ನವದೆಹಲಿ: ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಕೋವಿಡ್ ವಿಚಾರವಾಗಿ ಇಂದು ಮಹತ್ವದ ಸಭೆ ನಡೆಸಿದರು. ಇದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಭಾಗಿಯಾಗಿದ್ದು, ಪ್ರಧಾನಿ ಚರ್ಚೆ ವೇಳೆ ಕೇಜ್ರಿವಾಲ್ ತಾವು ಕುಳಿತುಕೊಂಡಿದ್ದ ಚೇರ್ ಹಿಂದೆ ಎರಡು ಕೈಗಳನ್ನು ಚಾಚುವ ಮೂಲಕ ಆಲಸ್ಯತನ ತೋರಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ದೆಹಲಿ ಸಿಎಂ ಕೇಜ್ರಿವಾಲ್ ಅವರನ್ನು 'ಸಂಸ್ಕಾರವಿಲ್ಲದ' ಸಿಎಂ ಎಂದು ಬಿಜೆಪಿ ಜರೆದಿದೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ತುಣುಕನ್ನು ಟ್ವಿಟರ್ನಲ್ಲಿ ಬಿಜೆಪಿ ಶೇರ್ ಮಾಡಿಕೊಂಡಿದೆ.
ಇದನ್ನೂ ಓದಿ: ಮಗ ಭಾರತೀಯ ಸೇನೆ ಸೇರುತ್ತಿದ್ದಂತೆ ಸರ್ಕಾರಕ್ಕೆ ಬಿಪಿಎಲ್ ಕಾರ್ಡ್ ಮರಳಿಸಿದ ತಂದೆ!
ದೇಶದಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಕಾರಣ ಎಲ್ಲ ರಾಜ್ಯದ ಸಿಎಂಗಳಿಂದ ಪ್ರಧಾನಿ ಮಾಹಿತಿ ಪಡೆದುಕೊಂಡರು. ಇದಾದ ಬಳಿಕ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿಡಿಯೋದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಆಲಸ್ಯತನದಿಂದ ನಡೆದುಕೊಂಡಿದ್ದಾರೆಂದು ಬಿಜೆಪಿ ಆರೋಪಿಸಿದೆ.
-
Mannerless CM of Delhi! pic.twitter.com/yswnLNI6Ty
— BJP Delhi (@BJP4Delhi) April 27, 2022 " class="align-text-top noRightClick twitterSection" data="
">Mannerless CM of Delhi! pic.twitter.com/yswnLNI6Ty
— BJP Delhi (@BJP4Delhi) April 27, 2022Mannerless CM of Delhi! pic.twitter.com/yswnLNI6Ty
— BJP Delhi (@BJP4Delhi) April 27, 2022
ಕೋವಿಡ್ ಸೋಂಕಿನ ಹೊರತಾಗಿ ಮೋದಿ ಇಂಧನ ಬೆಲೆ ಏರಿಕೆ ವಿಚಾರವಾಗಿಯೂ ಚರ್ಚಿಸಿದರು. ಸಾಮಾನ್ಯ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ತೆರಿಗೆ ಕಡಿಮೆ ಮಾಡುವಂತೆ ಕೆಲವು ರಾಜ್ಯಗಳ ಸಿಎಂಗಳಿಗೆ ಮನವಿ ಮಾಡಿದರು.