ಮುಂಬೈ (ಮಹಾರಾಷ್ಟ್ರ): ಕಾರು ಚಾಲಕನೊಬ್ಬ ತಪ್ಪಾಗಿ ಯೂಟರ್ನ್ ತೆಗೆದುಕೊಂಡ ಪರಿಣಾಮ ಬೈಕ್ ಸವಾರನ ಪ್ರಾಣಪಕ್ಷಿ ಹಾರಿ ಹೋಗಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮುಂಬೈನ ಲೋಯರ್ ಪರೇಲ್ ಸೇತುವೆ ಮೇಲೆ ಸಾಗುತ್ತಿದ್ದ ಕಾರು ಹಠಾತ್ ಯೂಟರ್ನ್ ತೆಗೆದುಕೊಂಡಿದೆ. ಈ ವೇಳೆ, ವೇಗವಾಗಿ ಬರುತ್ತಿದ್ದ ಭಾವೇಶ್ ಎಂಬ ಬೈಕ್ ಸವಾರ ನಿಯಂತ್ರಣ ಕಳೆದುಕೊಂಡು ಕಾರಿಗೆ ಗುದ್ದಿ ಕೆಳಗೆ ಬಿದ್ದಿದ್ದಾನೆ. ಇದೇ ವೇಳೆ ಬಂದ ಮತ್ತೊಂದು ಬೈಕ್ ಭಾವೇಶ್ ಮೇಲೆ ಹರಿದಿದ್ದು, ಆ ಬೈಕ್ ಸವಾರನೂ ಬಿದ್ದಿದ್ದಾನೆ.
ಇದನ್ನೂ ಓದಿ: ಬಸ್ - ಡಂಪರ್ ನಡುವೆ ಡಿಕ್ಕಿ: 7 ಮಂದಿ ದುರ್ಮರಣ
ಇಬ್ಬರು ಬೈಕ್ ಸವಾರರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಕಾರಿಗೆ ಗುದ್ದಿದ್ದ ಭಾವೇಶ್ ಮೃತಪಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪಘಾತ ಸಂಭವಿಸುತ್ತಿದ್ದಂತೆಯೇ ಕಾಲ್ಕಿತ್ತಿದ್ದ ಕಾರು ಚಾಲಕನನ್ನು ಬಂಧಿಸಿದ್ದಾರೆ.