ETV Bharat / bharat

ಎನ್​ಟಿಪಿಸಿ ಪರೀಕ್ಷೆ ವಿವಾದ: ಬಿಹಾರದಲ್ಲಿ ಇಂದು ಬಂದ್, ನಾಲ್ವರ ಬಂಧನ - ಎನ್​ಟಿಪಿಸಿ ಸಿಬಿಟಿ-1 ಪರೀಕ್ಷೆಯ ಫಲಿತಾಂಶ

ರೈಲ್ವೆ ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಉಂಟು ಮಾಡಿದ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪಾಟ್ನಾ ಜಿಲ್ಲಾಧಿಕಾರಿ ಚಂದ್ರಶೇಖರ್ ಸಿಂಗ್ ಮಾಹಿತಿ ನೀಡಿದ್ದಾರೆ.

Bihar bandh today, opposition supports youth call against RRB exam 'rigging'
ಎನ್​ಟಿಪಿಸಿ ಪರೀಕ್ಷೆ ವಿವಾದ : ಬಿಹಾರದಲ್ಲಿ ಇಂದು ಬಂದ್, ನಾಲ್ವರ ಬಂಧನ
author img

By

Published : Jan 28, 2022, 10:09 AM IST

ಪಾಟ್ನಾ(ಬಿಹಾರ): ರೈಲ್ವೆ ನೇಮಕಾತಿ ಮಂಡಳಿ ನಡೆಸಿದ ಎನ್​ಟಿಪಿಸಿ ಸಿಬಿಟಿ ಮೊದಲ ಹಂತದ ಪರೀಕ್ಷೆಯ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ, ಪರೀಕ್ಷಾರ್ಥಿಗಳು ನಡೆಸಿದ ಪ್ರತಿಭಟನೆ ಈಗಾಗಲೇ ತೀವ್ರ ಸ್ವರೂಪ ತಳೆದಿದೆ. ವಿದ್ಯಾರ್ಥಿಗಳ ಪರವಾಗಿ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್‌ಎ) ಮತ್ತು ಇತರ ಯುವ ಸಂಘಟನೆಗಳು ಇಂದು ಬಿಹಾರ ರಾಜ್ಯ ಬಂದ್‌ಗೆ ಕರೆ ನೀಡಿದೆ.

ಬಂದ್​ಗೆ ಹಲವು ರಾಜಕೀಯ ಪಕ್ಷಗಳ ಬೆಂಬಲವೂ ಇದೆ. ಬಿಹಾರ ಮಹಾಘಟಬಂಧನ್​​ ಎಲ್ಲ ಪಕ್ಷಗಳು ಮತ್ತು ಜನ್ ಅಧಿಕಾರ್ ಪಕ್ಷ ಮತ್ತು ವಿದ್ಯಾರ್ಥಿ ಸಂಘಟನೆಯಾದ ಇಂಕ್ವಿಲಾಬಿ ನೌಜವಾನ್ ಸಭಾ ಕೂಡಾ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದೆ.

ರೈಲ್ವೇ ನೇಮಕಾತಿ ಮಂಡಳಿ ಪರೀಕ್ಷಾ ನೀತಿ ಮಾತ್ರವಲ್ಲದೇ, ಪರೀಕ್ಷಾ ನೀತಿಯ ವಿರುದ್ಧ ಪ್ರತಿಭಟನೆ ನಡೆಸಿದ ಪರೀಕ್ಷಾರ್ಥಿಗಳ ಮೇಲೆ ಲಾಠಿ ಚಾರ್ಜ್, ದೂರುಗಳು ಮತ್ತು ಬಂಧನವನ್ನು ಖಂಡಿಸಿ, ಇಂದು ಬಿಹಾರ ಬಂದ್​ಗೆ ಕರೆ ನೀಡಲಾಗಿದೆ.

ಪರೀಕ್ಷಾರ್ಥಿಗಳ ವಿರುದ್ಧ ಸರ್ಕಾರ ಅನುಸರಿಸುತ್ತಿರುವ ಧೋರಣೆ ಖಂಡಿಸಿ, ಹಲವು ಪಕ್ಷಗಳು ಗುರುವಾರ ಸುದ್ದಿಗೋಷ್ಠಿ ನಡೆಸಿದ್ದವು. ಈ ವೇಳೆ, ಮಾತನಾಡಿದ ಆರ್‌ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್ ಬಿಹಾರ್​ ಬಂದ್​ ಬೆಂಬಲ ಘೋಷಿಸಿ, ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಆರ್‌ಜೆಡಿ, ಕಾಂಗ್ರೆಸ್, ಸಿಪಿಐ ಮತ್ತು ಸಿಪಿಐ(ಎಂ) ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಬಿಹಾರವು ದೇಶದಲ್ಲಿ ಅತಿ ಹೆಚ್ಚು ಯುವಜನರನ್ನು ಹೊಂದಿದೆ. ಅತಿ ಹೆಚ್ಚು ನಿರುದ್ಯೋಗ ದರವೂ ಇಲ್ಲಿದೆ. ಕೇಂದ್ರ ಹಾಗೂ ಬಿಹಾರ ಸರ್ಕಾರಗಳಿಂದ ಇಲ್ಲಿನ ಯವಜನತೆ ವಂಚನೆಗೆ ಒಳಗಾಗುತ್ತಿದ್ದಾರೆ. ಇದನ್ನು ವಿರೋಧಿಸಿ, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ ಅವರ ಮೇಲೆ ನಿತೀಶ್ ಸರ್ಕಾರ ಲಾಠಿ ಚಾರ್ಜ್ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಎನ್‌ಡಿಎ ಘಟಕವಾದ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಮುಖ್ಯಸ್ಥ ಮತ್ತು ಬಿಹಾರ ರಾಜ್ಯದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಕೂಡ ಪ್ರತಿಭಟನಾನಿರತ ವಿದ್ಯಾರ್ಥಿಗಳ ಬೆಂಬಲಕ್ಕೆ ಬಂದಿದ್ದು, ವಿದ್ಯಾರ್ಥಿಗಳ ಮೇಲೆ ಎಫ್​ಐಆರ್ ದಾಖಲು ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.

ನಾಲ್ವರ ಬಂಧನ: ರೈಲ್ವೆ ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಉಂಟುಮಾಡಿದ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪಾಟ್ನಾ ಜಿಲ್ಲಾಧಿಕಾರಿ ಚಂದ್ರಶೇಖರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಪ್ರತಿಭಟನೆಯ ವೇಳೆ ಪಾಟ್ನಾದ ರಾಜೇಂದ್ರ ಸಿಂಗ್ ಟರ್ಮಿನಲ್​ನಲ್ಲಿ ಕಲ್ಲು ತೂರಾಟ ನಡೆಸಿ, ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡಿದ ಆರೋಪ ಇವರ ಮೇಲಿದೆ. ಆರು ಕೋಚಿಂಗ್ ಸೆಂಟರ್​ಗಳು ಗಲಭೆಗೆ ಕುಮ್ಮಕ್ಕು ನೀಡಿವೆ ಎಂಬ ಆರೋಪವೂ ಇದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಸೂಪರ್‌ಮಾರ್ಕೆಟ್‌, ಜನರಲ್​ ಸ್ಟೋರ್​ಗಳಲ್ಲೂ ಸಿಗಲಿದೆ ವೈನ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.