ETV Bharat / bharat

ಪ್ರೀತಿ ಬಲೆಗೆ ಬಿದ್ದು ಗಂಡ, ಮಕ್ಕಳನ್ನ ಬಿಟ್ಟು ಬಂದ್ಳು, ಈಗ ಪ್ರೇಮಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ನಿರ್ಧಾರ! - ಪ್ರೇಮಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ನಿರ್ಧಾರ

ಮುದ್ದಾದ ಕುಟುಂಬವಿದ್ದರೂ, ಪ್ರೀತಿಯ ಬಲೆಗೆ ಬಿದ್ದ ಯುವತಿ ಇದೀಗ ಆತನಿಂದ ಮೋಸ ಹೋಗಿದ್ದಾಳೆ.

woman fed up with lover
woman fed up with lover
author img

By

Published : Oct 31, 2020, 4:21 AM IST

ಹಿಮಾಚಲ ಪ್ರದೇಶ: ಗಂಡ, ಇಬ್ಬರು ಮಕ್ಕಳಿದ್ದರೂ, ಪ್ರೀತಿಯ ಬಲೆಗೆ ಬಿದ್ದ ಯುವತಿ ಆತನೊಂದಿಗೆ ಸಂಸಾರ ನಡೆಸುವ ಉದ್ದೇಶದಿಂದ ಮನೆಬಿಟ್ಟು ಬಂದಿದ್ದು, ಇದೀಗ ಪ್ರೇಯಸಿ ಕಾಟ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿರುವ ಘಟನೆ ನಡೆದಿದೆ.

ಹಿಮಾಚಲ ಪ್ರದೇಶದ ಪಾವೊಂಟ್​ ಸಾಹಿಬ್​ ಎಂಬಲ್ಲಿ ಈ ಪ್ರಕರಣ ನಡೆದಿದೆ. ಗಂಡ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ಯುವತಿಗೆ ಲೊಕೇಶ್ ಕುಮಾರ್ ಪರಿಚಯವಾಗಿದ್ದಾನೆ. ಈ ವೇಳೆ ಆತನೊಂದಿಗೆ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ. ಅದರ ಜತೆಗೆ ತನ್ನ ಕುಟುಂಬ ಬಿಟ್ಟು ಆತನೊಂದಿಗೆ ಸಂಸಾರ ನಡೆಸಲು ಮನೆಬಿಟ್ಟು ಬಂದಿದ್ದಾಳೆ. ಎರಡು ತಿಂಗಳ ಲೊಕೇಶ್​ನಿಂದಿಗೆ ಜೀವನ ನಡೆಸಿರುವ ಯುವತಿಗೆ ಕಿರುಕುಳ ನೀಡಲು ಮುಂದಾಗಿದ್ದು, ಮನೆಯಿಂದ ಹೊರ ಹಾಕಿದ್ದಾನೆ.

ನೀರಿನ ಟ್ಯಾಂಕ್ ಏರಿದ ಮಹಿಳೆ

ಇದರಿಂದ ಬೇರೆ ದಾರಿ ಕಾಣದೇ ಯುವತಿ 125 ಅಡಿ ಎತ್ತರದ ನೀರಿನ ಟ್ಯಾಂಕ್​​ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಈ ವೇಳೆ ಪೊಲೀಸರು ಆಕೆಯ ಮನವೊಲಿಕೆ ಮಾಡಿ ಅಲ್ಲಿಂದ ಕೆಳಗಿಳಿಸಿದ್ದಾರೆ. ತದನಂತರ ತನ್ನೊಂದಿಗೆ ಆಗಿರುವ ಮೋಸದ ಬಗ್ಗೆ ಮಾಹಿತಿ ನೀಡಿದ್ದಾರೆ.

ಸದ್ಯ ಲೊಕೇಶ್​ನೊಂದಿಗೆ ಆಕೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಯ ಬಂಧನ ಮಾಡಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.