ETV Bharat / bharat

ಏ.5ರ ವರೆಗೆ ವೈದ್ಯರ, ಆರೋಗ್ಯ ಕಾರ್ಯಕರ್ತರ ರಜೆ ರದ್ದು ಮಾಡಿದ ಬಿಹಾರ ಸರ್ಕಾರ.. ಕಾರಣ ಗೊತ್ತೇ? - Bihar rise in covid cases

ಕೋವಿಡ್​ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬಿಹಾರದ ವೈದ್ಯರ ಹಾಗೂ ಆರೋಗ್ಯ ಕಾರ್ಯಕರ್ತರ ರಜೆ ರದ್ದು ಮಾಡಲಾಗಿದೆ.

Bihar Government cancels leaves of all doctors and healthcare workers
ಏ.5ರ ವರೆಗೆ ವೈದ್ಯರ, ಆರೋಗ್ಯ ಕಾರ್ಯಕರ್ತರ ರಜೆ ರದ್ದು ಮಾಡಿದ ಬಿಹಾರ ಸರ್ಕಾರ
author img

By

Published : Mar 19, 2021, 11:39 AM IST

ಪಾಟ್ನಾ (ಬಿಹಾರ): ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಏಪ್ರಿಲ್​​ 5ರ ವರೆಗೆ ಎಲ್ಲ ಸರ್ಕಾರಿ ಆಸ್ಪತ್ರೆಗಳ ವೈದ್ಯರ, ಆರೋಗ್ಯ ಕಾರ್ಯಕರ್ತ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯ ರಜೆಯನ್ನು ಬಿಹಾರ ಸರ್ಕಾರ ರದ್ದು ಮಾಡಿದೆ.

ಬಿಹಾರ ರಾಜಧಾನಿ ಪಾಟ್ನಾದಲ್ಲಿ ಈಗಾಗಲೇ ಮತ್ತೆ ಕ್ವಾರಂಟೈನ್​ ಕೇಂದ್ರಗಳನ್ನು ತೆರೆಯಲಾಗಿದೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ತುರ್ತು ಪರಿಸ್ಥಿತಿ ಎದುರಾದರೆ ವೈದ್ಯಕೀಯ ಸಿಬ್ಬಂದಿ ರಜೆ ರಹಿತ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಏಪ್ರಿಲ್​​ 5ರ ವರೆಗೆ ಅವರ ರಜೆ ರದ್ದು ಮಾಡಿರುವುದಾಗಿ ಸರ್ಕಾರ ತಿಳಿಸಿದೆ.

  • Bihar Government cancels leaves of all doctors and healthcare workers, paramedical staff till 5th April, in view of the COVID19 situation

    — ANI (@ANI) March 19, 2021 " class="align-text-top noRightClick twitterSection" data=" ">

ಇದನ್ನೂ ಓದಿ: ನಿನ್ನೆ 40 ಸಾವಿರ ಸನಿಹ ಕೊರೊನಾ ಕೇಸ್​ ಪತ್ತೆ.. ಈವರೆಗೆ 3.93 ಕೋಟಿಗೆ ಮಂದಿಗೆ ವ್ಯಾಕ್ಸಿನ್​​

ಮಹಾರಾಷ್ಟ್ರ ಸೇರಿದಂತೆ ಕೋವಿಡ್​ ಕೇಸ್ ಜಾಸ್ತಿಯಿರುವ ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ​ ಸರ್ಕಾರ ವಿಶೇಷ ಗಮನ ಹರಿಸಲಿದೆ. ಹೆಚ್ಚು ಜನ ಸೇರುವ ದೊಡ್ಡ ದೊಡ್ಡ ಸಮಾರಂಭಗಳಿಗೆ ಕಡಿವಾಣ ಹಾಕಲು ಯೋಚಿಸುತ್ತಿದೆ. ರಾಜ್ಯದಲ್ಲಿ ಈವರೆಗೆ 2.63 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, 1,554 ಮಂದಿ ಅಸುನೀಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.