ETV Bharat / bharat

ವಕೀಲ ದಂಪತಿ ಹತ್ಯೆ.. ಮಚ್ಚು ನೀಡಿದ ಆರೋಪದ ಮೇಲೆ ಮತ್ತೊಬ್ಬ ಅರೆಸ್ಟ್​! - ವಕೀಲ ದಂಪತಿ ಕೊಲೆ ಪ್ರಕರಣ ಸುದ್ದಿ

ಹೈದರಾಬಾದ್​​ ಹೈಕೋರ್ಟ್​ ವಕೀಲ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

bittu srinu arrested, bittu srinu arrested in lawyer couple murder case, lawyer couple murder case, lawyer couple murder case update, lawyer couple murder case news, ಬಿಟ್ಟು ಶ್ರೀನು ಬಂಧನ, ವಕೀಲ ದಂಪತಿ ಕೊಲೆ ಪ್ರಕರಣದಲ್ಲಿ ಬಿಟ್ಟು ಶ್ರೀನು ಬಂಧನ, ವಕೀಲ ದಂಪತಿ ಕೊಲೆ ಪ್ರಕರಣ, ವಕೀಲ ದಂಪತಿ ಕೊಲೆ ಪ್ರಕರಣ ಸುದ್ದಿ, ವಕೀಲ ದಂಪತಿ ಕೊಲೆ ಪ್ರಕರಣ ಅಪ್​ಡೇಟ್​,
ಬಂಧನ
author img

By

Published : Feb 19, 2021, 2:29 PM IST

ಹೈದರಾಬಾದ್​: ತೆಲಂಗಾಣ ಹೈಕೋರ್ಟ್​ ವಕೀಲ ದಂಪತಿಯನ್ನು ನಡು ರಸ್ತೆಯಲ್ಲಿ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಿರುವುದಾಗಿ ಡಿಸಿಪಿ ರವೀಂದ್ರ ಮಾಹಿತಿ ನೀಡಿದ್ದಾರೆ.

ಹೌದು, ಹತ್ಯೆಗೆ ಮಚ್ಚುಗಳನ್ನು ನೀಡಿದ 'ಬಿಟ್ಟು ಶ್ರೀನಿವಾಸ್'​ ಕೊನೆಗೂ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾನೆ. ನಿನ್ನೆ ಮಹಾರಾಷ್ಟ್ರದ ಗಡಿಯಲ್ಲಿ ಪೊಲೀಸರು ಹತ್ಯೆಗೆ ಸಂಬಂಧಿಸಿದಂತೆ ಪ್ರಮುಖ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.

ಬಿಟ್ಟು ಶ್ರೀನಿವಾಸ್​ ಯಾರು?

ಬಿಟ್ಟು ಶ್ರೀನಿವಾಸ್​ ಪೆದ್ದಪಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಪುಟ್ಟ ಮಧುಕರ್​ನ ಸೋದರಳಿಯ. ಪುಟ್ಟ ಮಧು ತನ್ನ ತಾಯಿಯ ಹೆಸರಿನಲ್ಲಿ ನಡೆಸುತ್ತಿರುವ ಟ್ರಸ್ಟ್​ ಜವಾಬ್ದಾರಿಯನ್ನು ಬಿಟ್ಟು ಶ್ರೀನಿವಾಸ್​ ನೋಡಿಕೊಳ್ಳುತ್ತಿದ್ದಾನೆ.

ವಕೀಲ ದಂಪತಿ ಹತ್ಯೆಗೆ ಮಂಥಾನಿಯ ಹಣ್ಣಿನ ಅಂಗಡಿಯಿಂದ ಮಚ್ಚುಗಳನ್ನು ತರಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹತ್ಯೆ ಬಳಿಕ ಬಿಟ್ಟು ಶ್ರೀನಿವಾಸ್​ ತಲೆಮರೆಸಿಕೊಂಡಿದ್ದನು.

ಬಿಟ್ಟು ಶ್ರೀನಿವಾಸ್​ ಬಂಧನದಿಂದಾಗಿ ಕೊಲೆಯ ಬಗ್ಗೆ ಅನೇಕ ವಿಷಯಗಳು ತಿಳಿದು ಬರುವ ಸಾಧ್ಯತೆಯಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.