ETV Bharat / bharat

ಬಿಹಾರ ಜಾತಿ ಗಣತಿ: ತೃತೀಯಲಿಂಗಿಗಳ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ - ​ ETV Bharat Karnataka

ತೃತೀಯಲಿಂಗಿಗಳು ಪಾಟ್ನಾ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ.

ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
author img

By ETV Bharat Karnataka Team

Published : Oct 16, 2023, 10:36 PM IST

ಪಾಟ್ನಾ: ಬಿಹಾರದಲ್ಲಿ ಬಿಡುಗಡೆಯಾದ ಜಾತಿ ಗಣತಿಯಲ್ಲಿ ತೃತೀಯಲಿಂಗಿಗಳನ್ನು ಪ್ರತ್ಯೇಕ ಜಾತಿ ಪಟ್ಟಿಗೆ ಸೇರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ಸೋಮವಾರ ತಿರಸ್ಕರಿಸಿತು. ತೃತೀಯಲಿಂಗಿಗಳಿಗೆ ಸರ್ಕಾರದಿಂದ ಪ್ರತ್ಯೇಕ ಸವಲತ್ತುಗಳನ್ನು ನೀಡಬಹುದು. ಆದರೆ ಪ್ರತ್ಯೇಕ ಜಾತಿ ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತು.

ಬಿಹಾರದಲ್ಲಿ ಜಾತಿ ಗಣತಿ ವರದಿಯನ್ನು ಅಕ್ಟೋಬರ್ 2 ರಂದು ಮಂಡಿಸಲಾಗಿದೆ. ವರದಿಯಲ್ಲಿ ತೃತೀಯಲಿಂಗಿಗಳ ಸಂಖ್ಯೆ 825 ಎಂದು ಹೇಳಲಾಗಿದ್ದು, ಅದನ್ನು ಕಲಂ 22ರಲ್ಲಿ ಸೇರಿಸಲಾಗಿದೆ. ಈ ವರದಿಯ ಪ್ರಕಾರ, ಬಿಹಾರದಲ್ಲಿ ತೃತೀಯಲಿಂಗಿಗಳ ಸಂಖ್ಯೆ ಶೇ.0.0006 ರಷ್ಟಿದೆ. ವರದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ತೃತೀಯಲಿಂಗಿಗಳು ಪ್ರತಿಭಟನೆ ನಡೆಸಿದ್ದರು. ತೃತೀಯಲಿಂಗಿಗಳ ಪರವಾಗಿ ಪಾಟ್ನಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

2011ರ ಜನಗಣತಿಯಲ್ಲಿ ಬಿಹಾರದಲ್ಲಿ ತೃತೀಯಲಿಂಗಿಗಳ ಸಂಖ್ಯೆ 42 ಸಾವಿರ ಇದೆ. ಆದರೆ ಈ ಬಾರಿ 825 ಎಂದು ಹೇಳಲಾಗಿದೆ. ಹೀಗಾಗಿ ಪ್ರತ್ಯೇಕ ಜಾತಿಯ ಪಟ್ಟಿಯಲ್ಲಿ ತೃತೀಯಲಿಂಗಿಗಳನ್ನು ಸೇರಿಸಬೇಕೆಂದು ಅರ್ಜಿದಾರರು ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ತೃತೀಯಲಿಂಗಿ ಎಂಬುದು ಜಾತಿಯಲ್ಲ. ಒಂದು ಸಮುದಾಯ. ಹೀಗಾಗಿ ಪ್ರತ್ಯೇಕ ಜಾತಿ ಎಂದು ಸ್ವೀಕರಿಸಲು ನಿರಾಕರಿಸಿದ ಪಾಟ್ನಾ ಹೈಕೋರ್ಟ್ ಅರ್ಜಿ ತಿರಸ್ಕರಿಸಿತ್ತು. ಪಾಟ್ನಾ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಇದನ್ನೂ ಓದಿ: ಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ನ್ಯೂಸ್​ಕ್ಲಿಕ್​ ಸಂಪಾದಕ ಪುರಕಾಯಸ್ಥ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.