ETV Bharat / bharat

ಗಂಡನ ಕಿರುಕುಳದಿಂದ ಅಮೆರಿಕದಲ್ಲಿ ಭಾರತೀಯ ಮಹಿಳೆ ಆತ್ಮಹತ್ಯೆ.. ಸಾಯುವ ಮುನ್ನ ವಿಡಿಯೋ ಹರಿಬಿಟ್ಟ ಗೃಹಿಣಿ - ಉತ್ತರ ಪ್ರದೇಶದ ಬಿಜ್ನೋರ್

ಅಮೆರಿಕದಲ್ಲಿ ವಾಸವಾಗಿದ್ದ ಭಾರತೀಯ ಮಹಿಳೆಯೋರ್ವಳು ಗಂಡನ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಸಾಯುವ ಮುನ್ನ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ.

BIJNOR WOMAN COMMITS SUICIDE IN NEW YORK USA

author img

By

Published : Aug 6, 2022, 10:20 PM IST

Updated : Aug 6, 2022, 10:25 PM IST

ನವದೆಹಲಿ/ಬಿಜ್ನೋರ್​: ಅಮೆರಿಕದ ರಾಜಧಾನಿ ನ್ಯೂಯಾರ್ಕ್​​ನಲ್ಲಿ ಭಾರತೀಯ ಮೂಲದ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕೇವಲ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಗಿ ಕಟ್ಟಿಕೊಂಡ ಗಂಡ ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ನಿಂದಿಸಿ, ಕಿರುಕುಳ ನೀಡುತ್ತಿದ್ದಾನೆಂದು ಆರೋಪ ಮಾಡಿದ ಪತ್ನಿ ಸಾವಿನ ಮನೆಯ ಕದ ತಟ್ಟಿದ್ದಾರೆ. ಸಾಯುವ ಮುನ್ನ ಹರಿಬಿಟ್ಟಿರುವ ವಿಡಿಯೋ ಸದ್ಯ ಕೋಲಾಹಲಕ್ಕೆ ಕಾರಣವಾಗಿದೆ.

2015ರಲ್ಲಿ ಉತ್ತರ ಪ್ರದೇಶದ ಬಿಜ್ನೋರ್​ನ ಮಂದೀಪ್ ಕೌರ್​​ ಅವರು ರಂಜೋದ್ಬೀರ್ ಸಿಂಗ್ ಸಂಧು ಎಂಬುವರೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ನ್ಯೂಯಾರ್ಕ್​ಗೆ ಹೋಗಿದ್ದು, ಅಲ್ಲೇ ವಾಸಿಸುತ್ತಿದ್ದರು. ಎರಡು ಹೆಣ್ಣು ಮಕ್ಕಳಿಗೆ ಮಹಿಳೆ ಜನ್ಮ ನೀಡಿದ್ದು, ಇದೇ ವಿಚಾರವನ್ನಿಟ್ಟುಕೊಂಡು ಗಂಡ ಪ್ರತಿದಿನ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಲು ಶುರು ಮಾಡಿದ್ದೆರಂತೆ. ಗಂಡ ಇಂದು ಸರಿಹೋಗುತ್ತಾರೆ, ನಾಳೆ ಸರಿಹೋಗುತ್ತಾರೆಂದು ಇಲ್ಲಿಯವರೆಗೆ ಪತ್ನಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅದು ಹುಸಿಯಾಗಿರುವ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2015ರಲ್ಲಿ ಮದುವೆ ಮಾಡಿಕೊಂಡಿದ್ದ ಮಂದೀಪ್ ಕೌರ್​​

ಆತ್ಮಹತ್ಯೆಗೂ ಮುನ್ನ ವಿಡಿಯೋ: ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುಂಚಿತವಾಗಿ ವಿಡಿಯೋ ಮಾಡಿ, ಅದನ್ನ ಇನ್​​ಸ್ಟಾಗ್ರಾಮ್ ಹಾಗೂ ಟ್ವೀಟರ್​ನಲ್ಲಿ ಶೇರ್ ಮಾಡಿಕೊಂಡಿದ್ದು, ಭಾರತದಲ್ಲಿರುವ ತಮ್ಮ ಸ್ನೇಹಿತರಿಗೂ ಫಾರ್ವಡ್ ಮಾಡಿದ್ದಾರೆ. ಇದರಲ್ಲಿ ಕಳೆದ ಎಂಟು ವರ್ಷಗಳಿಂದ ಗಂಡನಿಂದ ಹಿಂಸೆ ಅನುಭವಿಸುತ್ತಿದ್ದೇನೆ. ಅದನ್ನ ಸಹಿಸಲು ಇನ್ಮುಂದೆ ನನ್ನ ಕೈಯಿಂದ ಸಾಧ್ಯವಿಲ್ಲ. ಗಂಡ, ಅತ್ತೆ, ಮಾವ ನನಗೆ ಪ್ರತಿದಿನ ಚಿತ್ರಹಿಂಸೆ ನೀಡುತ್ತಿದ್ದಾರೆ. ಹೀಗಾಗಿ, ಈ ನಿರ್ಧಾರ ಕೈಗೊಳ್ಳುತ್ತಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಎಂದು ಹೇಳಿಕೊಂಡಿದ್ದಾರೆ ಮಂದೀಪ್​ ಕೌರ್. ಸುಮಾರು ಐದು ದಿನಗಳ ಕಾಲ ಟ್ರಕ್​ನಲ್ಲಿ ಬಂಧಿಯಾಗಿಟ್ಟು, ಚಿತ್ರಹಿಂಸೆ ನೀಡಲಾಗಿದೆ ಎಂದು ಸಂತ್ರಸ್ತೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಕೇಂದ್ರದ ಮೊರೆ ಹೋದ ಮಹಿಳೆಯ ಕುಟುಂಬಸ್ಥರು
ಕೇಂದ್ರದ ಮೊರೆ ಹೋದ ಮಹಿಳೆಯ ಕುಟುಂಬಸ್ಥರು

ಇದನ್ನೂ ಓದಿರಿ: ಭೀಕರ ರಸ್ತೆ ಅಪಘಾತಕ್ಕೆ ಕಾರಣವಾಯ್ತು ಬಿಡಾಡಿ ಗೂಳಿ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮಹಿಳೆ ಹರಿಬಿಟ್ಟಿರುವ ವಿಡಿಯೋದಲ್ಲಿ ಅವರ ಇಬ್ಬರು ಹೆಣ್ಣು ಮಕ್ಕಳು ಜೋರಾಗಿ ಕಿರುಚುತ್ತಿರುವುದು ಕೇಳಿಸುತ್ತದೆ. ಪಪ್ಪಾ, ಅಮ್ಮನನ್ನು ಹೊಡೆಯಬೇಡಿ ಎಂದು ಹೇಳುತ್ತಿರುವುದು ಸೆರೆಯಾಗಿದೆ. ಆಗಸ್ಟ್​ 4ರಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ಮೃತದೇಹವನ್ನು ಭಾರತಕ್ಕೆ ಕರೆತರಲು ಕುಟುಂಬಸ್ಥರು ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ.

Last Updated : Aug 6, 2022, 10:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.