ETV Bharat / bharat

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಜೈಲಿಂದ ಹೊರ ಬಂದ ಬಂಡಿ ಸಂಜಯ್​; ಸರ್ಕಾರದ ವಿರುದ್ಧ ಹರಿಹಾಯ್ದ ಬಿಜೆಪಿ ರಾಜ್ಯಾಧ್ಯಕ್ಷ - ಜಾಮೀನು ಪಡೆದ ನಂತರ ಜೈಲು ಅಧಿಕಾರಿಗಳು ಬಿಡುಗಡೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್​ ಬಂಡಿ ಮತ್ತು ಸಂಸದ ಸೇರಿದಂತೆ ನಾಲ್ವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಆದೇಶ ಹೊರಡಿಸಿದ ಬೆನ್ನಲ್ಲೇ ಅವರಿಗೆ ಜಾಮೀನು ಮಂಜೂರಾಗಿದ್ದು, ಈಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

Bandi Sanjay  Bandi Sanjay gets bail  Bandi Sanjay gets bail in SSC paper leak case  SSC paper leak case  ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ  ಬಂಡಿ ಸಂಜಯ್​ಗೆ ಜಾಮೀನು  ಸರ್ಕಾರದ ವಿರುದ್ಧ ಹರಿಹಾಯ್ದ ಬಿಜೆಪಿ ರಾಜ್ಯಾಧ್ಯಕ್ಷ  ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್​ ಬಂಡಿ  ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್  ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ  ಸಂಸದ ಬಂಡಿ ಸಂಜಯ್ ಜೈಲಿನಿಂದ ಬಿಡುಗಡೆ  ಜಾಮೀನು ಪಡೆದ ನಂತರ ಜೈಲು ಅಧಿಕಾರಿಗಳು ಬಿಡುಗಡೆ  ಬಂಡಿ ಸಂಜಯ್​ಗೆ ಕೇಂದ್ರದಿಂದ ಫೋನ್
ಬಂಡಿ ಸಂಜಯ್​ಗೆ ಜಾಮೀನು
author img

By

Published : Apr 7, 2023, 12:51 PM IST

Updated : Apr 7, 2023, 2:10 PM IST

ವಾರಂಗಲ್ (ತೆಲಂಗಾಣ): ಬಂಡಿ ಸಂಜಯ್ ಅವರು ಬಿಆರ್‌ಎಸ್ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿರುದ್ಧ ತೀವ್ರ ಟೀಕೆ ಮಾಡುವ ಮೂಲಕ ಬಿಜೆಪಿಯ ಫೈರ್‌ಬ್ರಾಂಡ್ ಆಗಿದ್ದಾರೆ. ಕೇಸರಿ ಬ್ರಿಗೇಡ್‌ಗೆ, ಬಂಡಿ ಸಂಜಯ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ತಮ್ಮ ಬಹುಕಾಲ ಈಡೇರದ ಗುರಿಯನ್ನು ಸಾಧಿಸಲು ಒಂದು ರೀತಿಯ ಹೊಸ ಭರವಸೆಯನ್ನು ಹುಟ್ಟುಹಾಕಿದರು.

ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪ ಎದುರಿಸುತ್ತಿರುವ ಸಂಸದ ಬಂಡಿ ಸಂಜಯ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ನಿನ್ನೆ ರಾತ್ರಿ ಜಾಮೀನು ಪಡೆದ ನಂತರ ಜೈಲು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಸಂಜಯ್ ಬಿಡುಗಡೆ ಹಿನ್ನೆಲೆ ಕರೀಂನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಸಂಜೆ 4 ಗಂಟೆಯವರೆಗೆ ಅಂಗಡಿಗಳನ್ನು ಮುಚ್ಚುವಂತೆ ಪೊಲೀಸರು ಆದೇಶಿಸಿದ್ದಾರೆ. ಭಾರೀ ಭದ್ರತೆಯ ನಡುವೆ ಜೈಲಿನಿಂದ ಹೊರಬಂದ ಸಂಜಯ್ ರಾಜ್ಯ ಸರ್ಕಾರವನ್ನು ಟೀಕಿಸಿದರು. ಲೋಕಸೇವಾ ಆಯೋಗದ ಪತ್ರಿಕೆಗಳನ್ನು ಸೋರಿಕೆ ಮಾಡುವ ಮೂಲಕ ವಿಷಯವನ್ನು ದಿಕ್ಕು ತಪ್ಪಿಸುವ ಷಡ್ಯಂತ್ರದಿಂದ ಪ್ರಶ್ನೆ ಪತ್ರಿಕೆಗಳ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ ಎಂದು ಆರೋಪಿಸಿದರು.

  • #WATCH | Telangana BJP President Bandi Sanjay along with his supporters pays floral tributes to Dr BR Ambedkar in Karimnagar, following his bail in the SSC paper leak case pic.twitter.com/Q7HkoD1p0B

    — ANI (@ANI) April 7, 2023 " class="align-text-top noRightClick twitterSection" data=" ">

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಎಸ್‌ಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಹಾಲಿ ನ್ಯಾಯಾಧೀಶರೊಂದಿಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿ ಪುತ್ರನನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಹಿಂದಿ ಪ್ರಶ್ನೆ ಪತ್ರಿಕೆಯನ್ನು ಯಾರಾದರೂ ಸೋರಿಕೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.

10ನೇ ತರಗತಿಯ ತೆಲುಗು ಪ್ರಶ್ನೆ ಪತ್ರಿಕೆಯನ್ನು ಹಿಂದಿನ ದಿನ ಯಾರು ಸೋರಿಕೆ ಮಾಡಿದ್ದಾರೆ. ಹತ್ತನೇ ತರಗತಿಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲೂ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವ ತಾಕತ್ತು ಇವರಿಗೆ ಇಲ್ಲವೇ ಎಂದು ಬಂಡಿ ಸಂಜಯ್ ಸವಾಲು ಹಾಕಿದರು. ಶೀಘ್ರದಲ್ಲೇ ವರಂಗಲ್​ನಲ್ಲಿ ನಿರುದ್ಯೋಗಿ ಯುವಕರೊಂದಿಗೆ ಬೃಹತ್ ರ‍್ಯಾಲಿ ಆಯೋಜಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಕೆಸಿಆರ್ ಪುತ್ರ ಮತ್ತು ಪುತ್ರಿ ಜೈಲು ಪಾಲಾಗುವುದು ಖಚಿತ ಎಂದು ಭವಿಷ್ಯ ನುಡಿದ ಅವರು, ಕೆಸಿಆರ್ ಅವರ ಷಡ್ಯಂತ್ರ, ಕುತಂತ್ರ, ಭ್ರಷ್ಟಾಚಾರದ ಬಗ್ಗೆ ಜನರಿಗೆ ಅರಿವಿದೆ. ಕೆಸಿಆರ್ ಅವರ ಕುಟುಂಬ ಆಡಳಿತ, ಶೋಷಣೆ, ಅರಾಜಕತೆಯಿಂದ ಜನರು ಆಕ್ರೋಶಗೊಂಡಿದ್ದಾರೆ ಎಂದರು.

ಬಂಡಿ ಸಂಜಯ್​ಗೆ ಕೇಂದ್ರದಿಂದ ಫೋನ್: ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಬಂಡಿ ಸಂಜಯ್​ಗೆ ಪಕ್ಷದ ಮುಖಂಡರು ಕರೆ ಮಾಡಿದ್ದರು. ಬಿಆರ್‌ಎಸ್ ಷಡ್ಯಂತ್ರಗಳನ್ನು ಭಗ್ನಗೊಳಿಸಲಾಗುವುದು ಎಂದು ಬಂಡಿ ಸಂಜಯ್‌ಗೆ ತಿಳಿಸಿದರು. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸುವಂತೆ ಸೂಚಿಸಿದರು. ಸಂಜಯ್ ಅವರಿಗೆ ಇಡೀ ರಾಷ್ಟ್ರೀಯ ನಾಯಕತ್ವ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸ್ಮೃತಿ ಇರಾನಿ, ತರುಣ್ ಚುಗ್ ಮತ್ತು ಸುನಿಲ್ ಬನ್ಸಾಲ್ ಸೇರಿದಂತೆ ಹಲವರು ಕರೆ ಮಾಡಿದರು ಎಂದು ತಿಳಿದು ಬಂದಿದೆ.

2023 ರ ತೆಲಂಗಾಣ ಚುನಾವಣೆಗಳು ವೇಗವಾಗಿ ಸಮೀಪಿಸುತ್ತಿವೆ. ಚುನಾವಣೆಗೆ ಕೇವಲ ಏಳು ತಿಂಗಳುಗಳು ಬಾಕಿ ಇವೆ. ಈ ಬಾರಿ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರ ಪಡೆಯಲು ತೀವ್ರವಾಗಿ ಪ್ರಯತ್ನಿಸುತ್ತಿದೆ. ಶನಿವಾರದಂದು ರಾಜ್ಯಕ್ಕೆ ಪ್ರಧಾನಿ ಮೋದಿಯವರ ಭೇಟಿ ನೀಡುತ್ತಿದ್ದು, ಪ್ರಧಾನಿ ಭೇಟಿ ನೀಡುತ್ತಿದ್ದ ಹಲವು ದಿನಗಳ ಮೊದಲೇ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಅವರನ್ನು ಬಂಧಿಸಲಾಗಿತ್ತು. ಇದು ರಾಜಕೀಯ ಮೇಲಾಟದ ಮತ್ತೊಂದು ನಿದರ್ಶನವಾಗಿದೆ.

ಓದಿ: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ.. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಜೈಲಿಗೆ.. 14 ದಿನ ನ್ಯಾಯಾಂಗ ಬಂಧನ

ಏನಿದು ಪ್ರಕರಣ: ಸಂಜಯ್​ ಬಂಡಿ ಅವರ ಪ್ರಚೋದನೆಯ ಮೇರೆಗೆ ಉಳಿದ ಆರೋಪಿಗಳು ಪರೀಕ್ಷಾ ಕೇಂದ್ರದಿಂದ ರಹಸ್ಯವಾಗಿ ಪ್ರಶ್ನೆ ಪತ್ರಿಕೆ ಸಂಗ್ರಹಿಸಿ ವಾಟ್ಸ್​ಆ್ಯಪ್​ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಬಂಡಿ ಸಂಜಯ್​ ವಿರುದ್ಧ ಸೆಕ್ಷನ್ 120 (ಬಿ), 420, 447, 505 (1) (ಬಿ) ಐಪಿಸಿ, 4 (ಎ), 6, ಟಿಎಸ್ ಪಬ್ಲಿಕ್ ಎಕ್ಸಾಮಿನೇಷನ್ (ದುಷ್ಕೃತ್ಯಗಳ ತಡೆ) ಕಾಯ್ದೆ-1997 ರ ರೆಡ್‌ವಿತ್ 8, ಸೆಕ್ಷನ್ 66-ಡಿ ಐಟಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾಯ್ದೆ-2008 ಪ್ರಕರಣ ಸಹ ಅವರ ವಿರುದ್ಧ ದಾಖಲಿಸಿ ಬಂಧನ ಮಾಡಲಾಗಿತ್ತು. ಈಗ ಅವರಿಗೆ ಷರತ್ತು ಜಾಮೀನು ಮಂಜೂರಾಗಿದ್ದು, ಜೈಲಿನಿಂದ ಬಿಡುಗಡೆಯಾಗಿದ್ದಾರೆ.

Last Updated : Apr 7, 2023, 2:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.