ಸಂಬಲ್ಪುರ(ಒಡಿಶಾ): ಒಡಿಶಾ ರಾಜ್ಯದ ಸಂಬಲ್ಪುರ ಜಿಲ್ಲೆಯ ಹಿರಾಕುಡ್ ಅಣೆಕಟ್ಟು ಬಳಿ ಪಕ್ಷಿ ಗಣತಿ ಪ್ರಾರಂಭವಾಗಿದೆ. ಈ ಪಕ್ಷಿಗಳ ಎಣಿಕೆ ಕಾರ್ಯದಲ್ಲಿ 37 ಗುಂಪುಗಳು ತೊಡಗಿಕೊಂಡಿದ್ದು, ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಈ ಕಾರ್ಯ ನಡೆಯಲಿದೆ.
ಅರಣ್ಯ ಇಲಾಖೆಯ 37 ಗುಂಪುಗಳು ಪಕ್ಷಿಗಳ ಎಣಿಕೆ ಕಾರ್ಯ ಚುರುಕುಗೊಳಿಸಿವೆ. ಹಿರಾಕುಡ್ ಜಲಾಶಯದ 533 ಚದರ ಕಿಲೋಮೀಟರ್ ಪ್ರದೇಶದ 15 ಸೆಕ್ಟರ್‌ಗಳಲ್ಲಿ ಪಕ್ಷಿಗಳನ್ನು ಎಣಿಸಲಾಗುತ್ತಿದೆ. ಈ ಕಾರ್ಯಕ್ಕೆ ಒಟ್ಟು 30 ಬೋಟ್‌ಗಳನ್ನು ನಿಯೋಜಿಸಲಾಗಿದೆ. ಈ ವರ್ಷ ಮೊದಲ ಬಾರಿಗೆ ಒಡಿಶಾ - ಛತ್ತೀಸ್‌ಗಢ ಗಡಿಯ ಹೆಚ್ಚುವರಿ 34 ಚದರ ಕಿ.ಮೀ ಪ್ರದೇಶದಲ್ಲಿ ಪಕ್ಷಿಗಳನ್ನು ಎಣಿಕೆ ಮಾಡಲಾಗುತ್ತಿದೆ.
ಇದನ್ನೂ ಓದಿ: NEET-PG ಪ್ರವೇಶ : ಒಬಿಸಿಗಳಿಗೆ ಶೇ.27 ಹಾಗೂ ಆರ್ಥಿಕ ದುರ್ಬಲ ವರ್ಗದವರಿಗೆ ಶೇ.10 ಮೀಸಲಾತಿ
ಈ ವರ್ಷ ಹಿರಾಕುಡ್ ಜಲಾಶಯಕ್ಕೆ ಬರುವ ಪಕ್ಷಿಗಳ ಸಂಖ್ಯೆಯನ್ನು ಇದೇ ತಿಂಗಳ 9 ರಂದು ಪ್ರಕಟಿಸಲಾಗುವುದು ಎಂದು ಹಿರಾಕುಡ್ ವನ್ಯಜೀವಿ ಡಿಎಫ್‌ಒ ಅಂಶುಪ್ರಜ್ಞಾ ದಾಸ್ ತಿಳಿಸಿದ್ದಾರೆ.