ಪಣಜಿ (ಗೋವಾ): ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಹಾರಾಷ್ಟ್ರದಲ್ಲಿ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣದ ಕ್ಯಾಚ್ಫ್ರೇಸ್ನಲ್ಲಿ ಮಾಜಿ ಸಿಎಂ ದೇವೆಂದ್ರ ಫಡ್ನವೀಸ್ ‘ನಾನು ಮತ್ತೆ ಬರುತ್ತಿದ್ದೇನೆ’ ಎಂದು ಪೋಸ್ಟ್ ಹರಿಬಿಟ್ಟಿದ್ದಾರೆ. ಈ ಪೋಸ್ಟ್ಗೆ ಗೋವಾ ಬಿಜೆಪಿ ಮತ್ತು ಬೆಂಬಲಿಗರು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಗೋವಾದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ಗೋವಾದಲ್ಲಿ ಶಿವಸೇನೆಯ ಬಂಡಾಯ ಶಾಸಕರನ್ನು ಬರಮಾಡಿಕೊಂಡರು. ಗುವಾಹಟಿಯಿಂದ ಕರಾವಳಿ ರಾಜ್ಯದ ದಾಬೋಲಿಮ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ರಾಜ್ಯ ಸರ್ಕಾರವು ಈ ನಾಯಕರಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಿದೆ.
ಪಣಜಿಯ ತಾಜ್ ರೆಸಾರ್ಟ್ ಮತ್ತು ಕನ್ವೆನ್ಷನ್ ಸೆಂಟರ್‌ನಲ್ಲಿ ಬಿಜೆಪಿ ನಾಯಕರು ಮತ್ತು ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಮಹಾರಾಷ್ಟ್ರದ ಮಾಜಿ ಸಿಎಂ ಫಡ್ನವೀಸ್ ಪೋಸ್ಟ್ ನೋಡಿದ ಗೋವಾದ ಬಿಜೆಪಿಯ ಹಿರಿಯ ನಾಯಕ ದಾಮೋದರ್ ನಾಯ್ಕ್ ಅಭಿನಂದನೆ ಸಲ್ಲಿಸಿದ್ದಾರೆ.
ಓದಿ: ರಾತ್ರೋರಾತ್ರಿ ಪದತ್ಯಾಗ ಮಾಡಿದ ಮಹಾ ಸಿಎಂ: ಉದ್ದವ್ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು
ಗೋವಾದ ಆರೋಗ್ಯ ಸಚಿವ ವಿಶ್ವಜೀತ್ ರಾಣೆ ಕೂಡ ‘ಸಾಹೇಬ್ ದೇವೇಂದ್ರ ಫಡ್ನವೀಸ್ ಜಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನೀವು ದಣಿವಿಲ್ಲದೇ ದುಡಿದ ನಿಜವಾದ ನಾಯಕ. ಮಹಾರಾಷ್ಟ್ರಕ್ಕೆ ನಿಮ್ಮ ಅಗತ್ಯವಿದೆ. ನಮ್ಮ ಪ್ರಾರ್ಥನೆಗಳು ಯಾವಾಗಲೂ ನಿಮ್ಮೊಂದಿಗೆ ಇರುತ್ತವೆ ಎಂದು ಪೋಸ್ಟ್ ಮಾಡಿದ್ದಾರೆ.
ವಿಧಾನಸಭಾ ಚುನಾವಣಾ ಸಭೆಗಳನ್ನು ಉದ್ದೇಶಿಸಿ ಮತ್ತು ನಾನು ಮತ್ತೆ ಬರುತ್ತಿದ್ದೇನೆ ಎಂದು ತಮ್ಮ ಬೆಂಬಲಿಗರಿಗೆ ಹೇಳುತ್ತಿರುವ ಫಡ್ನವೀಸ್ ವಿಡಿಯೋವನ್ನು ಬಿಜೆಪಿ ಕಾರ್ಯಕರ್ತರು ಹಂಚಿಕೊಂಡಿದ್ದಾರೆ. ಗುರುವಾರದಂದು ವಿಶ್ವಾಸಮತಯಾಚನೆ ನಡೆಸುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಉದ್ಧವ್ ಠಾಕ್ರೆ ಹುದ್ದೆಯಿಂದ ಕೆಳಗಿಳಿಯುವುದಾಗಿ ಘೋಷಿಸಿದ ಕೂಡಲೇ ಫಡ್ನವೀಸ್‌ಗೆ ಶುಭಾಶಯಗಳು ಹರಿದು ಬಂದವು.
2019 ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಚಾರದ ಸಮಯದಲ್ಲಿ ದೇವೆಂದ್ರ ಫಡ್ನವೀಸ್ ಅವರ ಸಾಮಾಜಿಕ ಜಾಲತಾಣವಾದ ಕ್ಯಾಚ್‌ಫ್ರೇಸ್ ಬಹಳ ಜನಪ್ರಿಯವಾಗಿತ್ತು.