ETV Bharat / bharat

ರೈತರಿಗೆ ದೊಡ್ಡ ಗೆಲುವು : ಪೆಪ್ಸಿಕೋದ ಲೇಸ್‌ ಆಲೂಗಡ್ಡೆಯ ಪೇಟೆಂಟ್ ರದ್ದು - ಲೇಸ್‌ಗೆ ಪಡೆದಿದ್ದ ಆಲೂಗಡ್ಡೆ ಪೇಟೆಂಟ್‌ ರದ್ದು

ಪೆಪ್ಸಿಕೋ ಕಂಪನಿ ವಿರುದ್ಧ ಕೇಸ್‌ ದಾಖಲಿಸಿದ್ದ ರೈತರಿಗೆ ದೊಡ್ಡ ವಿಜಯ ಸಿಕ್ಕಿದೆ. ಪೆಪ್ಸಿಕೋದ ಜನಪ್ರಿಯ ಲೇಸ್‌ಗಾಗಿ ಪಡೆದಿದ್ದ ಆಲೂಗಡ್ಡೆಯ ಪೇಟೆಂಟ್‌ ಅನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಈ ಸಂಬಂಧ ಸಸ್ಯ ಪ್ರಭೇದಗಳ ರಕ್ಷಣೆ ಮತ್ತು ರೈತರ ಹಕ್ಕುಗಳ (ಪಿಪಿವಿಎಫ್‌ಆರ್) ಪ್ರಾಧಿಕಾರ ಆದೇಶ ಹೊರಡಿಸಿದೆ..

Big victory for farmers': India revokes patent for PepsiCo's Lay's potatoes
ರೈತರಿಗೆ ದೊಡ್ಡ ಗೆಲುವು: ಪೆಪ್ಸಿಕೋದ ಲೇಸ್‌ ಆಲೂಗೆಡ್ಡೆಯ ಪೇಟೆಂಟ್ ರದ್ದು
author img

By

Published : Dec 7, 2021, 1:15 PM IST

ನವದೆಹಲಿ : ಕಳೆದ ಹಲವು ವರ್ಷಗಳಿಂದ ಅನ್ನದಾತರು, ಪೆಪ್ಸಿಕೋ ಕಂಪನಿಯ ನಡುವಿನ ಸಮರದಲ್ಲಿ ರೈತರಿಗೆ ದೊಡ್ಡ ಗೆಲುವು ದೊರೆತಿದೆ. ಪೆಪ್ಸಿಕೋದ ಜನಪ್ರಿಯ ಲೇಸ್‌ಗಾಗಿ ಪಡೆದಿದ್ದ ಆಲೂಗಡ್ಡೆಯ ಪೇಟೆಂಟ್‌ ಅನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ.

ಸಸ್ಯ ಪ್ರಭೇದಗಳ ರಕ್ಷಣೆ ಮತ್ತು ರೈತರ ಹಕ್ಕುಗಳ (ಪಿಪಿವಿಎಫ್‌ಆರ್) ಪ್ರಾಧಿಕಾರವು ಈ ಸಂಬಂಧ ಕಳೆದ ಶುಕ್ರವಾರ ಆದೇಶ ಹೊರಡಿಸಿದೆ. ಪೆಪ್ಸಿಕೋ ಇಂಕ್‌ನ ಜನಪ್ರಿಯ ಲೇಸ್‌ ಆಲೂಗೆಡ್ಡೆ ಚಿಪ್‌ಗಳಿಗಾಗಿ ಪ್ರತ್ಯೇಕವಾಗಿ ಬೆಳೆದ ಆಲೂಗಡ್ಡೆ ತಳಿಯ ಪೇಟೆಂಟ್ ಅನ್ನು ರದ್ದುಗೊಳಿಸಿದೆ.

2019ರಲ್ಲಿ, ಆಲೂಗಡ್ಡೆ ಚಿಪ್ಸ್‌ನಂತಹ ತಿಂಡಿಗಳನ್ನು ತಯಾರಿಸಲು ಕಡಿಮೆ ತೇವಾಂಶವನ್ನು ಹೊಂದಿರುವ ಎಫ್‌ಸಿ5 ಆಲೂಗಡ್ಡೆ ತಳಿಯನ್ನು ಬೆಳೆಸಲು ಗುಜರಾತ್ ಮೂಲದ ಕೆಲವು ರೈತರ ಮೇಲೆ ಪೆಪ್ಸಿಕೋ ಮೊಕದ್ದಮೆ ಹೂಡಿತ್ತು.

ಅದೇ ವರ್ಷ ಮೊಕದ್ದಮೆಗಳನ್ನು ಹಿಂತೆಗೆದುಕೊಂಡ ನ್ಯೂಯಾರ್ಕ್ ಮೂಲದ ಕಂಪನಿಯು ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಲು ಬಯಸಿದೆ ಎಂದು ಹೇಳಿತ್ತು.

ನಂತರ, ರೈತರ ಹಕ್ಕುಗಳ ಹೋರಾಟಗಾರ್ತಿ ಕವಿತಾ ಕುರುಗಂಟಿ, ಪೆಪ್ಸಿಕೋದ ಎಫ್‌ಸಿ5 ಆಲೂಗಡ್ಡೆ ಪ್ರಭೇದಕ್ಕೆ ನೀಡಲಾದ ಬೌದ್ಧಿಕ ರಕ್ಷಣೆಯನ್ನು ರದ್ದುಗೊಳಿಸುವಂತೆ ಪಿಪಿವಿಎಫ್ಆರ್ ಪ್ರಾಧಿಕಾರಕ್ಕೆ ಮನವಿ ಮಾಡಿದರು. ಭಾರತದ ನಿಯಮಗಳು ಬೀಜ ತಳಿಗಳ ಮೇಲಿನ ಪೇಟೆಂಟ್‌ಗೆ ಅನುಮತಿಸುವುದಿಲ್ಲ ಎಂದು ಹೇಳಿದ್ದರು.

ಬೀಜದ ಮೇಲೆ ಪೇಟೆಂಟ್‌ ಇಲ್ಲ : ಬೀಜ ವೈವಿಧ್ಯದ ಮೇಲೆ ಪೆಪ್ಸಿಕೋ ಪೇಟೆಂಟ್ ಪಡೆಯಲು ಸಾಧ್ಯವಿಲ್ಲ ಎಂಬ ಕುರುಗಂಟಿಯವರ ವಾದವನ್ನು ಪಿಪಿವಿಎಫ್‌ಆರ್‌ ಪ್ರಾಧಿಕಾರವು ಒಪ್ಪಿಕೊಂಡಿದೆ. ಇನ್ನು, ಪಿಪಿವಿಎಫ್‌ಆರ್‌ನ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಪೆಪ್ಸಿಕೋ ಕಂಪನಿ, ಆದೇಶದ ಬಗ್ಗೆ ಮಾಹಿತಿ ತಿಳಿದಿದ್ದು, ಪರಿಶೀಲನೆ ಪ್ರಕ್ರಿಯೆಯಲ್ಲಿದೆ ಎಂದು ಹೇಳಿದೆ.

ಪೆಪ್ಸಿಕೋ ಎಫ್‌ಸಿ5 ವಿಧದ ಆಲೂಗಡ್ಡೆಯನ್ನು ಅಭಿವೃದ್ಧಿಪಡಿಸಿದೆ. 2016ರಲ್ಲಿ ಇದರ ನೋಂದಣಿ ಮಾಡಿರುವುದಾಗಿ ಸಮರ್ಥಿಸಿಕೊಂಡಿದೆ. 1989 ರಲ್ಲಿ ಭಾರತದಲ್ಲಿ ತನ್ನ ಮೊದಲ ಆಲೂಗಡ್ಡೆ ಚಿಪ್ಸ್ ಸ್ಥಾವರವನ್ನು ಸ್ಥಾಪಿಸಿದ ಕಂಪನಿಯು ಎಫ್‌ಸಿ5 ಬೀಜದ ವಿಧವನ್ನು ರೈತರಿಗೆ ಪೂರೈಸುತ್ತದೆ. ಅವರು ತಮ್ಮ ಉತ್ಪನ್ನಗಳನ್ನು ಕಂಪನಿಗೆ ನಿಗದಿತ ಬೆಲೆಗೆ ಮಾರಾಟ ಮಾಡುತ್ತಾರೆ.

ಪಿಪಿವಿಎಫ್‌ಆರ್‌ ಪ್ರಾಧಿಕಾರದ ತೀರ್ಪನ್ನು ಶ್ಲಾಘಿಸಿರುವ ಗುಜರಾತ್‌ನ ಆಲೂಗಡ್ಡೆ ರೈತರು, ಇದು ಬೆಳೆಗಾರರ ​​ವಿಜಯ ಎಂದಿದ್ದಾರೆ. ಈ ಆದೇಶವು ಭಾರತದ ರೈತರಿಗೆ ದೊಡ್ಡ ವಿಜಯವಾಗಿದೆ.

ಯಾವುದೇ ಬೆಳೆಗಳನ್ನು ಬೆಳೆಯುವ ಅವರ ಹಕ್ಕಿಗೆ ಬಲ ನೀಡಿದೆ ಎಂದು 2019ರಲ್ಲಿ ಪೆಪ್ಸಿಕೋ ವಿರುದ್ಧ ಕೇಸ್‌ ದಾಖಲಿಸಿರುವ ಗುಜರಾತ್ ಮೂಲದ ರೈತರಲ್ಲಿ ಒಬ್ಬರಾದ ಬಿಪಿನ್ ಪಟೇಲ್ ಹೇಳಿದ್ದಾರೆ.

ಇದನ್ನೂ ಓದಿ: ರೈತರು ಸ್ಮಾರ್ಟ್​​ಫೋನ್​​ ಖರೀದಿಸಲು ಗುಜರಾತ್​ ಸರ್ಕಾರದಿಂದ ಆರ್ಥಿಕ ನೆರವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.