ಸಹರಾನ್‌ಪುರ: ಉತ್ತರಪ್ರದೇಶದ ಸಹರಾನ್‌ಪುರ ಜಿಲ್ಲೆಯ ಕೊತ್ವಾಲಿ ದೇಹತ್ ಪ್ರದೇಶದಲ್ಲಿ ಬುಧವಾರ ಭೀಕರ ಅಪಘಾತ ಸಂಭವಿಸಿದೆ. ಬಂಡ್ಕಿ ಗ್ರಾಮದ ಬಳಿ ಧಮೋಲಾ ನದಿಗೆ ಟ್ರ್ಯಾಕ್ಟರ್ ಪಲ್ಟಿಯಾಗಿ 9 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ. ಟ್ರಾಲಿಯಲ್ಲಿ 50ಕ್ಕೂ ಹೆಚ್ಚು ಭಕ್ತರಿದ್ದರು. ಮೃತ ದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಇದೇ ವೇಳೆ, ಸರ್ಕಾರ ಮೃತ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
-
#SaharanpurPolice #निरीक्षण_घटनास्थल
— Saharanpur Police (@saharanpurpol) August 23, 2023 " class="align-text-top noRightClick twitterSection" data="
➡#थाना_कोतवाली_देहात क्षेत्रांतर्गत ग्राम बुंदकी के पास ट्रैक्टर ट्रॉली पलटने की सूचना पर #DM_सहारनपुर व #SSP_सहारनपुर द्वारा स्वयं घटनास्थल का #निरीक्षण किया गया एवं सम्बन्धित को आवश्यक दिशा निर्देश दिये गये।#UPPolice @digsaharanpur pic.twitter.com/6MQRPjnb6c
">#SaharanpurPolice #निरीक्षण_घटनास्थल
— Saharanpur Police (@saharanpurpol) August 23, 2023
➡#थाना_कोतवाली_देहात क्षेत्रांतर्गत ग्राम बुंदकी के पास ट्रैक्टर ट्रॉली पलटने की सूचना पर #DM_सहारनपुर व #SSP_सहारनपुर द्वारा स्वयं घटनास्थल का #निरीक्षण किया गया एवं सम्बन्धित को आवश्यक दिशा निर्देश दिये गये।#UPPolice @digsaharanpur pic.twitter.com/6MQRPjnb6c#SaharanpurPolice #निरीक्षण_घटनास्थल
— Saharanpur Police (@saharanpurpol) August 23, 2023
➡#थाना_कोतवाली_देहात क्षेत्रांतर्गत ग्राम बुंदकी के पास ट्रैक्टर ट्रॉली पलटने की सूचना पर #DM_सहारनपुर व #SSP_सहारनपुर द्वारा स्वयं घटनास्थल का #निरीक्षण किया गया एवं सम्बन्धित को आवश्यक दिशा निर्देश दिये गये।#UPPolice @digsaharanpur pic.twitter.com/6MQRPjnb6c
ಸಹರಾನ್‌ಪುರದಲ್ಲಿ ಜಹರವೀರ್ ಗೋಗಾ ಪೂಜೆ ನಡೆಯುತ್ತಿದೆದ್ದು, ಅಲ್ಲಿಗೆ 50 ಭಕ್ತರಿದ್ದ ಟ್ರ್ಯಾಕ್ಟರ್ ತೆರಳುತ್ತಿತ್ತು. ಧಮೋಲಾ ನದಿ ದಡದಲ್ಲಿ ಹೋಗುತ್ತಿದ್ದಾಗ ಅಚಾನಕ್ಕಾಗಿ ಅದರ ಟ್ರಾಲಿ ನದಿಗೆ ಜಾರಿ ಬಿದ್ದಿದೆ. ಇದರಿಂದ ಅಷ್ಟೂ ಜನರು ನದಿ ನೀರಿನಲ್ಲಿ ಮುಳುಗಿದ್ದಾರೆ. ಕೆಲವರು ಈಜಿ ದಡ ಸೇರಿ ಜೀವ ಉಳಿಸಿಕೊಂಡಿದ್ದರೆ. ಇನ್ನೂ ಕೆಲವರು ಟ್ರಾಲಿ ಒಳಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ನಾಪತ್ತೆಯಾದವರ ಹುಡುಕಾಟ: ಅಪಘಾತದಲ್ಲಿ ಭಕ್ತರು ಟ್ರ್ಯಾಕ್ಟರ್ ಟ್ರಾಲಿಯಡಿ ಸಿಲುಕಿದ್ದರು. ಕಿರುಚಾಟ ಕೇಳಿ ಗ್ರಾಮಸ್ಥರು ಸ್ಥಳದಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಕೆಲವು ಭಕ್ತರನ್ನು ಜನರು ನದಿ ನೀರಿನಿಂದ ರಕ್ಷಿಸಿದ್ದಾರೆ. ಬಾಲಕಿ, ಮಹಿಳೆ ಸೇರಿದಂತೆ ನಾಲ್ವರು ಶವವಾಗಿ ಪತ್ತೆಯಾಗಿದ್ದರು. ಗಾಯಗೊಂಡ ಭಕ್ತರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಈಜುಗಾರರನ್ನು ಮುಳುಗು ತಜ್ಞರನ್ನು ಕರೆಯಿಸಿ ನಾಪತ್ತೆಯಾದವರ ಪತ್ತೆಗೆ ಹುಡುಕಾಟ ನಡೆಸಲಾಗಿದೆ.
ಘಟನೆಯ ಬಗ್ಗೆ ಪೊಲೀಸರು ಜಿಲ್ಲೆಯ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಪಘಾತದ ಮಾಹಿತಿ ಮೇರೆಗೆ ಡಿಎಂ ಡಾ.ದಿನೇಶ್ ಚಂದ್ರ ಮತ್ತು ಎಸ್‌ಎಸ್‌ಪಿ ಡಾ.ವಿಪಿನ್ ರಕ್ಷಣಾ ತಂಡದೊಂದಿಗೆ ಘಟನಾ ಸ್ಥಳಕ್ಕೆ ತಲುಪಿದ್ದಾರೆ.
ಬುಧವಾರ ಬೆಳಗ್ಗೆ ಮಳೆ ಸುರಿದ ಕಾರಣ ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದೆ. ಟ್ರ್ಯಾಕ್ಟರ್ನಲ್ಲಿ ಹೋಗುತ್ತಿದ್ದಾಗ ನದಿ ಮಧ್ಯೆ ಟ್ರಾಕ್ಟರ್ ಚಾಲಕನಿಂದ ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆ ಟ್ರಾಲಿ ನದಿ ಮಧ್ಯೆ ಬಿದ್ದಿದೆ. ಬುಧವಾರ ನಾಲ್ಕು ಶವಗಳು ಪತ್ತೆಯಾಗಿದ್ದವು. ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಮತ್ತೆ ಐದು ಶವಗಳು ಪತ್ತೆಯಾಗಿವೆ. ಹೀಗಾಗಿ ಸಾವಿನ ಸಂಖ್ಯೆ 9 ಕ್ಕೆ ಏರಿದೆ. ಅಪಘಾತದಲ್ಲಿ ಮೃತಪಟ್ಟವರು ಬಿಲಾಲ್ ಖೇಡಿ ಗ್ರಾಮಸ್ಥರು ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಸರ್ಕಾರದಿಂದ ಪರಿಹಾರ ಘೋಷಣೆ: ದುರಂತದ ಬಗ್ಗೆ ತಿಳಿದ ಸಿಎಂ ಯೋಗಿ ಆದಿತ್ಯನಾಥ್ ಅವರು ತೀವ್ರ ಸಂತಾಪ ಸೂಚಿಸಿ, ಮೃತ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಮುಳುಗು ತಜ್ಞರನ್ನು ಕರೆಯಿಸಿ ನಾಪತ್ತೆಯಾದವರ ಪತ್ತೆಗೆ ಸೂಚಿಸಲಾಗಿದೆ.
ಇದನ್ನೂ ಓದಿ: Watch.. ಹಿಮಾಚಲಪ್ರದೇಶದಲ್ಲಿ ಭೂಕುಸಿತಕ್ಕೆ 10 ಮನೆಗಳು ನಾಶ: ರಸ್ತೆ ಹಾನಿಯಾಗಿ 10 ಕಿಮೀ ಉದ್ದ ಟ್ರಾಫಿಕ್ ಜಾಮ್!