ETV Bharat / bharat

ಬಜೆಟ್‌ ಅಧಿವೇಶನ.. ಸಂಸತ್‌ನಲ್ಲಿ ಕೋವಿಡ್‌ ಮುಂಜಾಗ್ರತಾ ಕ್ರಮಗಳು ಹೀಗಿವೆ.. - ಬಜೆಟ್‌ ಅಧಿವೇಶನ- 2021

ಪಾರ್ಲಿಮೆಂಟ್‌ ಹೌಸ್‌ನಲ್ಲಿ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ(ಐಟಿಡಿಸಿ) ನಡೆಸುತ್ತಿರುವ ಕ್ಯಾಟರಿಂಗ್‌ ಸೌಲಭ್ಯವನ್ನು ವೀಕ್ಷಿಸಿದರು. ಈ ವೇಳೆ ಸ್ವಚ್ಛತೆ, ಸಂಸದರಿಗೆ ಪೌಷ್ಠಿಕ ಆಹಾರ ಸೇರಿದಂತೆ ಅಗತ್ಯ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಂಬಂಧ ಪಟ್ಟ ಏಜೆನ್ಸಿಯವರಿಗೆ ಸೂಚಿಸಿದರು. ಬಳಿಕ ಭದ್ರತೆ ಬಗ್ಗೆಯೂ ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ..

Work in unison to contain Covid spread: LS Speaker Birla tells agencies ahead of Budget Session
ಬಜೆಟ್‌ ಅಧಿವೇಶನ; ಸಂಸತ್‌ನಲ್ಲಿ ಕೋವಿಡ್‌ ಮುಂಜಾಗ್ರತಾ ಕ್ರಮಗಳು ಹೇಗಿವೆ ಗೊತ್ತಾ?
author img

By

Published : Jan 23, 2021, 7:52 PM IST

ನವದೆಹಲಿ : ಫೆಬ್ರವರಿ 15ರಿಂದ ಕೇಂದ್ರ ಬಜೆಟ್‌ ಅಧಿವೇಶನ ಆರಂಭವಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಸಲಕ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮತ್ತೊಂದೆಡೆ ಮಹಾಮಾರಿ ಕೋವಿಡ್‌-19 ಭೀತಿ ಹಿನ್ನೆಲೆ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದಾರೆ.

ಮುಂದಿನ ವಾರದಿಂದ ಬಜೆಟ್‌ ಅಧಿವೇಶನ ಆರಂಭವಾಗುತ್ತಿರುವುದರಿಂದ ಕೊರೊನಾ ವೈರಸ್‌ ಸೋಂಕು ತಗಲದಂತೆ ಸಂಸತ್‌ ಒಳಗೆ ಹಾಗೂ ಹೊರಗಡೆ ಸ್ಯಾನಿಟೈಸರ್‌ ಸಿಂಪಡಣೆ ಸೇರಿ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಸ್ಪೀಕರ್ ಬಿರ್ಲಾ ಅವರು ಸಂಬಂಧಿತ ಅಧಿಕಾರಿಗಳಿಗೂ ನಿರ್ದೇಶನ ನೀಡಿದ್ದಾರೆ.

ಇಂದು ಪಾರ್ಲಿಮೆಂಟ್‌ ಹೌಸ್‌ ಕಾಂಪ್ಲೆಕ್ಸ್‌ಗೆ ಸ್ಪೀಕರ್‌ ಭೇಟಿ ನೀಡಿ ಪರಿಶೀಲಿಸಿದರು. ಲೋಕಸಭಾ ಚೇಂಬರ್‌, ಸೆಂಟ್ರಲ್‌ ಹಾಲ್‌, ಕಾರಿಡಾರ್‌, ವಿಶ್ರಾಂತಿ ಕೊಠಡಿಗಳು ಮತ್ತು ಇತರೆ ಪ್ರದೇಶಕ್ಕೂ ಲೋಕಸಭೆಯ ಕಾರ್ಯದರ್ಶಿಗಳು, ಸಿಪಿಡಬ್ಲ್ಯೂಡಿ ಹಾಗೂ ಇತರೆ ವಿಭಾಗದ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿದರು.

ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಕೆ ಹಾಗೂ ಅಧಿವೇಶನದ ವೇಳೆ ಸಂಸತ್‌ ಒಳಗೆ, ಹೊರಗಡೆಯೂ ಸ್ಯಾನಿಟೈಸೇಷನ್‌ ಕಡ್ಡಾಯಗೊಳಿಸಿದ್ದಾರೆ. ಅತ್ಯಂತ ಗುಣಮಟ್ಟದ ಮಾಸ್ಕ್‌, ಸ್ಯಾನಿಟೈಸರ್‌ ಹಾಗೂ ಇತರೆ ಮುಂಜಾಗ್ರತಾ ಉಪಕರಣಗಳನ್ನು ಪಾರ್ಲಿಮೆಂಟ್‌ ಹೌಸ್‌ ಕಾಂಪ್ಲೆಕ್ಸ್‌ನಲ್ಲಿ ಇರುವಂತೆ ನೋಡಿಕೊಳ್ಳಲು ಸೂಚಿಸಿರುವುದಾಗಿ ಸ್ಪೀಕರ್‌ ತಿಳಿಸಿದರು.

ಕೋವಿಡ್‌-19 ಪ್ರೊಟೊಕಾಲ್‌ನಂತೆ ಆರೋಗ್ಯದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಸಂಸತ್‌ ಆವರಣದಲ್ಲೇ ಕೋವಿಡ್‌ ಪರೀಕ್ಷೆಯ ಕೇಂದ್ರಗಳನ್ನು ತೆರಯುವಂತೆ ಸೂಚಿಸಲಾಗಿದೆ. ಸಂಸದರು ಮಾತ್ರವಲ್ಲದೆ, ಕಲಾಪದ ವೇಳೆ ಭಾಗವಹಿಸುವ ಉಭಯ ಸದನಗಳ ಕಾರ್ಯದರ್ಶಿಗಳು ಮತ್ತು ಸಚಿವಾಲಯದ ಅಧಿಕಾರಿಗಳಿಗೂ ಆರ್‌ಟಿ-ಪಿಸಿಆರ್‌ ಮತ್ತು ರ‍್ಯಾಪಿಡ್‌ ಆಂಟಿಜೆನ್‌ ಪರೀಕ್ಷೆಗೊಳಪಡಬೇಕು. ಹೊಸ ಸಂಸತ್‌ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಎಲ್ಲಾ ನೌಕರರು ಮತ್ತು ಕಾರ್ಮಿಕರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಹೇಳಿದರು.

ಪಾರ್ಲಿಮೆಂಟ್‌ ಹೌಸ್‌ನಲ್ಲಿ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ(ಐಟಿಡಿಸಿ) ನಡೆಸುತ್ತಿರುವ ಕ್ಯಾಟರಿಂಗ್‌ ಸೌಲಭ್ಯವನ್ನು ವೀಕ್ಷಿಸಿದರು. ಈ ವೇಳೆ ಸ್ವಚ್ಛತೆ, ಸಂಸದರಿಗೆ ಪೌಷ್ಠಿಕ ಆಹಾರ ಸೇರಿದಂತೆ ಅಗತ್ಯ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಂಬಂಧ ಪಟ್ಟ ಏಜೆನ್ಸಿಯವರಿಗೆ ಸೂಚಿಸಿದರು. ಬಳಿಕ ಭದ್ರತೆ ಬಗ್ಗೆಯೂ ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ.

ಫೆಬ್ರವರಿ 15ರಿಂದ ಮಾರ್ಚ್‌ 18ರವರೆಗೆ ಬಜೆಟ್‌ ಅಧಿವೇಶನ ನಡೆಯಲಿದೆ. ಜನವರಿ 29ರಂದು ಬೆಳಗ್ಗೆ 11 ಗಂಟೆಗೆ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಭಾಷಣ ಮಾಡಲಿದ್ದಾರೆ. ಬೆಳಗ್ಗೆ 9 ರಿಂದ 2 ಗಂಟೆಯವರೆಗೆ ರಾಜ್ಯಸಭೆ ಹಾಗೂ ಮಧ್ಯಾಹ್ನ 4 ಗಂಟೆಯಿಂದ ರಾತ್ರಿ 9ರವರೆಗೆ ಲೋಕಸಭೆ ಕಲಾಪಗಳು ನಡೆಯಲಿವೆ. ಶೂನ್ಯ ಸಮಯ ಮತ್ತು ಪ್ರಶ್ನಾವಳಿಗಳು ಇರಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.