ETV Bharat / bharat

500 ರೂ. ಸಂಪಾದಿಸುವ ಕೂಲಿ ಕಾರ್ಮಿಕನಿಗೆ 37 ಲಕ್ಷ ಪಾವತಿಸುವಂತೆ ಐಟಿ ಇಲಾಖೆ ನೋಟಿಸ್​

ದಿನಗೂಲಿ ನೌಕರನೊಬ್ಬನಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್​ ನೀಡಿ, ಬಾಕಿ ಇರುವ 37.5 ಲಕ್ಷ ರೂಪಾಯಿ ಪಾವತಿಸುವಂತೆ ಸೂಚಿಸಿದೆ. ನೋಟಿಸ್ ಸ್ವೀಕರಿಸಿ ಆಘಾತಗೊಂಡ ಕೂಲಿ ಕಾರ್ಮಿಕ ಈ ಕುರಿತು ಅಲೌಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆದಾಯ ತೆರಿಗೆ ಇಲಾಖೆ
Income Tax
author img

By

Published : Aug 22, 2022, 2:30 PM IST

ಖಗಾರಿಯಾ: ಬಿಹಾರದಲ್ಲಿ ದಿನಗೂಲಿ ನೌಕರನೊಬ್ಬನಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್​ ಬಂದಿದ್ದು, ಬಾಕಿ ಇರುವ 37.5 ಲಕ್ಷ ರೂಪಾಯಿ ಪಾವತಿಸುವಂತೆ ಆದೇಶಿಸಿಸಲಾಗಿದೆ. ಈ ನೋಟಿಸ್​ ನೋಡಿ ಆಘಾತಗೊಂಡ ಕಾರ್ಮಿಕನ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.

ದಿನಕ್ಕೆ ಸುಮಾರು 500 ರೂಪಾಯಿಗಿಂತ ಅತ್ಯಲ್ಪ ವೇತನ ಪಡೆಯುವ ಖಗಾರಿಯಾ ಜಿಲ್ಲೆಯ ಮಘೌನಾ ಗ್ರಾಮದ ನಿವಾಸಿ ಗಿರೀಶ್ ಯಾದವ್ ಅವರಿಗೆ ಈ ನೋಟಿಸ್ ನೀಡಲಾಗಿದೆ. ಪೋಸ್ಟ್ ಮೂಲಕ ಬಂದ ಆದಾಯ ತೆರಿಗೆ ಇಲಾಖೆ ನೋಟಿಸ್ ಸ್ವೀಕರಿಸಿ ಆತಂಕಗೊಂಡ ಗಿರೀಶ್, ಈ ವಿಚಾರವಾಗಿ ಅಲೌಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ದೇಶದ ವಿವಿಧೆಡೆ ಐಟಿ ದಾಳಿ: ಸಾವಿರ ಕೋಟಿಗೂ ಹೆಚ್ಚು ಕಡೆ ಅಕ್ರಮ ವ್ಯವಹಾರ ಬಯಲು

ಆದಾಯ ತೆರಿಗೆ ಇಲಾಖೆ ನೋಟಿಸ್ ಪ್ರಕಾರ, ರಾಜಸ್ಥಾನದ ಪಾಲಿಯಲ್ಲಿ ಗಿರೀಶ್ ಹೆಸರಿನಲ್ಲಿ ಕಂಪನಿಯಿದ್ದು, ಅವರ ಹೆಸರಿನ ಪಾನ್‌ ಕಾರ್ಡ್‌ ಸಂಖ್ಯೆಯ ವಿರುದ್ಧ ನೋಟಿಸ್ ನೀಡಲಾಗಿದೆ. ಆದ್ರೆ ಕಾರ್ಮಿಕ ನೀಡಿರೋ ಮಾಹಿತಿ ಪ್ರಕಾರ, ಅವರು ದೆಹಲಿಯಲ್ಲಿ ತಂಗಿದ್ದ ಸಂದರ್ಭದಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಅವರ ಹೆಸರಿನಲ್ಲಿ ಪಾನ್ ಕಾರ್ಡ್ ಮಾಡಿಸಿಕೊಂಡಿದ್ದು, ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ವಂಚನೆ ಪ್ರಕರಣವೆಂದು ತಿಳಿದುಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ದೇಶದ 'ಅತಿ ಹೆಚ್ಚು ತೆರಿಗೆ ಪಾವತಿದಾರ'ನೆಂಬ ಕೀರ್ತಿಗೆ ಭಾಜನರಾದ ನಟ ಅಕ್ಷಯ್ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.