ETV Bharat / bharat

ಅಮರಾವತಿ ಅಭಿವೃದ್ಧಿ ಯೋಜನೆ ಕೈ ಬಿಟ್ಟ ವಿಶ್ವಬ್ಯಾಂಕ್ - undefined

ಆಂಧ್ರ ರಾಜಧಾನಿ ಅಮರಾವತಿಯ ಮೂಲ ಸೌಕರ್ಯ ಹಾಗೂ ಸಾಂಸ್ಥಿಕ ಅಭಿವೃದ್ಧಿ ಯೋಜನೆಯನ್ನು ವಿಶ್ವಬ್ಯಾಂಕ್ ಕೈ ಬಿಟ್ಟಿದೆ.

ಅಮರಾವತಿ
author img

By

Published : Jul 19, 2019, 10:02 AM IST

ಅಮರಾವತಿ: ಆಂಧ್ರ ಪ್ರದೇಶ ರಾಜಧಾನಿ ಅಮರಾವತಿಯ ಮೂಲ ಸೌಕರ್ಯ ಹಾಗೂ ಸಾಂಸ್ಥಿಕ ಅಭಿವೃದ್ಧಿ ಯೋಜನೆಯಿಂದ ವಿಶ್ವಬ್ಯಾಂಕ್​ ಹಿಂದೆ ಸರಿದಿದೆ. ಹೀಗಾಗಿ ಅಮರಾವತಿಯ ಅಭಿವೃದ್ಧಿಗೆ ದೊಡ್ಡ ಹಿನ್ನಡೆಯಾದಂತಾಗಿದೆ.

ಅಮರಾವತಿಯ ಅಭಿವೃದ್ಧಿ ಯೋಜನೆಯಿಂದ ಹಿಂದೆ ಸರಿಯಲು ಕಾರಣವೇನೆಂಬುದನ್ನು ವಿಶ್ವ ಬ್ಯಾಂಕ್​ ತಿಳಿಸಿಲ್ಲ. ಆದರೆ ಬ್ಯಾಂಕ್​ನ ಅಧಿಕೃತ ವೆಬ್​ಸೈಟ್​ನಲ್ಲಿ ಈ ಯೋಜನೆಯನ್ನು ಕೈಬಿಟ್ಟಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ವಿಶ್ವಬ್ಯಾಂಕ್​ ಅಧಿಕಾರಿಗಳೂ ಕೂಡ ಯಾವುದೇ ಸ್ಪಷ್ಟನೆ ನೀಡಿಲ್ಲ.

ಮಾಹಿತಿಯ ಪ್ರಕಾರ, ಅಮರಾವತಿಯನ್ನು ಅಭಿವೃದ್ಧಿಪಡಿಸಲು ರೈತರ ಕೃಷಿ ಭೂಮಿಯನ್ನು ಬಲವಂತವಾಗಿ ವಶಕ್ಕೆ ಪಡೆಯಲಾಗಿತ್ತು. ಈ ಬಗ್ಗೆ ರೈತರು ದೂರು ನೀಡಿರುವುದೇ ವಿಶ್ವಬ್ಯಾಂಕ್​ನ ನಡೆಗೆ ಕಾರಣ ಎಂದು ಹೇಳಲಾಗುತ್ತಿದೆ.

World Bank
ವಿಶ್ವಬ್ಯಾಂಕ್ ವೆಬ್​ಸೈಟ್

ಇನ್ನು ಈ ಯೋಜನೆಗೆ ಹಲವಾರು ಎನ್​ಜಿಒಗಳು ಹಾಗೂ ಪರಿಸರವಾದಿಗಳಿಂದಲೂ ಕೂಡ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ತೆಲುಗು ದೇಶಂ ಪಕ್ಷವು ರೈತರಿಂದ ಜಮೀನು ವಶಕ್ಕೆ ಪಡೆದು ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದಕ್ಕೆ ಕೃಷ್ಣಾ ನದಿ ದಡದಲ್ಲಿ ಬೃಹತ್​ ಪ್ರತಿಭಟನೆ ನಡೆದಿತ್ತು.

ಒಟ್ಟಾರೆ ವಿರೋಧಗಳ ನಡುವೆಯೂ ಆರಂಭಗೊಂಡಿದ್ದ ಅಮರಾವತಿ ಅಭಿವೃದ್ಧಿ ಯೋಜನೆಯನ್ನು ವಿಶ್ವ ಬ್ಯಾಂಕ್ ಕೈಬಿಟ್ಟಿರುವುದು ಭಾರೀ ಹೊಡೆತ ಬಿದ್ದಂತಾಗಿದೆ.

Intro:Body:

World Bank has "dropped" out the Amaravati Development Project

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.