ದೇಶದ ಪ್ರಧಾನಿಯಾದ ಮೊದಲ ನಾಯಕರಾಗಿದ್ದಾರೆ. ಮೂರು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಅವರು, 1996ರಲ್ಲಿ ಮೊದಲ ಬಾರಿಗೆ ಮತ್ತು 1998 ರಿಂದ 2004 ನಡುವೆ ಎರಡು ಸಲ ಪ್ರಧಾನಿಯಾಗಿದ್ದರು.

ಇದನ್ನೂ ಓದಿ : ಮುಂಬೈ ಸಮುದ್ರ ಸೇತುವೆಗೆ ಸಾವರ್ಕರ್, ಹಾರ್ಬರ್ ಮಾರ್ಗಕ್ಕೆ ವಾಜಪೇಯಿ ಹೆಸರಿಡಲು ತೀರ್ಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.