ತಮಿಳುನಾಡು(ಚೆನ್ನೈ): ಕೆಲ ದಿನಗಳ ಹಿಂದೆ ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರ ಗುಂಡೇಟಿನಿಂದ ಹುತಾತ್ಮನಾದ ವೀರ ಯೋಧ ಲಕ್ಷ್ಮಣ್ ಅವರ ಪಾರ್ಥಿವ ಶರೀರ ಇಂದು ಮಧುರೈ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಈ ಸಮಯದಲ್ಲಿ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಲು ಆಗಮಿಸಿದ್ದ ರಾಜ್ಯ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರ ಕಾರಿನ ಮೇಲೆ ಚಪ್ಪಲಿ ಎಸೆದಿರುವ ಘಟನೆ ನಡೆದಿದೆ.
ವೀರ ಯೋಧ ಲಕ್ಷ್ಮಣ್ ಅವರ ಪಾರ್ಥಿವ ಶರೀರ ಮಧುರೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಮಧುರೈ ಮೇಯರ್ ಸೇರಿದಂತೆ ಕೆಲ ಶಾಸಕರು ಉಪಸ್ಥಿತರಿದ್ದರು. ಈ ವೇಳೆ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಕೂಡ ಆಗಮಿಸಿದ್ದಾರೆ. ಅಂತಿಮ ನಮನ ಸಲ್ಲಿಸಿ, ಏರ್ಪೋರ್ಟ್ನಿಂದ ಹೊರಹೋಗುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಅವರ ಕಾರು ತಡೆಯಲು ಯತ್ನಿಸಿದ್ದು, ಚಪ್ಪಲಿ ಎಸೆದಿದ್ದಾರೆ.
-
Tamil Nadu | 5 BJP workers arrested for allegedly throwing slippers at state minister Palanivel Thiagarajan's car at Madurai Airport today. They have been arrested under various sections including 506, 341, 34 of IPC. Further probe underway: Madurai Police Commissioner pic.twitter.com/btRLLwSiND
— ANI (@ANI) August 13, 2022 " class="align-text-top noRightClick twitterSection" data="
">Tamil Nadu | 5 BJP workers arrested for allegedly throwing slippers at state minister Palanivel Thiagarajan's car at Madurai Airport today. They have been arrested under various sections including 506, 341, 34 of IPC. Further probe underway: Madurai Police Commissioner pic.twitter.com/btRLLwSiND
— ANI (@ANI) August 13, 2022Tamil Nadu | 5 BJP workers arrested for allegedly throwing slippers at state minister Palanivel Thiagarajan's car at Madurai Airport today. They have been arrested under various sections including 506, 341, 34 of IPC. Further probe underway: Madurai Police Commissioner pic.twitter.com/btRLLwSiND
— ANI (@ANI) August 13, 2022
ಇದನ್ನೂ ಓದಿ: ಕಳಪೆ ಆಹಾರದ ತಟ್ಟೆ ಹಿಡಿದು ಕಣ್ಣೀರಿಟ್ಟಿದ್ದ ಕಾನ್ಸ್ಟೇಬಲ್ಗೆ ಹುಚ್ಚನ ಹಣೆಪಟ್ಟಿ
ಈ ವೇಳೆ ಪೊಲೀಸರು ಅವರನ್ನ ಬಂಧಿಸಿದ್ದು, ಸಚಿವರ ಕಾರು ಮುಂದೆ ತೆರಳಲು ಅನುವು ಮಾಡಿಕೊಟ್ಟಿದ್ದಾರೆ. ಘಟನೆಯಿಂದಾಗಿ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಐವರು ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್ 506, 341, 34 ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ಮಧುರೈ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.