ಗಾಂಧಿನಗರ(ಗುಜರಾತ್): ವಿಜಯ್ ರೂಪಾನಿ ಹಠಾತ್ ರಾಜೀನಾಮೆಯಿಂದ ತೆರವಾಗಿದ್ದ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ಭೂಪೇಂದ್ರ ಪಟೇಲ್ ಸೆಪ್ಟೆಂಬರ್ 13ರಂದು ಪದಗ್ರಹಣ ಮಾಡಿದ್ದರು. ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ 59 ವರ್ಷದ ಪಟೇಲ್ ರಾಜ್ಯದ 17ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಮಾಹಿತಿಯ ಪ್ರಕಾರ, ಇಂದು ಸಚಿವ ಸಂಪುಟ ವಿಸ್ತರಿಸಲಿದ್ದಾರೆ, 10 ಮಂತ್ರಿಗಳನ್ನು ತಮ್ಮ ಸಂಪುಟದಲ್ಲಿ ಸೇರಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಅನೇಕ ಹಳೆಯ ಮತ್ತು ಹಿರಿಯ ಮಂತ್ರಿಗಳನ್ನು ಬಿಟ್ಟು ಹೊಸಬರಿಗೆ ಅವಕಾಶ ನೀಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಪಕ್ಷವು ಎಲ್ಲ ಸಮುದಾಯಗಳಿಗೆ ಸರಿಯಾದ ಪ್ರಾತಿನಿಧ್ಯ ನೀಡಲು ಪ್ರಯತ್ನಿಸುತ್ತಿದೆ. ಆದರೆ, ಯಾರಿಗೆ ಸ್ಥಾನ ಸಿಗುತ್ತದೆ ಮತ್ತು ಯಾರನ್ನು ಕೈ ಬಿಡಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: ಇಂಜಿನಿಯರ್ಸ್ ಡೇ..: ಅಗ್ರಮಾನ್ಯ ತಂತ್ರಜ್ಞ ವಿಶ್ವೇಶ್ವರಯ್ಯ ಸ್ಮರಣೆ... ಶುಭಕೋರಿದ ಪಿಎಂ
ಗುಜರಾತ್‌ನ ಹೊಸ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಸೋಮವಾರ ಅಧಿಕಾರ ಸ್ವೀಕರಿಸಿದ್ದರು. ಈ ಅವಧಿಯಲ್ಲಿ ಯಾರಿಗೆ ಸಚಿವ ಸ್ಥಾನ ನೀಡಲಾಗುವುದು ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ, ರಾಜ್ಯದ ವಕ್ತಾರರು ಹೊಸ ಸಚಿವರ ಹೆಸರಿನಲ್ಲಿ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದ್ದರು. ಶಾಸಕರನ್ನು ಗಾಂಧಿನಗರಕ್ಕೆ ಬರುವಂತೆ ಬಿಜೆಪಿ ಆದೇಶಿಸಿದ್ದು, ಶಾಸಕರು ಬಂದಿದ್ದಾರೆ.