ETV Bharat / bharat

ಕಾಲ್ನಡಿಗೆಯಲ್ಲೇ 500 ಕಿ.ಮೀ. ದೂರದ ಊರಿಗೆ ತೆರಳುತ್ತಿದ್ದ ಗರ್ಭಿಣಿಗೆ ಎಟಿಎಂ ಬೂತ್​ನಲ್ಲಿ ಹೆರಿಗೆ! - ತಹಶಿಲ್ದಾರ್​ ರೂಪೇಶ್​ ಕುಮಾರ್​ ಸುರಾನ

ಲಾಕ್​ಡೌನ್​ನಿಂದಾಗಿ ವಾಹನಗಳಿಲ್ಲದೆ ತನ್ನೂರಿಗೆ ಕಾಲ್ನಡಿಗೆ ಮೂಲಕ ತೆರಳುತ್ತಿದ್ದ ಮಹಿಳೆಗೆ ಮಾರ್ಗ ಮಧ್ಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಆಕೆಯನ್ನು ಎಟಿಎಂ ಬೂತ್​ಗೆ ಕರೆದೊಯ್ಯಲಾಗಿದ್ದು, ಅಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾಳೆ.

ahamednagar
ಮಹಿಳೆಗೆ ಎಟಿಎಂ ಬೂತ್​ನಲ್ಲೇ ಹೆರಿಗೆ
author img

By

Published : Apr 20, 2020, 5:02 PM IST

ಅಹಮದ್​ನಗರ(ಮಹಾರಾಷ್ಟ್ರ): ಕೊರೊನಾ ವೈರಸ್​ ಹರಡುವ ಭೀತಿಯಿಂದ ದೇಶವನ್ನು ಮೇ 3ರ ವರೆಗೆ ಸಂಪೂರ್ಣ ಲಾಕ್​ಡೌನ್​ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ಜನರು ತಮ್ಮೂರಿಗೆ ಕಾಲ್ನಡಿಗೆ ಮೂಲಕವೇ ತೆರಳುತ್ತಿದ್ದಾರೆ. ಇದೇ ರೀತಿ 500 ಕಿ.ಮೀ. ದೂರದಲ್ಲಿರುವ ತನ್ನೂರಿಗೆ ಕಾಲ್ನಡಿಗೆಯಲ್ಲೇ ತೆರಳುತ್ತಿದ್ದ ಗರ್ಭಿಣಿಯೊಬ್ಬಳಿಗೆ ಎಟಿಎಂ ಬೂತ್​ನಲ್ಲಿ ಹೆರಿಗೆಯಾಗಿದೆ.

ahamednagar
ಮಹಿಳೆಗೆ ಎಟಿಎಂ ಬೂತ್​ನಲ್ಲೇ ಹೆರಿಗೆ

ಪುಣೆಯ ಕೊರೆಗಾಂವ್​ ಭೀಮಾ-ವಾಗೋಲಿಯಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬವೊಂದು ಲಾಕ್​ಡೌನ್ ಸಂದರ್ಭದಲ್ಲಿ 500 ಕಿ.ಮೀ ದೂರವಿರುವ ಯವತ್ಮಾಳ್​​ಗೆ ಔರಂಗಬಾದ್​ ಹೆದ್ದಾರಿ ಮೂಲಕ ಕಾಲ್ನಡಿಗೆಯಲ್ಲಿ ತೆರಳುತ್ತಿತ್ತು. ಈ ವೇಳೆ ಔರಂಗಾಬಾದ್​ ಹೆದ್ದಾರಿ ಬಳಿಯಿರುವ ವಡಲಾ ಬಹಿರೋ ಬಳಿ ತಲುಪುವಾಗ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಆಕೆಯನ್ನು ಪಕ್ಕದಲ್ಲೇ ಇದ್ದ ಎಟಿಎಂ ಬೂತ್​ಗೆ ಕರೆದೊಯ್ಯಲಾಯಿತು. ಇನ್ನು ವಿಷಯ ತಿಳಿದ ತಕ್ಷಣ ಕೆಲ ದಾದಿಯರು ಆಗಮಿಸಿ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಮಹಿಳೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ahamednagar
ಮಹಿಳೆಗೆ ಎಟಿಎಂ ಬೂತ್​ನಲ್ಲೇ ಹೆರಿಗೆ

ಘಟನೆ ತಿಳಿದ ಬಳಿಕ ತಹಶೀಲ್ದಾರ್​ ರೂಪೇಶ್​ ಕುಮಾರ್​ ಸುರಾನ, ತಾಲೂಕು ಆರೋಗ್ಯಾಧಿಕಾರಿ ಅಭಿರಾಜ್​ ಸೂರ್ಯವಂಶಿ ಆಗಮಿಸಿ ಮಹಿಳೆ ಮತ್ತು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.