ಖೋರ್ಧಾ(ಒಡಿಶಾ): ಹಕ್ಕಿಜ್ವರ ಭೀತಿ ಮತ್ತೆ ಕಾಣಿಸಿಕೊಂಡಿದೆ. ಒಡಿಶಾದ ಖೋರ್ಧಾ ಜಿಲ್ಲೆಯಲ್ಲಿ ಕಾಗೆಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳೆದ ಎರಡು ದಿನಗಳಿಂದ ಕಾಗೆಗಳು ನರಳಿ ಸಾಯುತ್ತಿವೆ.
ಬೆಗುನಿಯಾ ಬ್ಲಾಕ್ನ ಕೊಟ್ಲಂಗ ಗ್ರಾಮದಲ್ಲಿ ಹಾಗೂ ಮತ್ತೊಂದು ಗ್ರಾಮದಲ್ಲಿ ಕಾಗೆಗಳು ನರಳುತ್ತಿರುವುದು ಹಾಗೂ ಕಳೇಬರಗಳು ಪತ್ತೆಯಾಗಿವೆ. ಈ ಕುರಿತು ಗ್ರಾಮಸ್ಥರು ಈಗಾಗಲೇ ಬೆಗುನಿಯಾದಲ್ಲಿರುವ ಪಶು ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ.
ಪಶು ಆಸ್ಪತ್ರೆಯ ತಂಡವೊಂದು ಸ್ಥಳಕ್ಕೆ ಧಾವಿಸಿದ್ದು, ಸತ್ತ ಕಾಗೆಗಳ ಅವಶೇಷಗಳನ್ನು ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಲಾಗಿದೆ. ಕಾಗೆಗಳ ಸಾವಿಗೆ ಕಾರಣ ನಿಗೂಢವಾಗಿದ್ದು, ವರದಿ ಬಂದ ಬಳಿಕವೇ ನಿಖರ ಕಾರಣ ಗೊತ್ತಾಗಲಿದೆ.
ಇದನ್ನೂ ಓದಿ: ಸಿ.ಡಿ. ಕೇಸ್: ತನಿಖಾ ವರದಿಯನ್ನು ಎಸ್ಐಟಿ ಮುಖ್ಯಸ್ಥರಿಗೆ ಸಲ್ಲಿಸಲು ಹೈಕೋರ್ಟ್ ನಿರ್ದೇಶನ