ETV Bharat / bharat

ಬಿಹಾರ ಮಹಾಸಮರ: ಇಂದು 2ನೇ ಹಂತದ ಮತದಾನ... ತೇಜಸ್ವಿ ಯಾದವ್ ಸೇರಿ ಪ್ರಮುಖರು ಕಣದಲ್ಲಿ - ಬಿಹಾರ ಚುನಾವಣೆ 2020

ಬಿಹಾರದ 243 ಕ್ಷೇತ್ರಗಳ ಪೈಕಿ ಇಂದು 94 ಕ್ಷೇತ್ರಗಳಲ್ಲಿ 2.85 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ. ಆರ್​ಜೆಡಿ ನಾಯಕ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್, ಅವರ ಸಹೋದರ ತೇಜ್ ಪ್ರತಾಪ್ ಕಣದಲ್ಲಿದ್ದಾರೆ.

Bihar Election
ಬಿಹಾರ ಮಹಾಸಮರ
author img

By

Published : Nov 3, 2020, 5:29 AM IST

Updated : Nov 3, 2020, 7:27 AM IST

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯ 2ನೇ ಹಂತದ ಮತದಾನ ಇಂದು ನಡೆಯುತ್ತದೆ. ಸಿಎಂ ನಿತೀಶ್‌ ಕುಮಾರ್‌ ಸಂಪುಟದ ನಾಲ್ವರು ಸಚಿವರು, ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ ಹಾಗೂ ಇತರ ಕೆಲವು ನಾಯಕರ ಪ್ರಮುಖ ಕ್ಷೇತ್ರ ಸೇರಿದಂತೆ ಒಟ್ಟು 94 ಕ್ಷೇತ್ರಗಳ ನಾಯಕರ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಎರಡನೇ ಹಂತದ ಮತದಾನ ಮಹತ್ವದ್ದಾಗಿದ್ದು, ಇಂದು 2.85 ಕೋಟಿ ಜನ ಮತಹಕ್ಕು ಚಲಾಯಿಸಲಿದ್ದಾರೆ. ಇಂದು 1,500 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಲಿದೆ.

ಜೊತೆಗೆ ಕರ್ನಾಟಕದ 2, ಮಧ್ಯಪ್ರದೇಶದ 28 ಕ್ಷೇತ್ರ, ಗುಜರಾತ್‌ನ 8 ಕ್ಷೇತ್ರ ಸೇರಿ 10 ರಾಜ್ಯಗಳ ಒಟ್ಟು 54 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದೆ.

ಬಿಹಾರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ 3,722 ಅಭ್ಯರ್ಥಿಗಳ ಪೈಕಿ 1,201 ಅಂದ್ರೆ ಶೇ.32ರಷ್ಟು ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್‌ ದೂರುಗಳು ದಾಖಲಾಗಿವೆ ಎಂದು ಘೋಷಿಸಿಕೊಂಡಿದ್ದಾರೆ. 115 ಅಭ್ಯರ್ಥಿಗಳು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ (12 ಅಭ್ಯರ್ಥಿಗಳ ವಿರುದ್ಧ ಅತ್ಯಾಚಾರದ ಆರೋಪ) ಮತ್ತು 73 ಮಂದಿ ಕೊಲೆ ಆರೋಪ ಎದುರಿಸುತ್ತಿದ್ದಾರೆ ಎಂದು ಎಡಿಆರ್‌ ವರದಿ ಪ್ರಕಟಿಸಿದೆ.

Last Updated : Nov 3, 2020, 7:27 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.