ETV Bharat / bharat

ಬಿಹಾರದಲ್ಲಿ ಅಪಹರಣವಾದ ಅಪ್ರಾಪ್ತೆ 3ವರ್ಷದ ಬಳಿಕ ರಾಜಸ್ಥಾನದಲ್ಲಿ ಪತ್ತೆ

ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದು, ಇದರಲ್ಲಿ ಇಬ್ಬರು ಪುರುಷರಾದರೆ ಓರ್ವ ಮಹಿಳೆ ಸಹ ಇದ್ದಾಳೆ. ಈಕೆ ಸಹ ಮಹಿಳೆಯರನ್ನು ಅಪಹರಿಸಿ ಮಾರಾಟ ಮಾಡುವ ಜಾಲದಲ್ಲಿ ನಿರತಳಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

bihar-minor-woman-trafficked-to-rajasthan-found-after-three-years
ಬಿಹಾರದಲ್ಲಿ ಅಪಹರಣವಾದ ಅಪ್ರಾಪ್ತೆ ಮೂರು ವರ್ಷದ ಬಳಿಕ ರಾಜಸ್ಥಾನದಲ್ಲಿ ಪತ್ತೆ
author img

By

Published : Feb 19, 2021, 3:32 PM IST

ದೌಸಾ (ರಾಜಸ್ಥಾನ್): ಬಿಹಾರದಿಂದ ನಾಪತ್ತೆಯಾಗಿದ್ದ ಅಪ್ರಾಪ್ತೆಯನ್ನು ರಾಜಸ್ಥಾನದಲ್ಲಿ ಮೂರು ವರ್ಷದ ಬಳಿಕ ಪೊಲೀಸರು ರಕ್ಷಿಸಿದ್ದಾರೆ.

ಬಿಹಾರದ ಜಿಹಾನಾಬಾದ್​​​ನಿಂದ 2018ರಲ್ಲಿ ಅಪಹರಣಕ್ಕೊಳಗಾಗಿದ್ದ ಅಪ್ರಾಪ್ತೆ ಕುರಿತು ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಪೊಲೀಸರು ಈ ಪ್ರಕರಣದ ಕುರಿತು ಹೆಚ್ಚಿನ ಆಸಕ್ತಿ ತೋರಿಸಿರಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದರು.

ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದು, ಇದರಲ್ಲಿ ಇಬ್ಬರು ಪುರುಷರಾದರೆ ಓರ್ವ ಮಹಿಳೆ ಸಹ ಇದ್ದಾಳೆ. ಈಕೆ ಸಹ ಮಹಿಳೆಯರನ್ನು ಅಪಹರಿಸಿ ಮಾರಾಟ ಮಾಡುವ ಜಾಲದಲ್ಲಿ ನಿರತಳಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಗ್ಯಾಂಗ್​​ನ ಮಹಿಳೆಯೆ ಬಿಹಾರ್​​​ನಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಮೊದಲು ನೋಯ್ಡಾಗೆ ಮಾರಿದ್ದಳು. ಬಳಿಕ ಅಲ್ಲಿಂದ ರಾಜಸ್ಥಾನದ ದೌಸಾಗೆ ಕರೆದೊಯ್ಯಲಾಗಿತ್ತು. ಆದರೆ, ಅಪ್ರಾಪ್ತೆಯ ಸಹೋದರ ಆಕೆಯನ್ನು ಹುಡುಕಲು ನಿಂತು ಪೊಲೀಸರ ಸಹಾಯ ಪಡೆದು ಮೊಬೈಲ್ ಲೋಕೇಷನ್ ಟ್ರ್ಯಾಕ್ ಮಾಡಿಸಿದ್ದಾರೆ. ಈ ವೇಳೆ, ಸಹೋದರಿ ರಾಜಸ್ಥಾನದಲ್ಲಿರುವುದು ತಿಳಿದು ಬಂದಿದೆ.

ಇದಾದ ಬಳಿಕ ಪೊಲೀಸರು ಅಲರ್ಟ್ ಆಗಿದ್ದು, ಅಪ್ರಾಪ್ತೆಯ ಹುಡುಕಾಟಕ್ಕೆ ರಾಜಸ್ಥಾನಕ್ಕೆ ತೆರಳಿದ್ದಾರೆ. ಕಾರ್ಯಾಚರಣೆಯಲ್ಲಿ ಅಪ್ರಾಪ್ತೆಯನ್ನು ರಕ್ಷಿಸಿ ಮೂವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಕೇರಳದ ಪಾಲಕ್ಕಾಡ್​ನಲ್ಲಿ ಬೆಂಕಿಯಿಂದ ಧಗಧಗಿಸಿದ ರೆಸ್ಟೋರೆಂಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.