ಭೋಪಾಲ್, ಮಧ್ಯಪ್ರದೇಶ: ಮಧ್ಯಪ್ರದೇಶ ವಿಧಾನಸಭೆ 2023ರಲ್ಲಿ ಚುನಾವಣೆ ನಡೆಯಲಿದೆ. ಹಾಗಾಗಿ ಈ ಚುನಾವಣೆ ಅಖಾಡ ಈಗಿನಿಂದಲೇ ರಂಗು ಪಡೆದುಕೊಂಡಿದೆ. ದಿನಕ್ಕೊಂದು ವಿಚಾರದಲ್ಲಿ ರಾಜಕೀಯ ಗಲಾಟೆಗಳು ಹೆಚ್ಚಾಗುತ್ತಲೇ ಇವೆ. ಈಗ ಬಿಜೆಪಿಯ ರಾಜವರ್ಧನ್ ಸಿಂಗ್ ಹೆಸರಿನಲ್ಲಿ ಹೊಸ ವಿವಾದವೊಂದು ಮುನ್ನೆಲೆಗೆ ಬಂದಿದೆ.
ಹೌದು, ನಿನ್ನೆ ಯುವತಿಯೊಬ್ಬಳು ರಾಜ್ಯ ಕೈಗಾರಿಕಾ ಸಚಿವ ರಾಜವರ್ಧನ್ ಸಿಂಗ್ ದತ್ತಿಗಾಂವ್ ಅವರನ್ನು ಅತ್ಯಾಚಾರಿ ಎಂದು ಆರೋಪಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಈಗ ಅದೇ ಯುವತಿ ಮತ್ತೊಂದು ವಿಡಿಯೋ ಹರಿಯಬಿಟ್ಟು, ಹಿಂದಿನ ವಿಡಿಯೋದಲ್ಲಿನ ಆರೋಪವನ್ನು ಅಲ್ಲಗಳೆದು ಅಚ್ಚರಿ ಮೂಡಿಸಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನಕಲಿಯಾಗಿದೆ. ನನಗೂ ಮತ್ತು ಸಚಿವ ದತ್ತಿಗಾಂವ್‌ಗೂ ಯಾವುದೇ ಸಂಬಂಧವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುವ ವಿಡಿಯೋ ನನ್ನದಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಈ ಯುವತಿ ಸಚಿವರಿಗೆ ಪತ್ರವನ್ನೂ ಬರೆದಿದ್ದಾಳೆ.
ವಿಡಿಯೋ ಹರಡಿದವರ ವಿರುದ್ಧ ಕಾನೂನು ಕ್ರಮ: ಈ ವಿಡಿಯೋವನ್ನು ಹರಿಬಿಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಯುವತಿ ಹೇಳಿದ್ದಾಳೆ. ನಿನ್ನೆ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿ, ರಾಜವರ್ಧನ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿ ಅವರೊಬ್ಬ ಅತ್ಯಾಚಾರಿ ಎಂದು ಹೇಳಿದ್ದಳು. ಅಷ್ಟೇ ಅಲ್ಲ ಅಲ್ಲಿದ್ದ ಹೋಟೆಲ್ ಸಿಬ್ಬಂದಿಯೊಂದಿಗೂ ಅನುಚಿತವಾಗಿ ವರ್ತಿಸಿದ್ರು. ಈ ವಿಡಿಯೋ ವೈರಲ್ ಆದ ನಂತರ ಮಧ್ಯಪ್ರದೇಶದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿತ್ತು.
ಈಟಿವಿ ಭಾರತ್‌ಗೆ ಸಂದೇಶ ರವಾನಿಸಿದ ಸಚಿವ: ಈ ಸಂಬಂಧ ಸಚಿವ ರಾಜವರ್ಧನ್ ಸಿಂಗ್ ದತ್ತಿಗಾಂವ್ ಅವರೊಂದಿಗೆ ಈಟಿವಿ ಭಾರತ ವರದಿಗಾರರು ಮಾತನಾಡಲು ಯತ್ನಿಸಿದಾಗ ಅವರು ಮಾತನಾಡದೇ ಮೊಬೈಲ್‌ನಲ್ಲಿ ಸಂದೇಶ ನೀಡಿದ್ದಾರೆ. ಯುವತಿ ಪತ್ರ ಬರೆದು ಕೊಟ್ಟಿದ್ದಾರೆ. ಯುವತಿಯೇ ಮತ್ತೊಂದು ವಿಡಿಯೋದಲ್ಲಿ ವಿವರಣೆ ನೀಡಿದ್ದು, ಇದರಲ್ಲಿ ನಾನೇನೂ ಹೇಳಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ.
ಇದನ್ನು ಓದಿ: ಬಿಹಾರದ ಛಾಪ್ರಾ ನಕಲಿ ಮದ್ಯ ಪ್ರಕರಣ; ಡಿಎಸ್‌ಪಿ, ಎಸ್‌ಎಚ್‌ಒ ಅಮಾನತು.. ತನಿಖೆಗೆ ಆದೇಶ