ETV Bharat / bharat

ಭರ್ಜರಿ ಗೆಲುವು: ಡಿ. 11 ಅಥವಾ 12 ರಂದು ಮತ್ತೆ ಗುಜರಾತ್ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ

ಸಿಎಂ ಅಭ್ಯರ್ಥಿ ಭೂಪೇಂದ್ರ ಪಟೇಲ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ ಸುಮಾರು 1.16 ಲಕ್ಷ ಮತಗಳ ಅಂತರದಲ್ಲಿ ಘಟ್ಲೋಡಿಯಾ ಕ್ಷೇತ್ರದಿಂದ ಸತತ 2ನೇ ಬಾರಿಗೆ ಗೆದ್ದಿದ್ದಾರೆ.

bhupendra patel
ಭೂಪೇಂದ್ರ ಪಟೇಲ್
author img

By

Published : Dec 8, 2022, 1:41 PM IST

Updated : Dec 8, 2022, 2:22 PM IST

ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸುತ್ತಿದ್ದಂತೆ ಬಿಜೆಪಿಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ರಾಜಕೀಯ ಚಟುವಟಿಕೆ ಬಿರುಸಿನಿಂದ ಸಾಗಿದೆ.

ಸಿಎಂ ಭೂಪೇಂದ್ರ ಪಟೇಲ್ ಅವರ ನೇತೃತ್ವದ ಹೊಸ ಸಂಪುಟದ ಪ್ರಮಾಣವಚನ ಸ್ವೀಕರಿಸುವ ಸಮಾರಂಭ ಡಿಸೆಂಬರ್ 11 ಅಥವಾ 12 ರಂದು ಹಮ್ಮಿಕೊಳ್ಳುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಭೂಪೇಂದ್ರ ಪಟೇಲ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ ಸುಮಾರು 1.16 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಘಟ್ಲೋಡಿಯಾ ನಗರ ಕ್ಷೇತ್ರದಿಂದ ಸತತ ಎರಡನೇ ಗೆಲುವಿನ ನಗೆ ಬೀರಿದ್ದಾರೆ.

ಘಟ್ಲೋಡಿಯಾ ಕ್ಷೇತ್ರ: ಗಾಂಧಿನಗರ ಲೋಕಸಭೆ ಕ್ಷೇತ್ರದ ಪ್ರಬಲ ಪಾಟಿದಾರ್ ಸಮುದಾಯದ ಇರುವ ಘಟ್ಲೋಡಿಯಾ ಕ್ಷೇತ್ರವೂ ಗುಜರಾತ್‌ಗೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಹೆಗ್ಗಳಿಕೆ ಪಡೆದಿದೆ. ಪ್ರಸ್ತುತ ಸಿಎಂ ರೇಸ್ ನ ಭೂಪೇಂದ್ರ ಪಟೇಲ್ ಮತ್ತು ಮಾಜಿ ಸಿಎಂ ಆನಂದಿಬೆನ್ ಪಟೇಲ್ ಗೆಲುವು ಜಯ ಸಾಧಿಸುವುದರೊಂದಿಗೆ ನೆಲೆ ಭದ್ರಪಡಿಸಿಕೊಂಡಿದ್ದರು. ಮತ್ತೆ ಇದು ಬಿಜೆಪಿಯ ಭದ್ರಕೋಟೆಯಾಗಿ ಮುಂದುವರಿದಿದೆ.

ಹಿಂದೆಯೂ ಭಾರಿ ಅಂತರದಲ್ಲಿ ಜಯ :2017ರಲ್ಲಿ ಪಾಟಿದಾರ್ ಕೋಟಾ ಆಂದೋಲನದ ನಡುವೆಯೂ ಭೂಪೇಂದ್ರ ಪಟೇಲ್ 1.17 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಈ ಚುನಾವಣೆಯ ನಂತರ ಮತ್ತೆ ಪಟೇಲರಿಗೆ ಉನ್ನತ ಸ್ಥಾನ ನೀಡುವುದಾಗಿ ಬಿಜೆಪಿ ಈಗಾಗಲೇ ಘೋಷಿಸಿದೆ.

3.70 ಲಕ್ಷ ಮತದಾರರು:ಸುಮಾರು 3.70 ಲಕ್ಷ ಮತದಾರರನ್ನು ಹೊಂದಿರುವ ಘಟ್ಲೋಡಿಯಾ ವಿಧಾನಸಭೆ ಕ್ಷೇತ್ರವೂ 2012 ರಲ್ಲಿ ಡಿಲಿಮಿಟೇಶನ್ ವ್ಯಾಯಾಮದ ನಂತರ ಹೊಸ ವಿಧಾನಸಭಾ ಕ್ಷೇತ್ರವಾಯಿತು. ಮೊದಲು ಇದು ಸರ್ಖೇಜ್ ಕ್ಷೇತ್ರದ ಭಾಗವಿತ್ತು. 2012 ರಲ್ಲಿ, ಅಂದಿನ ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು 1.1 ಲಕ್ಷ ಮತಗಳ ಅಂತರದಲ್ಲಿ ಸ್ಥಾನವನ್ನು ಗೆದ್ದಿದ್ದರು.

ಕಾಂಗ್ರೆಸ್ ವಿಫಲ:ಘಟ್ಲೋಡಿಯಾ ಕ್ಷೇತ್ರದಲ್ಲಿ ಪ್ರಭಾವ ಬೀರಲು, ಕಾಂಗ್ರೆಸ್ ಪಕ್ಷವು ಹೆಸರಾಂತ ವಕೀಲ ಮತ್ತು ಕಾರ್ಯಕರ್ತ ಅಮಿಬೆನ್ ಯಾಗ್ನಿಕ್ ಅವರನ್ನು ಕಣಕ್ಕಿಳಿಸಿತು. ಪಟೇಲ್ ಸಿಎಂ ಆಗಿದ್ದಾಗ ಕಾಂಗ್ರೆಸ್ ವೂ ಮನೆ - ಮನೆ ಪ್ರಚಾರ ಬೆಲೆ ಏರಿಕೆ, ನಿರುದ್ಯೋಗ ಮತ್ತು ಭ್ರಷ್ಟಾಚಾರದ ಮೇಲೆ ಕೇಂದ್ರೀಕರಿಸಿತು. ಪಾಟಿದಾರ ಸಮುದಾಯ ಮತಗಳು ಹೆಚ್ಚಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಿಭಜನೆಯಾಗಿವೆ.

ಇದನ್ನೂ ಓದಿ:158 ಸ್ಥಾನಗಳಲ್ಲಿ ಮುನ್ನಡೆ..149 ಸ್ಥಾನ ಗೆಲುವಿನ ಸಾರ್ವಕಾಲಿಕ ದಾಖಲೆ ಮುರಿಯುತ್ತಾ ಬಿಜೆಪಿ?

Last Updated : Dec 8, 2022, 2:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.