ಹೈದರಾಬಾದ್: ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮಹಿಳಾ ಟಿಕ್ಕಿಯೊಬ್ಬಳ ಶವ ನಗರದ ರಾಯದುರ್ಗ ಪ್ರದೇಶದ ಹಾಸ್ಟೆಲ್ನಲ್ಲಿ ಪತ್ತೆಯಾಗಿದೆ.
ನಗರದ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಹರಿಣಿ(24) ರಾಯದುರ್ಗದ ಹಾಸ್ಟೆಲ್ ಒಂದರಲ್ಲಿ ವಾಸವಿದ್ದರು. ಪೊಲೀಸರು ತಿಳಿಸಿದ ಮಾಹಿತಿ ಪ್ರಕಾರ ಈಕೆ ಕಂಪನಿಯಲ್ಲಿ ಈ ಮೊದಲು ನಿಭಾಯಿಸುತ್ತಿದ್ದ ಕಾಂಟ್ರಾಕ್ಟ್ ಮುಗಿಯುತ್ತಾ ಬಂದಿದೆಯಂತೆ. ಹೀಗಾಗಿ ಹೊಸ ಕಾಂಟ್ರಾಕ್ಟ್ ಸಿಗುತ್ತೋ ಇಲ್ಲವೋ ಎಂಬ ಭೀತಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ರಾಯದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವವನ್ನು ಪೋಸ್ಟ್ ಮಾರ್ಟಮ್ಗೆ ಕಳಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ರಾಯದುರ್ಗ ಠಾಣೆಯ ವೃತ್ತ ನಿರೀಕ್ಷಕರು ತಿಳಿಸಿದರು.