ನವದೆಹಲಿ: ಭದ್ರತೆ ಸಡಿಲಿಕೆ ಮಾಡಿದ ಬಳಿಕ ಕಣಿವೆ ರಾಜ್ಯ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆಯೊಂದನ್ನು ನೀಡಿದೆ.
ಸಹಜ ಜನ-ಜೀವನಕ್ಕೆ ಅಡ್ಡಿ ಉಂಟು ಮಾಡುವ ಯಾವುದೇ ಆದೇಶಗಳನ್ನು ಹೊರಡಿಸಬಾರದು ಎಂದು ಸರ್ವೋಚ್ಛ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಜಮ್ಮು ಕಾಶ್ಮೀರದಲ್ಲಿ ಹೇರಿಕೆ ಮಾಡಿರುವ ಕರ್ಫ್ಯೂ ಹಿಂಪಡೆಯಬೇಕು ಎಂದು ತೆಹ್ಸೀನ್ ಪೂನಾವಲ್ಲ ಎನ್ನುವವವರು ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೇಂದ್ರಕ್ಕೆ ಸೂಚನೆ ನೀಡಿದೆ.
ಜಮ್ಮು ಕಾಶ್ಮೀರದ ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಿದ್ದು, ಹಂತ-ಹಂತವಾಗಿ ಭದ್ರತೆಯನ್ನು ಸಡಿಲಿಕೆ ಮಾಡುವುದಾಗಿ ಅರ್ಜಿ ವಿಚಾರಣೆ ವೇಳೆ ಕೇಂದ್ರ, ಕೋರ್ಟ್ಗೆ ಹೇಳಿದೆ. ಈ ಅರ್ಜಿ ವಿಚಾರಣೆಯನ್ನಯ ಸುಪ್ರೀಂ ಎರಡು ವಾರಗಳ ಕಾಲ ಮುಂದೂಡಿಕೆ ಮಾಡಿದೆ.