ETV Bharat / bharat

ಹಕ್ಕಿ ಜ್ವರದ ಭೀತಿ: ದೆಹಲಿಯಲ್ಲಿ ಕೋಳಿ ಮಾಂಸ ಮಾರಾಟ ನಿರ್ಬಂಧ, ಹೋಟೆಲ್​ಗಳಿಗೆ ಎಚ್ಚರಿಕೆ!

author img

By

Published : Jan 13, 2021, 10:25 PM IST

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೀಗ ಹಕ್ಕಿ ಜ್ವರದ ಭೀತಿ ಶುರುವಾಗಿದ್ದು, ಕೋಳಿ ಮಾಂಸ ಮಾರಾಟದ ಮೇಲೆ ನಿರ್ಬಂಧ ಹೇರಲಾಗಿದೆ.

Chicken Banned In Delhi
Chicken Banned In Delhi

ನವದೆಹಲಿ: ಕೊರೊನಾ ವೈರಸ್ ಕಡಿಮೆಯಾಗ್ತಿದ್ದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಹಕ್ಕಿ ಜ್ವರದ ಭೀತಿ ಹೆಚ್ಚಾಗಿದ್ದು, ಇದರ ಆತಂಕದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋಳಿ ಮಾಂಸ ಮಾರಾಟದ ಮೇಲೆ ನಿರ್ಬಂಧ ಹಾಕಲಾಗಿದೆ.

ಉತ್ತರ ಹಾಗೂ ದಕ್ಷಿಣ ದೆಹಲಿ ಪಾಲಿಕೆ ವ್ಯಾಪ್ತಿಯಲ್ಲಿನ ಕೆಲವೊಂದು ಪ್ರದೇಶಗಳಲ್ಲಿ ಕೋಳಿ ಹಾಗೂ ಅದರ ಮಾಂಸ ಮಾರಾಟದ ಜತೆಗೆ ಸಾಗಾಟಕ್ಕೂ ನಿರ್ಬಂಧ ಹಾಕಲಾಗಿದೆ. ಇದರ ಜತೆಗೆ ಅಲ್ಲಿನ ಹೋಟೆಲ್​ಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಬರುವ ಗ್ರಾಹಕರಿಗೆ ಚಿಕನ್​ ಆಹಾರ ನೀಡದಂತೆ ತಿಳಿಸಲಾಗಿದೆ. ಅರ್ಧ ಬೇಯಿಸಿದ ಅಥವಾ ಹುರಿದ ಮೊಟ್ಟೆ ಹಾಗೂ ಅರ್ಧ ಬೇಯಿಸಿದ ಕೋಳಿ ತಿನ್ನಬಾರದು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಓದಿ: ಜಮೀನಿನಲ್ಲಿ ಮೇಯ್ದ ತಪ್ಪಿಗೆ ಎತ್ತಿನ ಕಾಲು ಕತ್ತರಿಸಿದ ವ್ಯಕ್ತಿ... ಹೊಲದಲ್ಲೇ ಮಲಗಿರುವ ಎತ್ತು!

ದೆಹಲಿ ಮುನ್ಸಿಪಾಲ್ ಕಾರ್ಪೋರೇಷನ್​ ಹಾಗೂ ಪಶುವೈದ್ಯಕೀಯ ಇಲಾಖೆ ಈ ಆದೇಶ ಹೊರಡಿಸಿದ್ದು, ಕಠಿಣ ಎಚ್ಚರಿಕೆ ನೀಡಿದೆ. ದೆಹಲಿಯಲ್ಲಿ ಹಕ್ಕಿ ಜ್ವರ ಹಬ್ಬಿರುವ ಮಾಹಿತಿ ಈಗಾಗಲೇ ಹೊರಬಿದ್ದಿದ್ದು, ಇದರ ಬೆನ್ನಲ್ಲೇ ಈ ಆದೇಶ ನೀಡಲಾಗಿದೆ. ಇನ್ನು ಗಾಜಿಪುರ ಕೋಳಿ ಮಾರುಕಟ್ಟೆ ಬಂದ್ ಮಾಡಲಾಗಿದೆ. ಕೇರಳ, ರಾಜಸ್ಥಾನ, ನವದೆಹಲಿ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಉತ್ತರ ಪ್ರದೇಶ ಸೇರಿ 10 ರಾಜ್ಯಗಳಲ್ಲಿ ಈಗಾಗಲೇ ಹಕ್ಕಿ ಜ್ವರ ದೃಢಪಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.