ETV Bharat / bharat

ನಡುರಸ್ತೆಯಲ್ಲೇ ಬಿಜೆಪಿ ಮುಖಂಡರೊಬ್ಬರ ಪುತ್ರನ ಬರ್ಬರ ಹತ್ಯೆ: ವಿಡಿಯೋ ವೈರಲ್​ - ಕೊಲೆ ವೈರಲ್​ ವಿಡಿಯೋ

ಬಿಜೆಪಿ ಮುಖಂಡನ ಪುತ್ರನ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿ ನಡುರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಿಶನ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವೈರಲ್​ ವಿಡಿಯೋ
ವೈರಲ್​ ವಿಡಿಯೋ
author img

By

Published : Mar 24, 2022, 9:13 AM IST

ಇಂದೋರ್​(ಮಧ್ಯಪ್ರದೇಶ): ನಗರದಲ್ಲಿ ಕಿಡಿಗೇಡಿಗಳ ಹಾವಳಿ ನಿರಂತರವಾಗಿ ಹೆಚ್ಚುತ್ತಿದೆ. ನಡುರಸ್ತೆಯಲ್ಲೇ ಬಿಜೆಪಿ ಮುಖಂಡನ ಪುತ್ರನ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಿಶನ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಕೆಲ ಯುವಕರ ತಂಡ ದಿಢೀರ್​ನೆ ಸ್ಥಳದಲ್ಲಿದ್ದ ಜನರ ಮೇಲೆ ಹಲ್ಲೆ ನಡೆಸಿದ್ದಾರೆ. ವಿಡಿಯೋವನ್ನ ಗಮನಿಸಿದಾಗ ಒಬ್ಬ ವ್ಯಕ್ತಿ ದ್ವಿಚಕ್ರ ವಾಹನದ ಮೇಲೆ ಕುಳಿತಿದ್ದಾನೆ, ಮತ್ತೊಬ್ಬ ಸ್ಕೂಟರ್​ ಸ್ಟಾರ್ಟ್​ ಮಾಡಲು ಪ್ರಯತ್ನಿಸುತ್ತಿದ್ದಾನೆ. ಈ ವೇಳೆ, ಪಕ್ಕದಲ್ಲೇ ಇದ್ದ ವ್ಯಕ್ತಿ ಏಕಾಏಕಿ ಮಾರಾಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗುತ್ತಿದ್ದಂತೆ ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಕಿರಾತಕನೊಬ್ಬ ಬೈಕ್​ ಸಮೇತ ಕೆಳಗೆ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿಯ ತಲೆಗೆ ಯಾವುದೋ ಭಾರವಾದ ವಸ್ತುವಿನಿಂದ ನಿರಂತರವಾಗಿ ಹೊಡೆದಿದ್ದಾನೆ. ಈ ಘಟನೆಯ ಕುರಿತಾದ ಲೈವ್ ವಿಡಿಯೋ ವೈರಲ್ ಆಗಿದೆ.

ವೈರಲ್​ ವಿಡಿಯೋ

ಘಟನೆ ಬಳಿಕ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮೃತ ವ್ಯಕ್ತಿ ಸುಜಿತ್ ಎಂದು ಗುರುತಿಸಲಾಗಿದ್ದು, ಈತ ಬಿಜೆಪಿ ಮುಖಂಡರೊಬ್ಬರ ಪುತ್ರ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; ಜಮ್ಮು ಕಾಶ್ಮೀರ ಕುರಿತು ಪ್ರತಿಕ್ರಿಯಿಸಲು ಚೀನಾಕ್ಕೆ ಯಾವುದೇ ಹಕ್ಕಿಲ್ಲ: ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.