ETV Bharat / bharat

ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕೋವಿಡ್​ ಮೃತರ ಸಂಖ್ಯೆ 20 ಲಕ್ಷದ ಗಡಿ ತಲುಪಲಿದೆ: WHO ಎಚ್ಚರಿಕೆ - ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಪ್ರಪಂಚದಲ್ಲಿ ಬರೋಬ್ಬರಿ 3,41,66,631 ಜನರು ಕೋವಿಡ್​ ಸುಳಿಯಲ್ಲಿ ಸಿಲುಕಿದ್ದು, ಇವರಲ್ಲಿ ಎರಡೂವರೆ ಕೋಟಿಗೂ ಹೆಚ್ಚು (2,54,37,012) ಮಂದಿ ಗುಣಮುಖರಾಗಿದ್ದಾರೆ.

Worldover corona cases and deaths
ಕೋವಿಡ್​
author img

By

Published : Oct 1, 2020, 4:43 PM IST

Updated : Oct 1, 2020, 4:55 PM IST

ಹೈದರಾಬಾದ್​: ಭೂಮಂಡಲದಲ್ಲಿ ಕೊರೊನಾಗೆ 10,18,871 ಜನರು ಬಲಿಯಾಗಿದ್ದಾರೆ. ಸೋಂಕು ಹರಡುವುದನ್ನು ತಡೆಯಲು ಕೋವಿಡ್ ಪೀಡಿತ ರಾಷ್ಟ್ರಗಳು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಸಾವಿನ ಸಂಖ್ಯೆ 2 ಮಿಲಿಯನ್ ಗಡಿ ತಲುಪುವದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ.

ವಿಶ್ವದಲ್ಲಿ ಬರೋಬ್ಬರಿ 3,41,66,631 ಜನರು ಕೋವಿಡ್​ ಸುಳಿಯಲ್ಲಿ ಸಿಲುಕಿದ್ದು, ಇವರಲ್ಲಿ ಎರಡೂವರೆ ಕೋಟಿಗೂ ಹೆಚ್ಚು (2,54,37,012) ಮಂದಿ ಗುಣಮುಖರಾಗಿದ್ದಾರೆ. ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 74,47,693 ಇದ್ದು, ಮೃತರ ಸಂಖ್ಯೆ 2,11,752ಕ್ಕೆ ಏರಿಕೆಯಾಗಿದೆ.

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಎರಡನೇ ಸ್ಥಾನಕ್ಕೆ ಜಿಗಿದಿರುವ ಭಾರತದಲ್ಲಿ ಸೋಂಕಿತರ ಸಂಖ್ಯೆ 63,12,584 ಹಾಗೂ ಮೃತರ ಸಂಖ್ಯೆ 98,708ಕ್ಕೆ ಏರಿಕೆಯಾಗಿದೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 48,13,586 ಪ್ರಕರಣಗಳು ಹಾಗೂ 1,43,962 ಸಾವುಗಳು ವರದಿಯಾಗಿದೆ. 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 11,76,286 ಕೇಸ್​​ಗಳಿದ್ದು, 20,722 ಜನರು ಸಾವನ್ನಪ್ಪಿದ್ದಾರೆ. ಒಟ್ಟು 188 ರಾಷ್ಟ್ರಗಳು ಕೋವಿಡ್​ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

Last Updated : Oct 1, 2020, 4:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.