ETV Bharat / bharat

ಲವ್​ ಮ್ಯಾರೇಜ್​ ಆದ ಮಗಳು.. ವರ್ಷದ ಬಳಿಕ ಅಳಿಯನ ಗುಂಡಿಕ್ಕಿ ಕೊಂದ ಮಾವ! - honor killing in Bihar​

ಬಿಹಾರದ ಬಕ್ಸರ್​ನಲ್ಲಿ ಮರ್ಯಾದಾ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವರ್ಷದ ಹಿಂದೆ ಪ್ರೇಮ ವಿವಾಹವಾಗಿದ್ದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

Bihar Man Shot Dead By Father-In-Law
Bihar Man Shot Dead By Father-In-Law
author img

By

Published : Jun 7, 2022, 3:58 PM IST

Updated : Jun 7, 2022, 4:47 PM IST

ಪಾಟ್ನಾ(ಬಿಹಾರ): ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿ ಸಂಸಾರ ನಡೆಸುತ್ತಿರುವ ಜೋಡಿಗಳ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿರುವ ಅನೇಕ ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಇದರ ಮಧ್ಯೆ ಅಂತಹ ಮತ್ತೊಂದು ಪ್ರಕರಣ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮಗಳು ಅನ್ಯ ಜಾತಿ ಯುವಕನೊಂದಿಗೆ ಮದುವೆಯಾಗಿದ್ದು, ವರ್ಷದ ಬಳಿಕ ಅಳಿಯನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಬಿಹಾರದ ಬಕ್ಸರ್​ ಜಿಲ್ಲೆಯ ದುಮ್ರಾವಾನ್​ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕ್ಷೌರಿಕರ ಅಂಗಡಿಯಲ್ಲಿ ಶೇವ್ ಮಾಡಿಸಿಕೊಳ್ಳಲು ಕುಳಿತುಕೊಂಡಿದ್ದ ವೇಳೆ ಈ ಘಟನೆ ನಡೆದಿದ್ದು, ಮಗನ ಸಹಾಯದಿಂದ ವ್ಯಕ್ತಿ ತನ್ನ ಅಳಿಯನ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.

ಲವ್ ಮ್ಯಾರೇಜ್​ ಆಗಿದ್ದಕ್ಕಾಗಿ ಅಳಿಯನ ಗುಂಡಿಕ್ಕಿ ಕೊಂದ ಮಾವ

ಇದನ್ನೂ ಓದಿ: ಕೈಮೇಲೆ ಆರೋಪಿ ಹೆಸರು ಬರೆದುಕೊಂಡು, ಆತ್ಮಹತ್ಯೆಗೆ ಶರಣಾದ ಅತ್ಯಾಚಾರ ಸಂತ್ರಸ್ತೆ

ಇದಾದ ಬಳಿಕ ರೂಂನೊಳಗೆ ಕರೆದುಕೊಂಡು ಹೋಗಿ, ಆತನ ಮೇಲೆ ಮತ್ತೊಮ್ಮೆ ಗುಂಡು ಹಾರಿಸಲಾಗಿದ್ದು, ಹಲ್ಲೆ ಸಹ ನಡೆಸಲಾಗಿದೆ. ಕೊಲೆಯಾಗಿರುವ ವ್ಯಕ್ತಿಯನ್ನ ಮೋನು ರೈ ಎಂದು ಗುರುತಿಸಲಾಗಿದ್ದು, ಹಲ್ಲೆ ಮಾಡಿರುವ ವ್ಯಕ್ತಿಯನ್ನ ನಿವೃತ್ತ ಸೇನಾ ಸಿಬ್ಬಂದಿ ಸುನೀಲ್ ಪಾಠಕ್ ಎಂದು ಗುರುತಿಸಲಾಗಿದೆ. ಘಟನೆ ವೇಳೆ ಧನು ಪಾಠಕ್​ ಕೂಡ ಇರುವುದು ವರದಿಯಾಗಿದೆ. ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ ಹೊರತಾಗಿ ಕೂಡ ಮಗಳು ಮದುವೆ ಮಾಡಿಕೊಂಡಿದ್ದಕ್ಕಾಗಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಯ ಬಂಧನ ಮಾಡಲಾಗಿದೆ.

Last Updated : Jun 7, 2022, 4:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.