ETV Bharat / bharat

3 ಹೆಕ್ಟೇರ್ ಜಾಗದಲ್ಲಿ ಹರಡಿದೆ ‘ಆಲದವನ’..ಅಳಿವಿನಂಚಿನಲ್ಲಿ ಶತಮಾನಕ್ಕೂ ಹಿಂದಿನ ಬೃಹತ್​ ಮರಗಳು - ಜಿಲ್ಲಾಧಿಕಾರಿ

ಮಧ್ಯಪ್ರದೇಶದ ನೀಮುಚ್​​ ಜಿಲ್ಲೆಯಲ್ಲಿರುವ ಆಲದ ವನ ಶತಮಾನದ ಇತಿಹಾಸ ಹೊಂದಿದೆ. ಸುಮಾರು 3 ಹೆಕ್ಟೇರ್ ಜಾಗದಲ್ಲಿ ಈ ವನ ಆವರಿಸಿದ್ದು, ಇದೀಗ ಬೃಹತ್ ಆಲದ ಮರಗಳ ಕ್ಷೀಣಿಸುತ್ತಾ ಸಾಗಿವೆ.

Big Banyan trees Spread over 3 hectares from last decades
3 ಹೆಕ್ಟೇರ್ ಜಾಗದಲ್ಲಿ ಹರಡಿದೆ ‘ಆಲದವನ’.
author img

By

Published : Jun 30, 2021, 5:54 AM IST

ನೀಮುಚ್ (ಮಧ್ಯಪ್ರದೇಶ): ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಿಂದ 15 ಕಿ.ಮೀಟರ್ ದೂರ ಸಾಗಿದರೆ ಸಿಗುವ ಥಾಡೋಡ್ ಗ್ರಾಮ ವಿಶೇಷ ಆಲದ ಮರಗಳಿಂದ ಪ್ರಸಿದ್ಧಿ ಪಡೆದಿದೆ. ಶತಮಾನಗಳಷ್ಟು ಹಳೆಯ ಆಲದ ಮರಗಳು ಈ ಗ್ರಾಮದಲ್ಲಿದ್ದು, ಇಡೀ ಭೂ ಪ್ರದೇಶ ಹಸಿರಿನಿಂದ ಕೂಡಿದೆ. ಸುಮಾರು 3 ಹೆಕ್ಟೇರ್ ಪ್ರದೇಶದಲ್ಲಿ ಆಲದ ಮರಗಳು ಹರಡಿಕೊಂಡಿದ್ದು, ಈ ಮರಗಳು ಎಷ್ಟು ವರ್ಷ ಹಳೆಯವು ಎಂಬುದು ನಿಖರವಾಗಿ ತಿಳಿದು ಬಂದಿಲ್ಲ.

ಕಾಲಚಕ್ರ ಉರುಳಿದಂತೆ ಈ ಆಲದ ಮರಗಳು ಹಳೇಯದಾಗುತ್ತಾ ಬಂದಿವೆ. ಈಗ ಈ ಮರಗಳು ಮುರಿದು ಬೀಳುವ ಹಂತಕ್ಕೂ ತಲುಪಿವೆ. ಕೆಲವು ಮರಗಳ ಬೇರುಗಳು ದುರ್ಬಲವಾಗಿದ್ದು, ಮಣ್ಣಿನಿಂದ ಮೇಲೆದ್ದು ಬರುತ್ತಿವೆ. ವಿಶೇಷ ಅಂದರೆ ಈ ಮರಗಳ ನೆರಳಿನಲ್ಲಿಯೇ ಹಜರಾತ್​ ಗಾಲಿಬ್ ಷಾ ಬಾಬಾರ ದರ್ಗಾ ಕೂಡ ಇದೆ.

ಅಳಿವಿನಂಚಿನಲ್ಲಿ ಶತಮಾನಕ್ಕೂ ಹಿಂದಿನ ಬೃಹತ್​ ಮರಗಳು

ಈ ಆಲದ ಮರದ ಕೆಳಗಿರುವ ದರ್ಗಾದಲ್ಲಿ ಹಿಂದೂಗಳು ಸಹ ಪ್ರಾರ್ಥಿಸುತ್ತಾರೆ. ಹೀಗಾಗಿ ಈ ದರ್ಗಾಕ್ಕೆ ವಿಶೇಷ ಪ್ರಾಮುಖ್ಯತೆ ಇದ್ದು, ದೂರದ ಊರಿನಿಂದಲೂ ಇಲ್ಲಿಗೆ ಪ್ರಾರ್ಥನೆ ಮಾಡುವುದಕ್ಕೆ ಅಂತಾ ಜನರು ಆಗಮಿಸುತ್ತಾರೆ. ಈ ಮರಗಳ ರಕ್ಷಣೆಯ ಕಾರ್ಯ ಅರಣ್ಯ ಅಧಿಕಾರಿಗಳ ಜವಾಬ್ದಾರಿಯಾಗಿತ್ತು. ಆದರೆ, ಕಳೆದ 10 ವರ್ಷಗಳಿಂದ ಮರಗಳ ರಕ್ಷಣೆಯ ಕಡೆ ಇಲಾಖೆ ಗಮನಹರಿಸಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಗ್ರಾಮಸ್ಥರ ಪ್ರಕಾರ, ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿ ಮನೋಜ್ ಪುಷ್ಪ್ ಗ್ರಾಮಕ್ಕೆ ಪ್ರವಾಸ ಕೈಗೊಂಡಾಗ ಈ ಮರಗಳ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಅಪರೂಪದ ಆಲದ ಮರಗಳ ರಕ್ಷಣೆಗೆ ಮುಂದಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಈ ಮರಗಳಿಗೆ ಅತ್ಯಧಿಕ ನೀರಿನ ಅವಶ್ಯಕತೆ ಇದೆ ಹೀಗಾಗಿ ಮರದ ಸುತ್ತಲೂ ಮಣ್ಣು ಹಾಕಿ ತೇವಾಂಶ ಕಾಪಾಡುವಂತೆ ಮಾಡಲಾಗುತ್ತದೆ. ಇದೀಗ ಶತಮಾನಗಳ ಹಿಂದಿನ ಮರಗಳ ಸಂರಕ್ಷಣೆಗೆ ಸ್ಥಳೀಯರೇ ಕೈಜೋಡಿಸಿದ್ದು, ಈ ಆಲದ ವನ ಕಾಪಾಡಲು ಪಣ ತೊಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.