ಸೂರತ್(ಗುಜರಾತ್): ಗುಜರಾತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಮಧ್ಯೆ ತುರುಸಿನ ಪೈಪೋಟಿ ನಡೆದಿದೆ. ಈಚೆಗೆ ಆಪ್ನ ಅಭ್ಯರ್ಥಿ ಕಾಂಚನ್ ಜರಿವಾಲಾ ಕಣದಿಂದ ಹಿಂದೆ ಸರಿದಿದ್ದಕ್ಕೆ ಬಿಜೆಪಿಯೇ ಕಾರಣ. ಒತ್ತಡ ಮತ್ತು ಆಮಿಷವೊಡ್ಡಿ ನಾಮಪತ್ರ ಹಿಂಪಡೆಯುವಂತೆ ಮಾಡಿದ್ದಾರೆ ಎಂದು ಆಪ್ ನಾಯಕರು ದೂರಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಕಾಂಚನ್ ಜರಿವಾಲಾ ಕಣದಿಂದ ಹಿಂದೆ ಸರಿಯುವಲ್ಲಿ ಪಕ್ಷದ ಪಾತ್ರವಿಲ್ಲ. ಆಪ್ ಆರೋಪ ನಿರಾಧಾರ ಎಂದಿದೆ.
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕಾಂಚನ್ ಜರಿವಾಲಾ ಸಲ್ಲಿಸಿದ್ದ ಉಮೇದುವಾರಿಕೆಯನ್ನು ವಾಪಸ್ ಪಡೆದಿದ್ದಾರೆ. ಆಪ್ ಅಭ್ಯರ್ಥಿ ಕಣದಿಂದ ಹಿಂದೆ ಸರಿಯಲು ಹಣದ ಬೇಡಿಕೆ ಇಟ್ಟಿದ್ದರು. ಸೋಲುವ ಕಾರಣಕ್ಕಾಗಿ ಅವರು ಚುನಾವಣೆಯಿಂದ ಪಲಾಯನ ಮಾಡಿದ್ದಾರೆ. ಅದರ ಆರೋಪವನ್ನು ಬಿಜೆಪಿ ಮೇಲೆ ಹೊರಿಸುತ್ತಿದೆ ಎಂದು ಗುಜರಾತ್‌ನ ಬಿಜೆಪಿ ವಕ್ತಾರ ಡಾ.ಜಗದೀಶ್ ಪಟೇಲ್ ಹೇಳಿದ್ದಾರೆ.
ಇದು ಪಕ್ಷಕ್ಕೆ ಸಂಬಂಧವಿಲ್ಲ: ಗುಜರಾತ್‌ನ ಆಮ್ ಆದ್ಮಿ ಪಕ್ಷದ ಪ್ರಾದೇಶಿಕ ನಿರ್ದೇಶಕ ರಾಘವ್ ಚಡ್ಡಾ ಅವರನ್ನು ಕಣದಲ್ಲಿ ಉಳಿಸುವ ಸಲುವಾಗಿ ಚುನಾವಣಾ ಆಯೋಗದ ಕಚೇರಿಯಲ್ಲಿ ಒತ್ತಡ ಹೇರಿ, ನಾಮಪತ್ರ ರದ್ದುಗೊಳಿಸಲಾಗಿದೆ. ಆಪ್ ಮಾಡಿರುವ ಆಧಾರರಹಿತ ಆರೋಪಗಳನ್ನು ಭಾರತೀಯ ಜನತಾ ಪಕ್ಷ ಬಲವಾಗಿ ತಿರಸ್ಕರಿಸುತ್ತದೆ ಎಂದು ಹೇಳಿದರು.
ಓದಿ: ಕಾಂಗ್ರೆಸ್ ಆಡಳಿತದಲ್ಲಿ ಇಡೀ ಕರ್ನಾಟಕದ ಮಾಹಿತಿಯನ್ನು ಬಳಸಿಕೊಂಡಿದ್ದಾರೆ: ಸಿಎಂ ಬೊಮ್ಮಾಯಿ