ETV Bharat / bharat

ನಮ್ಮ ಪಕ್ಷದ ದೇಶದ್ರೋಹಿಗಳನ್ನು ಸೇರಿಸಿಕೊಂಡು ಬಿಜೆಪಿ 'ಸೋನಾರ್​ ಬಾಂಗ್ಲಾ' ಕನಸು: ಮಮತಾ - WB CM Latest news

ಕೆಲ ದೇಶದ್ರೋಹಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಬಿಜೆಪಿ ಸೋನಾರ್​ ಬಾಂಗ್ಲಾ ಕನಸು ಕಾಣುತ್ತಿದೆ ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

WB CM
WB CM
author img

By

Published : Feb 4, 2021, 6:43 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭಗೊಂಡಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿವಿಧ ಸಾರ್ವಜನಿಕ ಸಭೆಗಳಲ್ಲಿ ಭಾಗಿಯಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ಬಿಜೆಪಿ ವಿರುದ್ಧ ಮಮತಾ ವಾಗ್ದಾಳಿ

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಆಯೋಜನೆಗೊಂಡಿದ್ದ ಸಮಾರಂಭದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ಟಿಎಂಸಿಯಿಂದ ಕೆಲ ದೇಶದ್ರೋಹಿಗಳನ್ನು ಕರೆದುಕೊಂಡು ಬಿಜೆಪಿ ಸೋನಾರ್​ ಬಾಂಗ್ಲಾ ಕಟ್ಟುವ ಕನಸು ಕಾಣುತ್ತಿದೆ. ಬಿಜೆಪಿಯ ಈ ಸೂತ್ರ ಯಶಸ್ವಿಯಾಗಲ್ಲ. ಬಿಜೆಪಿಗೆ ಹೋಗುವವರು ದಂಗೆಕೋರರು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬಿಜೆಪಿಗೆ ಹೋಗುವವರು ಅಪಾರ ಹಣ ಸಂಪಾದನೆ ಮಾಡಿದ್ದು, ತಮ್ಮ ಆಸ್ತಿ ಮತ್ತು ತಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಲು ಈ ಕೆಲಸ ಮಾಡ್ತಿದ್ದಾರೆ ಎಂದಿದ್ದಾರೆ.

ಓದಿ: ಸಂಸತ್​​ನಲ್ಲಿ ಅಮಿತ್ ಶಾ ಭೇಟಿಯಾದ ಭದ್ರತಾ ಸಲಹೆಗಾರ ಅಜಿತ್ ದೋವಲ್

ಲಾಕ್​ಡೌನ್ ಸಂದರ್ಭದಲ್ಲಿ ಅನೇಕ ಕೂಲಿ ಕಾರ್ಮಿಕರು ಸಾವನ್ನಪ್ಪಿದರು. ಆದರೆ ಕೇಂದ್ರ ಸರ್ಕಾರ ಇವರ ಬಗ್ಗೆ ಯಾವುದೇ ರೀತಿಯ ತಲೆಕೆಡಿಸಿಕೊಳಲಿಲ್ಲ. ಆ ವೇಳೆ ಟ್ರೈನ್​ ಟಿಕೆಟ್​ಗೆ ಹಣ ಕೂಡ ನೀಡಲಿಲ್ಲ. ವಿಶೇಷ ವಿಮಾನ ಖರೀದಿ ಮಾಡುವುದು ಕೇಂದ್ರ ಸರ್ಕಾರಕ್ಕೆ ಆ ವೇಳೆ ಅತಿ ಮುಖ್ಯವಾಗಿತ್ತು ಎಂದು ವಾಗ್ದಾಳಿ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.