ನವದೆಹಲಿ : ಈ ಬಾರಿಯ ಸಂಸತ್ ಚಳಿಗಾಲದ ಅಧಿವೇಶನ ವಿಪಕ್ಷಗಳು ಮತ್ತು ಆಡಳಿತ ಪಕ್ಷಗಳ ಭಾರಿ ಜಟಾಪಟಿಗೆ ಕಾರಣವಾಗಿದೆ. ರಾಜ್ಯಸಭೆಯ 12 ಸಂಸದರ ಅಮಾನತು ಪ್ರಶ್ನಿಸಿ, ಅವರ ಅಮಾನತು ವಾಪಸ್ ಪಡೆಯಬೇಕೆಂಬ ವಿಪಕ್ಷಗಳ ಆಗ್ರಹಕ್ಕೆ ಆಡಳಿತ ಪಕ್ಷ ಬಿಜೆಪಿ ಅಸಮಾಧಾನ ವ್ಯಕ್ತಪಡಿಸುತ್ತಿದೆ.
ಎಂದಿನಂತೆ ಇಂದೂ ಕೂಡ ವಿಪಕ್ಷಗಳ ಮುಖಂಡರು ಸಂಸತ್ ಭವನದ ಮುಂದಿರುವ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ವಿರೋಧಿಸಿದ ಬಿಜೆಪಿ ಸಂಸದರೂ ಕೂಡ ವಿಪಕ್ಷಗಳ ಪ್ರತಿಭಟನೆಯ ವಿರುದ್ಧ ಪ್ರತಿಭಟಿಸಿದ್ದಾರೆ.
ಕೆಲವು ಭಿತ್ತಿ ಪತ್ರಗಳನ್ನು ಹಿಡಿದು ಗಾಂಧಿ ಪ್ರತಿಮೆಯ ಬಳಿ ಧಾವಿಸಿದ ಅವರು ಪ್ರತಿಭಟನೆ ನಡೆಸುತ್ತಿದ್ದ ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ. ಪ್ರತಿಭಟನೆ ನಡೆಸುತ್ತಿರುವುದು ಸಂವಿಧಾನ ಬಾಹಿರ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಐದನೇ ದಿನದ ರಾಜ್ಯಸಭಾ ಅಧಿವೇಶನವೂ ಕೂಡ ಪ್ರತಿಭಟನೆ ಪಾಲಾಗುವಂತಿದೆ.
ಇದನ್ನೂ ಓದಿ: ಮಹಾಪರಿನಿರ್ವಾಣ ದಿನ ಇದ್ದಲ್ಲಿಯೇ ನಮಿಸಿ, ಚೈತ್ಯಭೂಮಿಗೆ ಬರಬೇಡಿ: ಪ್ರಕಾಶ್ ಅಂಬೇಡ್ಕರ್