ETV Bharat / bharat

'ಕಳ್ಳ ಪೊಲೀಸ್​ ಆಟ'ದಲ್ಲಿ ಬಿಜೆಪಿ ಮುಖಂಡನ ಪುತ್ರನಿಂದ ಬಾಲಕನ ಹತ್ಯೆ - ETV bharat kannada

ಕಳ್ಳ- ಪೊಲೀಸ್​ ಆಟದಲ್ಲಿ ಬಿಜೆಪಿ ಮುಖಂಡನ ಪುತ್ರ ಅಚಾನಕ್ಕಾಗಿ ಪರವಾನಗಿ ಪಡೆದ ಬಂದೂಕಿನಿಂದ ಬಾಲಕನೊಬ್ಬನನ್ನು ಹತ್ಯೆ ಮಾಡಿದ್ದಾನೆ.

thief-police-game
ಬಾಲಕನ ಹತ್ಯೆ
author img

By

Published : Jul 31, 2022, 8:04 AM IST

ಕೌಶಾಂಬಿ(ಉತ್ತರ ಪ್ರದೇಶ): ಕಳ್ಳ- ಪೊಲೀಸ್​ ಆಟವಾಡುತ್ತಿದ್ದಾಗ ಉತ್ತರಪ್ರದೇಶ ಬಿಜೆಪಿ ಮುಖಂಡರೊಬ್ಬರ 10 ವರ್ಷದ ಪುತ್ರ, ನೆರೆಮನೆಯ ಬಾಲಕನನ್ನು ಅಚಾನಕ್ಕಾಗಿ ಗುಂಡಿಟ್ಟು ಕೊಂದ ದುರ್ಘಟನೆ ನಡೆದಿದೆ.

ಘಟನೆ ಹೀಗೆ ನಡೀತು..: ಬಾಲಕರಿಬ್ಬರು ಶನಿವಾರ ಸಂಜೆಯ ವೇಳೆ ಕಳ್ಳ- ಪೊಲೀಸ್​(ಚೋರ್- ಸಿಪಾಹಿ) ಆಟವಾಡುತ್ತಿದ್ದರು. ಬಿಜೆಪಿ ಮುಖಂಡನ ಪುತ್ರ ಮನೆಯಲ್ಲಿದ್ದ ಪರವಾನಗಿ ಪಡೆದ ರಿವಾಲ್ವರ್ ತಂದಿದ್ದಾನೆ. ತಾನು ಪೊಲೀಸ್​ ಆಗಿ ನೆರೆಮನೆಯ ಬಾಲಕನನ್ನು ಚೋರ್​ ಎಂದು ಪರಿಗಣಿಸಿ ರಿವಾಲ್ವರ್​ನ ಟ್ರಿಗರ್​ ಅದುಮಿದ್ದಾನೆ. ಈ ವೇಳೆ ಗುಂಡು ಸಿಡಿದು ನೆರೆಮನೆಯ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಯೂಟ್ಯೂಬ್ ನೋಡಿ ವೈನ್ ತಯಾರಿಸಿದ ಕೇರಳ ಬಾಲಕ, ಕುಡಿದು ಆಸ್ಪತ್ರೆ ಸೇರಿದ ಸ್ನೇಹಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.