ETV Bharat / bharat

ಯುಪಿ: ಚಲಿಸುತ್ತಿದ್ದ ವಾಹನದಲ್ಲಿ ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನ, ರಸ್ತೆಯಲ್ಲೇ ಹೊರಗೆಸೆದು ದುಷ್ಕೃತ್ಯ! - ಮಹಿಳೆ ಮೇಲೆ ಅತ್ಯಾಚಾರ ಯತ್ನ

ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ಹಥ್ರಾಸ್​ನಲ್ಲಿ ನಡೆದ ಸಾಮೂಹಿಕ​ ಹತ್ಯಾಚಾರಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದರ ನಡುವೆ ಚಲಿಸುತ್ತಿದ್ದ ವಾಹನದಲ್ಲೇ ಮಹಿಳೆಯ ಮೇಲೆ ಇಬ್ಬರು ಅತ್ಯಾಚಾರಕ್ಕೆ ಯತ್ನಿಸಿ, ಬಳಿಕ ರಸ್ತೆಬದಿ ಎಸೆದು ದುಷ್ಕೃತ್ಯ ಮೆರೆದಿದ್ದಾರೆ.

woman-thrown-on-lucknow-agra-expressway-after-failed-attempt-of-rape
ಅತ್ಯಾಚಾರಕ್ಕೆ ಯತ್ನ
author img

By

Published : Oct 10, 2020, 1:50 AM IST

Updated : Oct 10, 2020, 2:23 AM IST

ಉನ್ನಾವೊ: ಸೋದರ ಸಂಬಂಧಿಯೋರ್ವ ಸ್ನೇಹಿತನೊಂದಿಗೆ ಸೇರಿಕೊಂಡು ಚಲಿಸುತ್ತಿದ್ದ ವಾಹನದಲ್ಲೇ ತನ್ನ ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ.

ಮಹಿಳೆಯು ಲಖನೌ ನಗರದ ನಿವಾಸಿಯಾಗಿದ್ದು, ಲಖನೌ ಜಿಲ್ಲೆಯ ರಹೀಮಾಬಾದ್ ಪಟ್ಟಣದ ಆರೋಪಿ ಸೋದರ ಸಂಬಂಧಿ ಅವಳ ಮನೆಗೆ ಬಂದಿದ್ದ. ತಾನೊಂದು ಜಮೀನು ಖರೀದಿಸಿದ್ದೇನೆ, ಆದರೆ ತನಗೆ ಓದಲು ಬರುವುದಿಲ್ಲ. ಹೀಗಾಗಿ ಜಮೀನು ಪತ್ರ ಪಡೆಯುವ ಸಂದರ್ಭದಲ್ಲಿ ನೀನು ತಮ್ಮ ಜೊತೆಗೆ ಇರುವಂತೆ ಚಿಕ್ಕಮ್ಮನಿಗೆ ಹೇಳಿ ಆಕೆಯನ್ನು ಪಿಕಪ್​ ವಾಹನದಲ್ಲಿ ಸ್ನೇಹಿತನೊಂದಿಗೆ ಕರೆದುಕೊಂಡು ಹೋಗಿದ್ದಾನೆ.

ಪ್ರಕರಣದ ಬಗ್ಗೆ ಪೊಲೀಸ್​ ವರಿಷ್ಠಾಧಿಕಾರಿ ಪ್ರತಿಕ್ರಿಯೆ

ಬಳಿಕ ಲಖನೌ-ಆಗ್ರಾ ಎಕ್ಸ್‌ಪ್ರೆಸ್‌ವೇ ಬಳಿ ತಲುಪುತ್ತಿದ್ದಂತೆ ಇಬ್ಬರೂ ಮಹಿಳೆ ಮೇಲೆ ಹಲ್ಲೆ ಹಾಗೂ ಕಿರುಕುಳ ನೀಡಲು ಆರಂಭಿಸಿದ್ದಾರೆ. ಮಹಿಳೆ ಕೂಗಿಕೊಂಡಿದ್ದು, ಬೆಹಾಟಾ ಪೊಲೀಸ್ ಠಾಣೆ ಪ್ರದೇಶದ ಶಾದಿಪುರ ಗ್ರಾಮದ ಬಳಿ ಬಂದಾಗ ಕಾರನ್ನು ನಿಲ್ಲಿಸಿ ಅವಳನ್ನು ಕೊಲ್ಲಲು ಯತ್ನಿಸಿದ್ದಾರೆ. ಅಲ್ಲದೆ ಆಕೆಯ ಮುಖ, ಬಾಯಿಗೆ ಕಚ್ಚಿ ಗಾಯಗೊಳಿಸಿದ್ದು, ಇದೇ ಸಂದರ್ಭದಲ್ಲಿ ಗ್ರಾಮಸ್ಥರನ್ನು ಕಂಡ ದುಷ್ಟರು ಮಹಿಳೆಯನ್ನು ಕಾರಿನಿಂದ ಹೊರಗೆಸೆದು ಸ್ಥಳದಿಂದ ಪರಾರಿಯಾಗಿದ್ದರು.

ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ವಶಕ್ಕೆ ಪಡೆದು ಜೈಲಿಗಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ಮಹಿಳೆಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಬಳಿಕ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Last Updated : Oct 10, 2020, 2:23 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.