ಭೋಪಾಲ್: ವಿಚಿತ್ರ ಪ್ರಕರಣವೊಂದರಲ್ಲಿ, ಮಧ್ಯಪ್ರದೇಶದ ಭೋಪಾಲ್‌ನ ಮಹಿಳೆಯೊಬ್ಬರು ಪತಿ ತನಗಿಂತ ಚುರುಕಾಗಿದ್ದೇನೆಂದು ಚುಡಾಯಿಸುವ ಕಾರಣ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
30 ವರ್ಷಗಳಿಂದ ದಾಂಪತ್ಯ ಜೀವನ ನಡೆಸಿದ ದಂಪತಿ ಈಗ ಮೂರು ವರ್ಷಗಳಿಂದ ಕೌನ್ಸೆಲಿಂಗ್‌ನಲ್ಲಿದ್ದಾರೆ. ಇನ್ನೂ ಪರಸ್ಪರ ಸಾಮರಸ್ಯದ ಜೀವನ ನಡೆಸುತ್ತಿಲ್ಲ. ಪತಿ ಸರ್ಕಾರಿ ನೌಕರ ಮತ್ತು ಹೆಂಡತಿ ಉದ್ಯಮಿಯಾಗಿದ್ದು, ಇವರಿಗೆ ಮೂವರು ಮಕ್ಕಳಿದ್ದಾರೆ.
ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರ ಪತಿ ಅರ್ಜಿಯನ್ನು ಹಿಂಪಡೆಯುವಂತೆ ಕೇಳುತ್ತಿದ್ದಾರೆ. ಪತ್ನಿ ಇದಕ್ಕೆ ಒಪ್ಪುತ್ತಿಲ್ಲ. ಪತಿ ತನ್ನನ್ನು ತಾನು ತುಂಬಾ ಸ್ಮಾರ್ಟ್ ಎಂದು ಪರಿಗಣಿಸಿಕೊಂಡಿದ್ದಾರೆ. ಹಾಗಾದರೆ ಅವನು ನನಗಿಂತ ಚುರುಕಾಗಿರಲು ಹೇಗೆ ಸಾಧ್ಯ? ನಾವಿಬ್ಬರೂ ಸಮಾನರು ಎಂದು ಪತ್ನಿ ವಾದಿಸುತ್ತಾರೆಂದು ಕೌನ್ಸಿಲರ್ ಶೈಲ್ ಅವಸ್ಥಿ ಹೇಳಿದರು.